ಹೈದರಾಬಾದ್: ಕೊರೊನಾ ವಿರುದ್ಧದ ಹೋರಾಟಕ್ಕಾಗಿ ದೆಶದಲ್ಲಿ 21 ದಿನ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಎಷ್ಟೋ ಜನ ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಜನರಿಗೆ ಸಹಾಯ ಮಾಡಲು ಜೊಮ್ಯಾಟೋ ಮುಂದಾಗಿದೆ.
ದಿನಗೂಲಿ ನೌಕರರೇ ಹೆಚ್ಚಾಗಿರುವ ಭಾರತದಲ್ಲಿ ಲಾಕ್ಡೌನ್ನಿಂದ ಹಲವು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರಿಗಾಗಿ ಸಂಸ್ಥೆಯು ಒಂದು ನಿಧಿಯನ್ನು ಸ್ಥಾಪಿಸಿದೆ. ಫೀಡಿಂಗ್ ಇಂಡಿಯಾ’ ಎಂದು ಕರೆಯಲ್ಪಡುವ ಈ ಉಪಕ್ರಮವು ಯಶಸ್ವಿಯಾಗಿ ₹6 ಕೋಟಿ ತಗುಲುತ್ತದೆ. ಈ ಅಭಿಯಾನಕ್ಕೆ ಸಹಾಯ ಮಾಡುವವರು ಈ ಸೈಟ್ ಮೂಲಕ ದಾನ ಮಾಡಬಹುದಾಗಿದೆ.
ಈ ವೆಬ್ಸೈಟ್ನಲ್ಲಿ ಹಣವನ್ನು ಹೇಗೆ ಬಳಸುತ್ತದೆ ಎಂಬುದರ ವಿವರವಾದ ಮಾಹಿತಿ ನೀಡಲಾಗುತ್ತದೆ. ಜೊಮ್ಯಾಟೋ ಕಳೆದ ವರ್ಷ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಲಾಭರಹಿತ, ಫೀಡಿಂಗ್ ಇಂಡಿಯಾ ಪ್ರಾರಂಭಿಸಿದೆ. ಈ ಅಭಿಯಾನಕ್ಕಾಗಿ ವಿವಿಧ ಎನ್‌ಜಿಒಗಳೊಂದಿಗೆ ಸಹಭಾಗಿತ್ವ ಹೊಂದಲಾಗಿದೆ. ಖರೀದಿಸಿದ ಕಿಟ್‌ಗಳ ಜವಾಬ್ದಾರಿಯುತ ವಿತರಣೆಯನ್ನೂ ಖಚಿತಪಡಿಸಿಕೊಳ್ಳುತ್ತದೆ.