ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗುವುದಿಲ್ಲ ಎಂದು ಎಎಪಿ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ದೆಹಲಿಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗುತ್ತದೆಯೇ ಎಂಬ ನ್ಯಾಯಾಲಯದ ಪ್ರಶ್ನೆಗೆ ಸರ್ಕಾರವು ಈ ರೀತಿ ಉತ್ತರ ನೀಡಿದೆ. ನ್ಯಾಯಮೂರ್ತಿಗಳಾ ಹಿಮಾ ಕೊಹ್ಲಿ ಮತ್ತು ಸುಬ್ರಮೋನಿಯಮ್ ಪ್ರಸಾದ್ ಅವರ ಪೀಠ ವಿಚಾರಣೆ ಆಲಿಸಿದೆ.
ಡಿಸೆಂಬರ್ 31 ರವರೆಗೆ ನಗರದಲ್ಲಿ ಅನುಮತಿ ಮತ್ತು ನಿರ್ಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಸರ್ಕಾರದ ಪರ ಹಿರಿಯ ವಕೀಲ ಸಂದೀಪ್ ಸೇಠಿ ಮತ್ತು ಹೆಚ್ಚುವರಿ ಸ್ಥಾಯಿ ಸಲಹೆಗಾರ ಸತ್ಯಕಂ ಹೇಳಿದ್ದಾರೆ.