ETV Bharat / bharat

ದೆಹಲಿ, ತೆಲಂಗಾಣದಲ್ಲಿ ಕೊರೊನಾ ಸೋಂಕು ಪತ್ತೆ... ಕೇಂದ್ರದಿಂದಲೇ ಮಾಹಿತಿ ರಿಲೀಸ್​!

ಕೊರೊನಾ ವೈರಸ್​​ ಇದೀಗ ಭಾರತದ ವಿವಿಧ ನಗರಗಳಿಗೆ ಲಗ್ಗೆ ಹಾಕುತ್ತಿದ್ದು, ನವದೆಹಲಿ ಹಾಗೂ ತೆಲಂಗಾಣದಲ್ಲೂ ಇಬ್ಬರಿಗೆ ಈ ಸೋಂಕು ಕಾಣಿಸಿಕೊಂಡಿದೆ.

COVID-19: two more positive cases reported

author img

By

Published : Mar 2, 2020, 3:14 PM IST

ನವದೆಹಲಿ: ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸಿರುವ ಕೊರೊನಾ ವೈರಸ್​ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದು, ಇದೀಗ ಭಾರತದಲ್ಲೂ ಇದರ ಪ್ರಕರಣ ಕಾಣಸಿಗುತ್ತಿವೆ.

ವೈರಸ್​​ನಿಂದಾಗಿ ಪ್ರಪಂಚದಾದ್ಯಂತ ಈಗಾಗಲೇ 3 ಸಾವಿರ ಜನರು ಸಾವನ್ನಪ್ಪಿದ್ದು, 80 ಸಾವಿರಕ್ಕೂ ಅಧಿಕ ಮಂದಿ ಈ ವೈರಸ್​ನಿಂದ ಬಳಲುತ್ತಿದ್ದಾರೆ. ಇದರ ಮಧ್ಯೆ ಹೊಸದಾಗಿ ಭಾರತದಲ್ಲಿ ಮತ್ತೆರೆಡು ಪ್ರಕರಣ ಕಂಡು ಬಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ನವದೆಹಲಿಯಲ್ಲಿ ಒಂದು ಪ್ರಕರಣ ಹಾಗೂ ತೆಲಂಗಾಣದಲ್ಲಿ ಮತ್ತೊಂದು ಪ್ರಕರಣ ಕಾಣಿಸಿಕೊಂಡಿದ್ದು, ಇಟಲಿಯಿಂದ ದೆಹಲಿಗೆ ಆಗಮಿಸಿದ ವ್ಯಕ್ತಿ ಹಾಗೂ ದುಬೈನಿಂದ ತೆಲಂಗಾಣಕ್ಕೆ ಆಗಮಿಸಿದ ವ್ಯಕ್ತಿಯಲ್ಲಿ ಈ ಸೋಂಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಈಗಾಗಲೇ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.