ETV Bharat / bharat

ಕೋವಿಡ್-‌19 ವೆಂಟಿಲೇಟರ್‌ ಹಂಚಿಕೆ: ಹೊಸ ಹಂಚಿಕೆ ವಿಧಾನ ಸೂಚಿಸಿದ ಅಮೆರಿಕದ ಸಂಶೋಧಕರು - COVID-19

ಕೋವಿಡ್-‌19 ಸಾಂಕ್ರಾಮಿಕ ವ್ಯಾಪಿಸಿರುವ ಮಧ್ಯೆ ಸೀಮಿತ ವೆಂಟಿಲೇಟರ್‌ಗಳ ಸಮಸ್ಯೆಗೆ ಸಿಲುಕಿರುವ ಜಗತ್ತಿನ ಹಲವಾರು ದೇಶಗಳಿಗೆ ಅಮೆರಿಕದ ಸಂಶೋಧಕರ ತಂಡವೊಂದು ಹೊಸ ಸೂತ್ರವೊಂದನ್ನು ಪ್ರಸ್ತಾಪಿಸಿದೆ. ಲಭ್ಯವಿರುವ ವೆಂಟಿಲೇಟರ್‌ಗಳ ಕವಾಟಗಳನ್ನು ನಿಯಂತ್ರಿಸುವ ಮೂಲಕ, ಪ್ರತಿಯೊಬ್ಬ ರೋಗಿಯ ಅವಶ್ಯಕತೆಗೆ ಅನುಗುಣವಾಗಿ ಆಮ್ಲಜನಕವನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನು ಅದು ಮಾಡಿದೆ.

ಕೋವಿಡ್-‌19 ವೆಂಟಿಲೇಟರ್‌ ಹಂಚಿಕೆ
COVID-19 US Researchers
author img

By

Published : May 24, 2020, 12:40 PM IST

ಬೋಸ್ಟನ್‌ (ಯುಎಸ್‌ಎ): ರೋಗಿಗಳ ನಡುವೆ ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳುವ ಹೊಸ ವಿಧಾನವೊಂದನ್ನು ಭಾರತೀಯ ಸಂಜಾತ ವ್ಯಕ್ತಿಯೂ ಇರುವ ಸಂಶೋಧಕರ ತಂಡವೊಂದು ಪ್ರಸ್ತಾಪಿಸಿದ್ದು, ತೀವ್ರ ಉಸಿರಾಟ ಸಮಸ್ಯೆಗಳನ್ನು ಎದುರಿಸುತ್ತಿರುವ ಕೋವಿಡ್-‌19 ರೋಗಿಗಳ ಚಿಕಿತ್ಸೆಯ ಅಂತಿಮ ಹಂತವಾಗಿ ಈ ವಿಧಾನವನ್ನು ಬಳಸಬಹುದಾಗಿದೆ.

ಕೋವಿಡ್-‌19 ಸೋಂಕಿತ ರೋಗಿಗಳು ಉಸಿರಾಟದ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಭವಿಸುತ್ತಿರುವುದನ್ನು ಗಮನಿಸಿರುವ ಶ್ರಿಯಾ ಶ್ರೀನಿವಾಸನ್‌ ಸೇರಿದಂತೆ ಅಮೆರಿಕದ ಮಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ಸಂಸ್ಥೆಯ ಸಂಶೋಧಕರು, ವೆಂಟಿಲೇಟರ್‌ಗಳನ್ನು ಪರಸ್ಪರ ಹಂಚಿಕೆ ಮಾಡಿಕೊಳ್ಳುವ ವಿಚಾರ ಕುರಿತು ನಡೆಸುತ್ತಿರುವ ಚರ್ಚೆಗೆ ತೀವ್ರತೆ ಬಂದಿದೆ. ಗಾಳಿ ಕೊಳವೆಗಳನ್ನು ಹಲವಾರು ಕವಲುಗಳಾಗಿ ವಿಭಜಿಸುವ ಮೂಲಕ ಎರಡು ಅಥವಾ ಅದಕ್ಕೂ ಹೆಚ್ಚಿನ ರೋಗಿಗಳನ್ನು ಒಂದೇ ಯಂತ್ರದ ಮೂಲಕ ಜೋಡಿಸುವುದು ಈ ವಿಧಾನದಲ್ಲಿದೆ ಎನ್ನುತ್ತಾರೆ ಸೈನ್ಸ್‌ ಟ್ರಾನ್ಸ್‌ಲೇಶನಲ್‌ ಮೆಡಿಸಿನ್‌ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಶ್ರೀನಿವಾಸನ್.

ಆದರೆ, ಹಲವಾರು ವೈದ್ಯ ಸಂಘಟನೆಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ರೋಗಿಗಳು ಅಪಾಯಕ್ಕೆ ಸಿಲುಕಬಹುದು ಎನ್ನುತ್ತಾರೆ. ಏಕೆಂದರೆ, ಪ್ರತಿಯೊಬ್ಬ ರೋಗಿಗೂ ಸೂಕ್ತವಾದ ಪ್ರಮಾಣದ ಗಾಳಿ ಈ ವಿಧಾನದಿಂದ ಸಿಗದೇ ಹೋಗಬಹುದು ಎಂದೂ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಎಂಐಟಿ, ಬ್ರಿಗೆಮ್‌ ಹಾಗೂ ಮಹಿಳಾ ಅಸ್ಪತ್ರೆಯ ತಂಡವೊಂದು ಇದೀಗ ವಿಭಜಿಸಿದ ವೆಂಟಿಲೇಟರ್‌ಗಳ ಹೊಸ ಮಾದರಿಯನ್ನು ಪ್ರಸ್ತಾಪಿಸಿದ್ದು, ಇದರಿಂದ ಸುರಕ್ಷತೆಗೆ ಸಂಬಂಧಿಸಿದ ಹಲವಾರು ಆತಂಕಗಳನ್ನು ನಿವಾರಿಸುವ ಭರವಸೆಯನ್ನು ಅದು ವ್ಯಕ್ತಪಡಿಸಿದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಪರಿಣಾಕಾರಿತ್ವವನ್ನು ಪ್ರದರ್ಶಿಸಿರುವ ಈ ತಂಡ, ರೋಗಿಯು ಜೀವನ್ಮರಣದ ಹಂತ ತಲುಪಿದಾಗ, ಕೊನೆಯ ಅಸ್ತ್ರವಾಗಿ ಈ ವಿಧಾನವನ್ನು ಬಳಸಬಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ. “ಸುಲಭವಾಗಿ ಸಿಗುವಂತಹ ಸಾಮಾಗ್ರಿಗಳನ್ನು ಬಳಸಿ ಸಿದ್ಧಪಡಿಸಬಹುದಾದ ಈ ಮಾದರಿಯಿಂದ ವೆಂಟಿಲೇಟರ್‌ನ ತೀವ್ರ ಅವಶ್ಯಕತೆ ಇರುವ ರೋಗಿಗಳಿಗೆ ಸಕಾಲದಲ್ಲಿ ಅದನ್ನು ಒದಗಿಸಲು ಸಾಧ್ಯವಾಗುವ ಭರವಸೆ ನಮಗಿದೆ” ಎನ್ನುತ್ತಾರೆ ಎಂಐಟಿಯ ಸಹಾಯಕ ಪ್ರಾಧ್ಯಾಪಕ ಜಿಯೊವನ್ ತ್ರವೆರ್ಸೊ.‌

“ವೆಂಟಿಲೇಟರ್‌ಗಳನ್ನು ಹಂಚಿಕೊಳ್ಳುವುದು ಆರೋಗ್ಯಕರ ಪದ್ಧತಿಯಲ್ಲ ಎಂಬುದನ್ನು ನಾವೂ ಒಪ್ಪುತ್ತೇವೆ. ಈ ರೀತಿಯ ಬದಲಾವಣೆಗಳನ್ನು ಕೊನೆಯ ಅಸ್ತ್ರವಾಗಿ ಬಳಕೆ ಮಾಡಬಹುದು ಎಂದಷ್ಟೇ ನಾವು ಶಿಫಾರಸು ಮಾಡುತ್ತೇವೆ” ಎನ್ನುತ್ತಾರೆ ತ್ರವೆರ್ಸೊ. ವೆಂಟಿಲೇಟರ್‌ಗಳೆಂದರೆ ವ್ಯಕ್ತಿಯ ಉಸಿರಾಟವನ್ನು ಸುಗಮವಾಗಿಸಲು ಬಾಯಿ ಅಥವಾ ಮೂಗಿನಲ್ಲಿ ಕೊಳವೆಯ ಮೂಲಕ ಆಮ್ಲಜನಕವನ್ನು ನೀಡುವ ಯಂತ್ರಗಳು. ಕೋವಿಡ್‌-೧೯ರ ಆಸ್ಫೋಟದ ನಂತರ ಅವಶ್ಯವಿರುವ ಪ್ರಮಾಣದಲ್ಲಿ ವೆಂಟಿಲೇಟರ್‌ಗಳ ಲಭ್ಯತೆ ಇಲ್ಲದೇ ಪರದಾಡುವ ಪರಿಸ್ಥಿತಿ ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ನಿರ್ಮಾಣವಾಗಿದೆ ಎನ್ನುತ್ತಾರೆ ಸಂಶೋಧಕರು.

ಲಭ್ಯವಿರುವ ವೆಂಟಿಲೇಟರ್‌ಗಳ ಮೂಲಕವೇ ಈ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಹರಿವು ಕವಾಟಗಳನ್ನು ಜೋಡಿಸಿರುವ ಎಂಐಟಿ ತಂಡ, ಆ ಪೈಕಿ ತಲಾ ಒಬ್ಬ ರೋಗಿಗೆ ಒಂದು ಕೊಳವೆಯನ್ನು ಒದಗಿಸಲಾಗುತ್ತಿದ್ದು, ಪ್ರತಿಯೊಬ್ಬ ರೋಗಿಗೂ ಎಷ್ಟು ಅವಶ್ಯವಿದೆಯೋ ಅಷ್ಟು ಪ್ರಮಾಣದ ಆಮ್ಲಜನಕವನ್ನು ನಿಯಂತ್ರಿತ ರೀತಿಯಲ್ಲಿ ಹರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. “ಈ ಹರಿವು ಕವಾಟಗಳು ಪ್ರತಿಯೊಬ್ಬ ರೋಗಿಯ ಅವಶ್ಯಕತೆಗೆ ತಕ್ಕಂತೆ ಹರಿವನ್ನು ವೈಯಕ್ತೀಕರಣಗೊಳಿಸಲು ಅವಕಾಶ ಕಲ್ಪಿಸುತ್ತವೆ” ಎನ್ನುತ್ತಾರೆ ಶ್ರೀನಿವಾಸನ್.‌ “ಒಂದು ವೇಳೆ ರೋಗಿಯೊಬ್ಬನ ಸ್ಥಿತಿ ಕ್ಷಿಪ್ರವಾಗಿ ಅಥವಾ ನಿಧಾನವಾಗಿ, ಸುಧಾರಿಸಿದರೆ ಅಥವಾ ವಿಷಮಿಸಿದರೆ ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವೂ ಇದರಲ್ಲಿದೆ” ಎನ್ನುತ್ತಾರೆ ಅವರು. ಈ ವ್ಯವಸ್ಥೆಯಲ್ಲಿ ಒತ್ತಡ ಬಿಡುಗಡೆ ಕವಾಟಗಳೂ ಇದ್ದು, ರೋಗಿಯ ಶ್ವಾಸಕೋಶದೊಳಗೆ ಹೆಚ್ಚಿನ ಪ್ರಮಾಣದ ಗಾಳಿ ಹೋಗುವುದನ್ನು ಅವು ನಿಯಂತ್ರಿಸಬಲ್ಲವು. ಇದರ ಜೊತೆಗೆ ಎಚ್ಚರಿಕೆ ಗಂಟೆಯಂತಹ ಸುರಕ್ಷತಾ ಕ್ರಮಗಳನ್ನೂ ಅಳವಡಿಸಲಾಗಿದ್ದು, ರೋಗಿಯ ಉಸಿರೆಳೆದುಕೊಳ್ಳುವ ಗತಿ ಬದಲಾದರೆ ಅದು ಎಚ್ಚರಿಕೆ ನೀಡುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ಪರಿಕಲ್ಪನೆಯನ್ನು ಸಾಕ್ಷಾತ್ಕರಿಸಲು ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಸಿಗುವಂತಹ ಸಾಧನಗಳನ್ನೇ ಈ ಸಂಶೋಧಕರು ಬಳಸಿದ್ದಾರೆ. ಈ ಉಪಕರಣಗಳು ಹಾರ್ಡ್‌ವೇರ್‌ ಅಂಗಡಿಗಳಲ್ಲಿಯೂ ಸಿಗುವಂತಿದ್ದು, ಅವನ್ನು ಸೋಂಕುರಹಿತವಾಗಿಸಿ ಬಳಸಬಹುದು. ಒಂದು ಸಾಮಾನ್ಯ ವೆಂಟಿಲೇಟರ್‌ನಿಂದ ಏಕಕಾಲದಲ್ಲಿ ಆರರಿಂದ ಎಂಟು ರೋಗಿಗಳಿಗೆ ಆಮ್ಲಜನಕ ಸರಬರಾಜು ಮಾಡಲು ಸಾಧ್ಯವಿದೆ. ಆದರೆ, ಸಂಶೋಧಕರ ತಂಡ ಗರಿಷ್ಠ ಇಬ್ಬರಿಗೆ ಮಾತ್ರ ಅದನ್ನು ಬಳಸಲು ಶಿಫಾರಸು ಮಾಡಿದೆ. ಏಕೆಂದರೆ, ಹೆಚ್ಚಿನ ಜನರಿಗೆ ಒದಗಿಸಬೇಕೆಂದರೆ ಅದಕ್ಕೆ ಬೇಕಾಗುವ ಮಾರ್ಪಾಟು ಸಂಕೀರ್ಣವಾಗುತ್ತದೆ.

ಈ ಪರಿಷ್ಕೃತ ವೆಂಟಿಲೇಟರ್‌ ಸಾಧನವನ್ನು ಸಂಶೋಧಕರು ಮೊದಲು ಪ್ರಯೋಗಿಸಿದ್ದು ಯಂತ್ರದ ಮೂಲಕ ಉಸಿರಾಟವನ್ನು ಅನುಕರಿಸುವಂತಹ ಕೃತಕ ಶ್ವಾಸಕೋಶ ಹಾಗೂ ಹಂದಿಯೊಂದರ ಮೇಲೆ. ಕೃತಕ ಶ್ವಾಸಕೋಶದ ಹಲವಾರು ಗುಣಲಕ್ಷಣಗಳನ್ನು ಬದಲಿಸುತ್ತಾ, ರೋಗಿಗಳಲ್ಲಿ ಕಾಣಿಸಿಕೊಳ್ಳಬಹುದಾದ ಬದಲಾಗುವ ಪರಿಸ್ಥಿತಿಗಳಿಗೆ ಸೂಕ್ತವಾಗುವಂತಹ ವಿನ್ಯಾಸವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ರೋಗಿಗಳಿಗೆ ಸೂಕ್ತವಾಗುವ ರೀತಿ ಪರಿಷ್ಕೃತ ವೆಂಟಿಲೇಟರ್‌ನಲ್ಲಿ ಸೂಕ್ತ ಬದಲಾವಣೆಗಳನ್ನೂ ಮಾಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಂತರದ ಹಂತದಲ್ಲಿ, ಎರಡು ಪ್ರಾಣಿಗಳಿಗೆ ಒಂದೇ ವೆಂಟಿಲೇಟರ್‌ ಮೂಲಕ, ಪ್ರತಿಯೊಂದು ಪ್ರಾಣಿಗೂ ಬೇಕಾದ ಅವಶ್ಯಕ ಪ್ರಮಾಣದ ಗಾಳಿಯ ಹರಿವನ್ನು ಇಬ್ಬರಿಗೂ ಪ್ರತ್ಯೇಕವಾಗಿ, ಆದರೆ ಏಕಕಾಲದಲ್ಲಿ ಹರಿಸಲು ಸಾಧ್ಯವಿದೆ ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ.

  • ಚಾಮರಾಜ ಸವದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.