ಹೈದರಾಬಾದ್ : ದೇಶಾದ್ಯಂತ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ನಾಗಾಲೋಟದಲ್ಲಿ ಹೆಚ್ಚಾಗುತ್ತಿದ್ದು, ಯಾವುದೇ ರಾಜ್ಯದಲ್ಲೂ ಸೋಂಕಿತ ಕೇಸ್ ಕಡಿಮೆಯಾಗುವ ಲಕ್ಷಣ ಗೋಚರವಾಗುತ್ತಿಲ್ಲ.
ಇಂದು ಕೂಡ ವಿವಿಧ ರಾಜ್ಯಗಳಲ್ಲಿ ಸಾವಿರಾರು ಹೊಸ ಕೇಸ್ ಕಾಣಿಸಿಕೊಂಡಿದ್ದು, ಈ ಮೂಲಕ 17 ಸಾವಿರಕ್ಕೂ ಅಧಿಕ ಪ್ರಕರಣ ಇಂದು ಒಂದೇ ದಿನ ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತ ಸಂಖ್ಯೆ ಇದೀಗ 5 ಲಕ್ಷದ ಗಡಿ ದಾಟಿದೆ. ಜತೆಗೆ ಕಳೆದ 24 ಗಂಟೆಯಲ್ಲಿ 407 ಜನರು ಸಾವನ್ನಪ್ಪಿದ್ದಾರೆ.
ರಾಜ್ಯವಾರು ಕೋವಿಡ್ ಚಿತ್ರಣ!
ನವದೆಹಲಿ: ದೆಹಲಿ ಆರೋಗ್ಯ ಸಚಿವ ಕೋವಿಡ್ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ. ದೆಹಲಿಯಲ್ಲಿಂದು ಒಟ್ಟು 3,460 ಹೊಸ ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟು ಸೋಂಕಿತ ಸಂಖ್ಯೆ 77,240 ಆಗಿದೆ.
ಗುಜರಾತ್: ರಾಜ್ಯದಲ್ಲಿ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಅಹಮದಾಬಾದ್ಗೆ ಭೇಟಿ ನೀಡಿದರು. ರಾಜ್ಯದಲ್ಲಿ ಇಂದು 580 ಹೊಸ ಪ್ರಕರಣ ದಾಖಲಾಗಿದ್ದು, ಈ ಮೂಲಕ ಒಟ್ಟು ಸಂಖ್ಯೆ 30,158 ಆಗಿದೆ. 1,772 ಜನರು ಸಾವನ್ನಪ್ಪಿದ್ದಾರೆ.
ರಾಜಸ್ಥಾನ: ರಾಜಸ್ಥಾನದಲ್ಲೂ 364 ಕೇಸ್ ಕಾಣಿಸಿಕೊಂಡಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ 16,660 ಪ್ರಕರಣಗಳು ದಾಖಲಾಗಿವೆ.ಗೋವಾದಲ್ಲಿ 44 ಹೊಸ ಕೇಸ್ ಸಿಕ್ಕಿದ್ದು, ಒಟ್ಟು ಸಂಖ್ಯೆ 1,039 ಆಗಿದೆ.
ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 5024 ಹೊಸ ಪ್ರಕರಣ ಕಾಣಿಸಿಕೊಂಡಿದ್ದು, 175 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ 1,52,765 ಪ್ರಕರಣಗಳಿದ್ದು, ಇದರಲ್ಲಿ 65,829 ಆ್ಯಕ್ಟಿವ್ ಕೇಸ್ಗಳಿವೆ.
ಮಧ್ಯಪ್ರದೇಶದಲ್ಲಿ 203 ಕೇಸ್ ಇಂದು ಕಂಡು ಬಂದಿದ್ದು, ಒಟ್ಟು 12,798 ಪ್ರಕರಣಗಳಿವೆ. ಜಮ್ಮು-ಕಾಶ್ಮೀರದಲ್ಲೂ 213 ಹೊಸ ಕೇಸ್ ಕಾಣಸಿಕ್ಕಿದ್ದು, ಒಟ್ಟು ಸಂಖ್ಯೆ 6762 ಆಗಿದೆ. ಮಣಿಪುರದಲ್ಲಿ 19, ಹಿಮಾಚಲದಲ್ಲಿ 3 ಕೇಸ್ ಸಿಕ್ಕಿವೆ. ಉತ್ತರಾಖಂಡ್ನಲ್ಲಿ 34 ಕೇಸ್ ದಾಖಲಾಗಿದ್ದು, ಒಟ್ಟು ಸಂಖ್ಯೆ 2,725 ಇದೆ.
ಕರ್ನಾಟಕದಲ್ಲೂ 445 ಹೊಸ ಪ್ರಕರಣ ದಾಖಲಾಗಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತ ಸಂಖ್ಯೆ 11,005ಕ್ಕೆ ಏರಿಕೆಯಾಗಿದೆ. ಪಂಜಾಬ್ನಲ್ಲಿ 188 ಕೇಸ್ ಕಾಣಿಸಿಕೊಂಡಿದ್ದು, ಒಟ್ಟು ಸಂಖ್ಯೆ 4,957 ಏರಿಕೆ ಕಂಡಿದೆ.
ಹರಿಯಾಣದಲ್ಲಿ 421 ಕೇಸ್ ಕಾಣಿಸಿಕೊಂಡಿದ್ದು, ಒಟ್ಟು ಸಂಖ್ಯೆ 12,884 ಆಗಿದೆ. ಪಶ್ಚಿಮ ಬಂಗಾಳದಲ್ಲಿ 542 ಪ್ರಕರಣ ಇಂದು ದಾಖಲಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಂಖ್ಯೆ 16,190 ಆಗಿದೆ.
ತಮಿಳುನಾಡು: ತಮಿಳುನಾಡಿನಲ್ಲಿ ಇಂದು ಒಂದೇ ದಿನ 3,645 ಹೊಸ ಕೇಸ್ ಸಿಕ್ಕಿದ್ದು, 46 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಕೇಸ್ 74,622 ಆಗಿದೆ. ಕೇರಳದಲ್ಲಿ 150 ಹೊಸ ಕೇಸ್ ಇಂದು ಸಿಕ್ಕಿವೆ.
ಇನ್ನು ಪ್ರಪಂಚದಾದ್ಯಂತ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ 1 ಕೋಟಿ ದಾಟಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ 24,21,134 ಕೇಸ್ಗಳಿವೆ.