ETV Bharat / bharat

ಇಂದು 17 ಸಾವಿರ ಹೊಸ ಕೇಸ್​ ಪತ್ತೆ​, 418 ಮಂದಿ ಸಾವು... ರಾಜ್ಯವಾರು ಕೋವಿಡ್​ ಚಿತ್ರಣ ಇಂತಿದೆ!

ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಇಂದು ಒಂದೇ ದಿನ ಬರೋಬ್ಬರಿ 17 ಸಾವಿರ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

COVID-19
COVID-19
author img

By

Published : Jun 25, 2020, 10:16 PM IST

ಹೈದರಾಬಾದ್​: ದೇಶಾದ್ಯಂತ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 17 ಸಾವಿರ ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ. 418 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು 4,73,105 ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೆ 14,894 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದು, 2,71,697 ಜನರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. 1,86,514 ಸಕ್ರಿಯ ಪ್ರಕರಣಗಳಿವೆ.

ಯಾವ ರಾಜ್ಯದಲ್ಲಿ ಎಷ್ಟು ಮಂದಿ ಸೋಂಕಿತರು!

ನವದೆಹಲಿ: ಕೋವಿಡ್​ ಸೋಂಕು ಹರಡುವಿಕೆಯಲ್ಲಿ ಮುಂಬೈ ಹಿಂದಿಕ್ಕಿರುವ ದೆಹಲಿಯಲ್ಲಿ ಇಂದು 3390 ಹೊಸ ಕೇಸ್​ಗಳು ಕಾಣಿಸಿಕೊಂಡಿದ್ದು, 64 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸದ್ಯ 73,780 ಪ್ರಕರಣಗಳಿದ್ದು, ಇದರಲ್ಲಿ 44,765 ಜನರು ಡಿಸ್ಚಾರ್ಜ್​ ಆಗಿದ್ದಾರೆ. 2429 ಜನರು ಸಾವನ್ನಪ್ಪಿದ್ದಾರೆ. ದೆಹಲಿಯ ಪ್ರತಿಯೊಂದು ಮನೆಗೆ ತೆರಳಿ ಕೋವಿಡ್​ ಟೆಸ್ಟ್ ಮಾಡಿಸಲು ಆದೇಶ ನೀಡಲಾಗಿದೆ.

ಮಹಾರಾಷ್ಟ್ರ: ದೇಶದಲ್ಲಿ ಅತಿ ಹೆಚ್ಚು ಕೋವಿಡ್​ ಸೋಂಕು ಕಂಡು ಬಂದಿರುವ ಮಹಾರಾಷ್ಟ್ರದಲ್ಲಿ ಇದೀಗ ಜಿಮ್​ ಹಾಗೂ ಸಲೂನ್​ ಓಪನ್​ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಸಾರ್ವಜನಿಕ ಸಭೆ ಸೇರುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಮಹಾರಾಷ್ಟ್ರದಲ್ಲಿ 142,900 ಸೋಂಕಿತ ಪ್ರಕರಣಗಳಿದ್ದು, 6,739 ಜನರು ಸಾವನ್ನಪ್ಪಿದ್ದಾರೆ. 73,792 ಜನರು ಗುಣಮುಖರಾಗಿದ್ದಾರೆ. ಇಂದು ಕೂಡ 192 ಜನರು ಸಾವನ್ನಪ್ಪಿದ್ದು, 4841 ಹೊಸ ಕೇಸ್​ಗಳು​ ಪತ್ತೆಯಾಗಿವೆ.

ರಾಜಸ್ಥಾನ: ರಾಜಸ್ಥಾನದಲ್ಲೂ 76 ಹೊಸ ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸಂಖ್ಯೆ 16,085ಕ್ಕೆ ಏರಿಕೆಯಾಗಿದೆ. ಇದರಲ್ಲಿ 12,386 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಕಾರಣ ಜೈಪುರದ ಕನಿಷ್ಠ 50 ಪೊಲೀಸ್​ ಠಾಣಾ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ.

COVID-19 news from across the nation
ಕೋವಿಡ್​ ಚಿತ್ರಣ

ಬಿಹಾರ: ಕೆನರಾ ಬ್ಯಾಂಕ್​ ಎಜಿಎಂಗೂ ಕೊರೊನಾ ಸೋಂಕು ತಗುಲಿದ್ದು, ಪಾಟ್ನಾದ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ರಾಜ್ಯದಲ್ಲಿ 223 ಕೇಸ್​ಗಳು​ ಪತ್ತೆಯಾಗಿದ್ದು, ಈ ಮೂಲಕ 8273 ಪ್ರಕರಣಗಳು ದಾಖಲಾಗಿವೆ. 55 ಜನರು ಸಾವನ್ನಪ್ಪಿದ್ದಾರೆ.

ಹರಿಯಾಣ: ಇಂದು 13 ಕೇಸ್​ಗಳು​ ಕಾಣಿಸಿಕೊಂಡಿದ್ದು, ಒಟ್ಟು 12,023 ಪ್ರಕರಣಗಳಾಗಿವೆ. ಜತೆಗೆ 189 ಜನರು ಸಾವನ್ನಪ್ಪಿದ್ದಾರೆ. ಮುಂದಿನ 10 ದಿನ ಗುರುಗ್ರಾಮ್​ನಲ್ಲಿ ಸೀಮಿತ ಲಾಕ್​ಡೌನ್​ ವಿಧಿಸಲು ಇಲ್ಲಿನ ಸರ್ಕಾರ ಚಿಂತನೆ ನಡೆಸಿದೆ. ಲ್ಯಾಬ್​ ನಿರ್ಲಕ್ಷ್ಯದಿಂದಾಗಿ 200ಕ್ಕೂ ಹೆಚ್ಚು ರೋಗಿಗಳು ನಮೂದಿಸಿರುವ ದೂರವಾಣಿ ಸಂಖ್ಯೆ ಹಾಗೂ ಇತರೆ ವಿವರ ತಪ್ಪಾಗಿದೆ ಎಂದು ತಿಳಿದು ಬಂದಿದ್ದು, ಐದು ಲ್ಯಾಬ್​ಗಳಿಗೆ ಶೋಕಾಸ್​ ನೋಟಿಸ್​ ಕಳುಹಿಸಲಾಗಿದೆ.

ಛತ್ತೀಸ್​​ಘಡ: 229 ಬೆಟಾಲಿಯನ್​ನ ಸಿಆರ್​​ಪಿಎಫ್​ ಅಧಿಕಾರಿಗೆ ಕೋವಿಡ್​ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ 12 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಉಳಿದಂತೆ ಹಿಮಾಚಲ ಪ್ರದೇಶದಲ್ಲಿ 839 ಕೇಸ್​, ಉತ್ತರಾಖಂಡ್​​ನಲ್ಲಿ 49, ಜಾರ್ಖಂಡ್​ನಲ್ಲಿ 2,261, ರಾಜಸ್ಥಾನದಲ್ಲಿಂದು 287 ಕೇಸ್​ಗಳೊಂದಿಗೆ 16,296 ಕೇಸ್​, ಮಧ್ಯಪ್ರದೇಶದಲ್ಲಿ 147 ಕೇಸ್​ಗಳೊಂದಿಗೆ 12,595 ಪ್ರಕರಣಗಳು ದಾಖಲಾಗಿವೆ.

ಕರ್ನಾಟಕ: ಕರ್ನಾಟಕದಲ್ಲಿ ಇಂದು 442 ಹೊಸ ಕೇಸ್​ಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10,560 ಆಗಿದೆ. ಇದರಲ್ಲಿ 3,716 ಆ್ಯಕ್ಟೀವ್​ ಕೇಸ್​ಗಳಿವೆ.

ಇನ್ನು ಗೋವಾದಲ್ಲಿ 44 ಹೊಸ ಕೇಸ್​ಗಳೊಂದಿಗೆ 658 ಆ್ಯಕ್ಟೀವ್​ ಕೇಸ್​ಗಳಿವೆ. ಕಾಶ್ಮೀರದಲ್ಲಿ 6549, ಮಣಿಪುರದಲ್ಲಿ 702 ಪ್ರಕರಣಗಳು ದಾಖಲಾಗಿವೆ.

ಉತ್ತರಪ್ರದೇಶ: ಇಂದು 654 ಹೊಸ ಕೇಸ್​ಗಳು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 6463ಕ್ಕೆ ಏರಿದೆ. ಪಶ್ಚಿಮ ಬಂಗಾಳದಲ್ಲೂ 475 ಹೊಸ ಕೇಸ್​ ಕಾಣಿಸಿಕೊಂಡಿದ್ದು, 15648 ಸೋಂಕಿತ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.