ETV Bharat / bharat

ಕೋವಿಡ್ -19 ಬಿಕ್ಕಟ್ಟು: ಬಾಲ ಕಾರ್ಮಿಕ ಪದ್ಧತಿಯಲ್ಲಿ ಏರಿಕೆ ಸಾಧ್ಯತೆ!

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಯುನಿಸೆಫ್​ನ ವರದಿಯೊಂದು ಕೋವಿಡ್-19 ಬಿಕ್ಕಟ್ಟಿನಿಂದಾಗಿ ಬಾಲ ಕಾರ್ಮಿಕ ಪದ್ಧತಿಯಲ್ಲಿ ಏರಿಕೆಯಾಗಬಹುದು ಎಂದು ತಿಳಿಸಿದೆ.

child labour
child labour
author img

By

Published : Jun 15, 2020, 1:27 PM IST

ಹೈದರಾಬಾದ್: ಕೋವಿಡ್-19 ಬಿಕ್ಕಟ್ಟಿನ ಪರಿಣಾಮವಾಗಿ ಲಕ್ಷಾಂತರ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ತಳ್ಳಲ್ಪಡುವ ಅಪಾಯವಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ತಿಳಿಸಿದೆ.

ಇದು 20 ವರ್ಷಗಳ ನಂತರ ಬಾಲ ಕಾರ್ಮಿಕ ಪದ್ಧತಿಯಲ್ಲಿ ದೊಡ್ಡ ಮಟ್ಟಿನ ಏರಿಕೆಗೆ ಕಾರಣವಾಗಬಹುದು ಎಂದು ಐಎಲ್ಒ ಹಾಗೂ ಯುನಿಸೆಫ್ ತನ್ನ ವರದಿಯಲ್ಲಿ ಹೇಳಿದೆ.

'ಕೋವಿಡ್-19 ಮತ್ತು ಬಾಲ ಕಾರ್ಮಿಕರು: ಎ ಟೈಮ್ ಆಫ್ ಕ್ರೈಸಿಸ್, ಎ ಟೈಮ್ ಟು ಆಕ್ಟ್' ಎಂಬ ವರದಿ 2000 ಇಸ್ವಿಯಿಂದ ಬಾಲ ಕಾರ್ಮಿಕ ಪದ್ಧತಿ 94 ದಶಲಕ್ಷದಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.

ಆದರೆ, ಕೋವಿಡ್-19 ಬಿಕ್ಕಟ್ಟಿನಿಂದಾಗಿ ಈಗಾಗಲೇ ಬಾಲ ಕಾರ್ಮಿಕ ಪದ್ಧತಿಯಲ್ಲಿ ಮಕ್ಕಳನ್ನು ಕೆಲಸಮಾಡಿಸುತ್ತಿರಬಹುದು ಅಥವಾ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತದೆ.

ಕೋವಿಡ್-19 ಬಿಕ್ಕಟ್ಟು ಹಲವಾರು ಕುಟುಂಬಗಳ ಆದಾಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಹೀಗಾಗಿ ಬೇರೆ ಯಾವುದೇ ರೀತಿಯ ಬೆಂಬಲ ಹಾಗೂ ದಾರಿಯಿಲ್ಲದೇ ಅನೇಕರು ಬಾಲ ಕಾರ್ಮಿಕ ಪದ್ಧತಿಯನ್ನು ಆಶ್ರಯಿಸಬಹುದು ಎಂದು ವರದಿ ತಿಳಿಸಿದೆ.

ಈ ಸಮಯದಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆಗೆ ಹಾನಿಯನ್ನುಂಟಾಗುವ ಸಾಧ್ಯತೆ ಕೂಡಾ ಇದೆ ಎಂದು ವರದಿ ತಿಳಿಸಿದೆ.

ಕೋವಿಡ್-19 ಬಡತನದ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ಬಾಲ ಕಾರ್ಮಿಕರ ಸಂಖ್ಯೆಯಲ್ಲಿಯೂ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.