ETV Bharat / bharat

ವಿಶೇಷ ಅಂಕಣ: ಇದು ಕೋವಿಡ್​ ಸಮಯ ಎಚ್ಚರಿಕೆ, ಹಬ್ಬಗಳ ಸಂದರ್ಭ ಮೈಮರೆತರೆ ಬೆಲೆ ತೆರಬೇಕಾದೀತು

author img

By

Published : Oct 8, 2020, 3:53 PM IST

ಓಣಂ ಸಂದರ್ಭದಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ತವರಿಗೆ ಬಂದ ಕೇರಳಿಗರು, ಮೈಮರೆತು ಹಬ್ಬ ಆಚರಣೆರಣೆಯಲ್ಲಿ ತೊಡಗಿದ ಪರಿಣಾಮ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಿಎಂ ಪಿಣರಾಯಿ ವಿಜಯನ್ ರಾಜ್ಯಾದ್ಯಂತ ಅಕ್ಟೋಬರ್​ 31 ರವರೆಗೆ ಸೆಕ್ಷನ್ 144 ( ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ.

Negligence during festivals
ಕೊರೊನಾ ನಡುವೆ ಹಬ್ಬಗಳ ಆಚರಣೆ

ಹೈದರಾಬಾದ್ : ಕೊರೊನಾ ವಿರುದ್ಧದ ಹೋರಾಟವನ್ನು ಜಗತ್ತು ಮುಂದುವರೆಸಿದೆ. ಜಾಗತಿಕವಾಗಿ ಇದುವರೆಗೆ 10 ಲಕ್ಷ ಜನರನ್ನು ಮಹಾಮಾರಿ ಕೋವಿಡ್​ ಬಲಿ ಪಡೆದಿದೆ. ಸುಮಾರು 3.6 ಕೋಟಿ ಜನ ಸೋಂಕಿಗೆ ತುತ್ತಾಗಿದ್ದಾರೆ. ಭಾರತದಲ್ಲಿ ಇದುವರೆಗೆ 66 ಲಕ್ಷ ಜನ ಸೋಂಕಿಗೆ ತುತ್ತಾಗಿದ್ದು, 1 ಲಕ್ಷ ಜನ ಮೃತಪಟ್ಟಿದ್ದಾರೆ.

ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಬಿಡಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಮುಂಬರುವ ಹಬ್ಬಗಳ ಸೀಸನ್​ಲ್ಲಿ ಹೆಚ್ಚಿನ ರೀತಿಯಲ್ಲಿ ಅಲರ್ಟ್​ ಆಗಿರುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಭಾರತದಲ್ಲಿ ಸಾಮಾನ್ಯವಾಗಿ ಹಬ್ಬಗಳ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಮತ್ತು ಇದು ಸಾಮುದಾಯಿಕ ಆಚರಣೆಯಾಗಿರುತ್ತದೆ. ಆದರೆ, ಕೊರೊನಾ ಆವರಿಸಿಕೊಂಡ ಬಳಿಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಬ್ಬಗಳ ಆಚರಣೆಯಯಲ್ಲಿ ಹೊಸತನವನ್ನು ಕಂಡುಕೊಳ್ಳಲಾಗಿದೆ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಕೋವಿಡ್​ ನಿಯಮಗಳನ್ನು ಕಡೆಗಣಿಸಿದರೆ ಪರಿಣಾಮ ಏನಾಗುತ್ತದೆ ಎಂಬುವುದಕ್ಕೆ, 2020 ರ ಕೇರಳ ಓಣಂ ಆಚರಣೆಯೇ ಸಾಕ್ಷಿ. ಓಣಂ ಸಂದರ್ಭದಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ತವರಿಗೆ ಬಂದ ಕೇರಳಿಗರು, ಮೈಮರೆತು ಹಬ್ಬ ಆಚರಣೆರಣೆಯಲ್ಲಿ ತೊಡಗಿದ ಪರಿಣಾಮ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕೇರಳದ ಮಲಪ್ಪುರಂ, ಇಡುಕ್ಕಿ, ಕೊಲ್ಲಂ, ಪತ್ತಾನಂತಿಟ್ಟ ಜಿಲ್ಲೆಗಳಲ್ಲಿ ಗಣನೀಯವಾಗಿ ಕೋವಿಡ್​ ಪ್ರಕರಣಗಳು ಹೆಚ್ಚಾಗಿವೆ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸಿಎಂ ಪಿಣರಾಯಿ ವಿಜಯನ್ ರಾಜ್ಯಾದ್ಯಂತ ಅಕ್ಟೋಬರ್​ 31 ರವರೆಗೆ ಸೆಕ್ಷನ್ 144 ( ನಿಷೇಧಾಜ್ಞೆ) ಜಾರಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಪ್ರಮುಖ ಆಚರಣೆಗಳಲ್ಲಿ ಒಂದಾದ ದುರ್ಗಾ ಪೂಜೆಯ ಸಂದರ್ಭದಲ್ಲಿ ಜಾಸ್ತಿ ಜನ ಸೇರದಂತೆ ಎಚ್ಚರವಹಿಸುವಂತೆ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು, ಕಡೆಗಣಿಸಿದರೆ ಕೇರಳದ ರೀತಿ ಆಗಬಹುದೆಂದು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈಗಾಗಲೇ ನವರಾತ್ರಿಯ ಸಂದರ್ಭದಲ್ಲಿ ಗಾರ್ಬಾ ಮತ್ತು ದಾಂಡ್ಯ ಕಾರ್ಯಕ್ರಮದ ವೇಳೆ ಹೆಚ್ಚು ಜನ ಸೇರುವುದನ್ನು ನಿಷೇಧಿಸಿದೆ. ಉತ್ತರಪ್ರದೇಶ, ದೆಹಲಿ ಮತ್ತು ತೆಲಂಗಾಣ ಸರ್ಕಾರಗಳು ಕೂಡ ಪ್ರತ್ಯೇಕ ಮಾರ್ಗಸೂಚಿಗಳನ್ನು ಸಿದ್ದಪಡಿಸುತ್ತಿವೆ. ಜನರು ಕೂಡ ದೀಪಾವಳಿ, ದಸರಾ, ಬಕುತ್ತಮ್ಮ ಆಚರಣೆಗಳ ಸಂದರ್ಭಗಳಲ್ಲಿ ಜವಾಬ್ದಾರಿ ಮತ್ತು ಸ್ವಯಂ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ.

ಸೀನುವಾಗ ಮತ್ತು ಕೆಮ್ಮುವಾಗ ಕೋವಿಡ್​ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯುಹೆಚ್​​ಒ) ಹೇಳಿತ್ತು. ಬಳಿಕ, ಗಾಳಿಯ ಮೂಲವೂ ವೈರಸ್​ ಹರಡುತ್ತದೆ ಎಂದಿತ್ತು. ಕೋವಿಡ್ ಆವರಿಸಿಕೊಂಡ ಬಳಿಕ ಭಾರತ ಸರ್ಕಾರ ಮೊದಲ ಬಾರಿಗೆ ಲಾಕ್​ ಡೌನ್ ಘೋಷಿಸಿತ್ತು. ಆದರೆ, ಆರ್ಥಿಕತೆಯ ದೃಷ್ಠಿಯಿಂದ ಅನ್​ಲಾಕ್ ಮಾಡಿದಾಗ ಜನರಲ್ಲಿ ವೈರಸ್​ ಮೇಲಿನ ಗಂಭೀರತೆ ಕಡಿಮೆಯಾಗುತ್ತಾ ಹೊಯಿತು. ಜನರು ಕೊರೊನಾವನ್ನು ಸಾಮಾನ್ಯವಾಗಿ ಪರಿಗಣಿಸಲು ಪ್ರಾರಂಭಿಸಿದರು. ಸದ್ಯ, ಕೆಲ ರಾಜ್ಯಗಳಲ್ಲಿ ಸಾಮಾಜಿಕ ಅಂತರ ಕಾಪಾಡದಿದ್ದರೆ ಮತ್ತು ಮಾಸ್ಕ್ ಧರಿಸದಿದ್ದರೆ ದಂಢ ವಿಧಿಸುವ, ಜೈಲು ಶಿಕ್ಷೆ ವಿಧಿಸುವ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಹೆಚ್ಚಿನ ರಾಜ್ಯಗಳಲ್ಲಿ ಮಾಸ್ಕ್​ ಧರಿಸುವ ಬಗ್ಗೆ ಯಾವುದೇ ನಿಯಮಗಳಲ್ಲಿಲ್ಲ. ಹೀಗಾಗಿ, ಜನರು ಮಾಸ್ಕ್​ ಧರಿಸದೆ ಹೊರಗಡೆ ಸುತ್ತಾಡುತ್ತಿದ್ದಾರೆ. ಇತರರನ್ನು ಕೂಡ ಅಪಾಯಕ್ಕೆ ತಳ್ಳುತ್ತಿದ್ದಾರೆ.

ಕೊರೊನಾ ವೈರಸ್​ ಇತ್ತೀಚೆಗೆ ಸಣ್ಣ ಪಟ್ಟಣ ಮತ್ತು ಕುಗ್ರಾಮಗಳಿಗೂ ವ್ಯಾಪಿಸಿದೆ. ಮಳೆಗಾಲದಲ್ಲಿ ಸಂದರ್ಭದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರು ಮೈಮರೆತು ಹಬ್ಬಗಳಲ್ಲಿ ಪಾಲ್ಗೊಂಡರೆ, ಸರ್ಕಾರಕ್ಕೆ ನಿಜವಾಗಿಯೂ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಸಾರ್ವಜನಿಕ ಆರೋಗ್ಯ ನಿಯಮಗಳನ್ನು ಪಾಲಿಸಿಕೊಂಡು ಎಚ್ಚರದಿಂದ ವರ್ತಿಸಬೇಕು. ಓಣಂ ಆಚರಣೆಯನ್ನು ಪಾಠವಾಗಿಟ್ಟುಕೊಂಡು, ಮಾಸ್ಕ್​ ಧರಿಸುವುದು, ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವ ಮೂಲಕ ಜವಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಇದುವರೆಗೂ, ಯಾವುದೇ ಸೂಕ್ತ ಲಸಿಕೆ ಲಭ್ಯವಾಗದ ಕಾರಣ, ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.