ನವದೆಹಲಿ: ಭಾರತದ ಕೋವಿಡ್-19 ಚೇತರಿಕೆ ಪ್ರಮಾಣ ಇತರ ರಾಷ್ಟ್ರಗಳಿಗಿಂತ ಉತ್ತಮವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಸದ್ಯ ದೇಶದಲ್ಲಿ ಶೇ. 39.62 ಅಂದರೆ 42,298 ಜನ ಚೇತರಿಸಿಕೊಂಡಿದ್ದು, ತೃಪ್ತಿದಾಯಕವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಲಾಕ್ ಡೌನ್ ಪ್ರಾರಂಭವಾದಾಗ ಚೇತರಿಕೆ ಪ್ರಮಾಣ ಶೇ. 7.1 ರಷ್ಟಿತ್ತು, ಎರಡನೇ ಲಾಕ್ ಡೌನ್ ಸಮಯದಲ್ಲಿ ಚೇತರಿಕೆ ಪ್ರಮಾಣ ಶೇ. 11.42 ರಷ್ಟಿತ್ತು, ನಂತರ ಅದು 26.59 ಕ್ಕೆ ಏರಿಕೆಯಾಗಿತ್ತು. ಈಗ ಚೇತರಿಕೆ ಪ್ರಮಾಣ ಶೇ. 39.62 ಇದೆ ಎಂದು ಎಂದು ಅಗರ್ವಾಲ್ ತಿಳಿಸಿದ್ದಾರೆ.
ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ನೋಡಿದರೆ, ಪ್ರತಿ ಲಕ್ಷ ಜನಸಂಖ್ಯೆಗೆ 62 ಜನರು ಕೋವಿಡ್ ಬಾಧಿತರಾಗಿದ್ದಾರೆ. ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಶೇ. 7.9 ಜನ ಕೋವಿಡ್ ಬಾಧಿತರಾಗಿದ್ದಾರೆ. ಜಾಗತಿಕ ಅಂಕಿ ಅಂಶ 4.2 ಕ್ಕೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ 0.2 ಇದೆ. ಇದು ಕಳವಳಕಾರಿ ಸಂಗತಿಯಾದರೂ, 6 ದೇಶಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.