ETV Bharat / bharat

ಮನೆಯಲ್ಲೇ ನಮಾಜ್ ಮಾಡಿ: ಉಲೇಮಾ ಹಿಂದ್ ಮನವಿ - ತಬ್ಲೀಘಿ ಜಮಾತ್​

ಕೊರೊನಾ ವೈರಸ್​ ಹರಡದಂತೆ ತಡೆಗಟ್ಟಲು ಎಲ್ಲ ಮುಸಲ್ಮಾನರು ಮನೆಯಲ್ಲೇ ನಮಾಜ್ ಮಾಡಬೇಕೆಂದು ಹಲವಾರು ಮುಸ್ಲಿಂ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

jamiat-ulema-e-hind
jamiat-ulema-e-hind
author img

By

Published : Apr 3, 2020, 7:18 PM IST

ಹೊಸದಿಲ್ಲಿ: ಕೋವಿಡ್​-19 ಹರಡುತ್ತಿರುವ ಹಿನ್ನೆಲೆಯಲ್ಲಿ ಮುಸಲ್ಮಾನರು ಮಸೀದಿಗೆ ಹೋಗದೆ ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಬೇಕೆಂದು ಜಮಿಯತ್​-ಎ-ಉಲೇಮಾ ಹಿಂದ್ ಮನವಿ ಮಾಡಿದೆ.

"ಎಲ್ಲ ಮುಸಲ್ಮಾನರು ಮನೆಯಲ್ಲೇ ನಮಾಜ್ ಮಾಡಬೇಕು. ಹಾಗೆಯೇ ಎಲ್ಲ ನಾಗರಿಕರು ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸಿ ಕೊರೊನಾ ವೈರಸ್​ ತಡೆಗಟ್ಟಲು ಸಹಕರಿಸಬೇಕು" ಎಂದು ಉಲೇಮಾ ಹಿಂದ್​ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಹೇಳಿದ್ದಾರೆ.

ಮುಸ್ಲಿಂ ಸಮುದಾಯ ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸುತ್ತ ಮನೆಯಲ್ಲಿಯೇ ನಮಾಜ್​ ಮಾಡಬೇಕು ಎಂದು ಅಖಿಲ ಭಾರತ ಇಮಾಮರ ಸಂಘದ ಅಧ್ಯಕ್ಷ ಉಮರ್ ಅಹ್ಮದ್ ಇಲಿಯಾಸಿ ತಿಳಿಸಿದ್ದಾರೆ. ಕಳೆದ ವಾರ ಆಲ್​ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್​ ಸಹ ಇದೇ ಮನವಿ ಮಾಡಿತ್ತು.

ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್​ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುತೇಕರಿಗೆ ಕೊರೊನಾ ವೈರಸ್​ ಸೋಂಕು ತಗುಲಿರುವುದು ದೃಢ ಪಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.