ನವದೆಹಲಿ: ಕೊರೊನಾ ವೈರಸ್‌ಗೆ ಲಸಿಕೆ ನೀಡುವ ಬಗ್ಗೆ ದೇಶಾದ್ಯಂತ ಜನತೆ ಕಾಯುತ್ತಿದ್ದಾರೆ. ಕೇಂದ್ರ ನೀಡಲಿರುವ ಲಸಿಕೆ ಸುರಕ್ಷಿತವಾಗಿದೆ ಮತ್ತು ದುಷ್ಪರಿಣಾಮಗಳಿಂದ ಮುಕ್ತವಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್) ಮಹಾನಿರ್ದೇಶಕ ಡಾ.ಶೇಖರ್ ಮಾಂಡೆ ಹೇಳಿದ್ದಾರೆ.
ದೇಶಾದ್ಯಂತ ನಾಲ್ಕು ರಾಜ್ಯಗಳಲ್ಲಿ ನಡೆದ ಲಸಿಕೆ ತಾಲೀಮಿನ ಬಗ್ಗೆ ಮಾತನಾಡಿದ ಅವರು, ನಾಲ್ಕು ರಾಜ್ಯಗಳಲ್ಲಿ ಲಸಿಕೆ ತಾಲೀಮು ಯಶಸ್ವಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಇದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಓದಿ: ಈಗ ಎಲ್ಲರ ಚಿತ್ತ ಸೀತಾರಾಮನ್ರ 3ನೇ ಬಜೆಟ್ನತ್ತ: ಕೊಡುವರೋ, ಕಸಿದುಕೊಳ್ಳುವರೋ?
ಔಷಧ ನಿಯಂತ್ರಕರ ಅನುಮೋದನೆ ಪಡೆದ ಬಳಿಕ ಎಲ್ಲಾ ಜನರಿಗೆ ಲಸಿಕೆ ಸಿಗುತ್ತದೆ. ಇದನ್ನು ಖಚಿತಪಡಿಸುವ ದೊಡ್ಡ ಕಾರ್ಯ ಸರ್ಕಾರದ ಮುಂದಿದೆ. ಇದನ್ನು ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ತೆಗೆದುಕೊಂಡು ಹೋಗಬೇಕು ಎಂದು ಮಾಂಡೆ ಹೇಳಿದರು.