ETV Bharat / bharat

ದೇಶವ್ಯಾಪಿ ವೇಗ ಹೆಚ್ಚಿಸಿಕೊಂಡ ವೈರಾಣು ಪ್ರಸರಣ: ರಾಜ್ಯವಾರು ಅಂಕಿ-ಅಂಶಗಳು ಹೀಗಿವೆ..

ಜಾಗತಿಕ ಕೊರೊನಾ ಪ್ರಕರಣಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ.

COVID 19
ರಾಜ್ಯವಾರು ಅಂಕಿ-ಅಂಶಗಳು
author img

By

Published : Jul 8, 2020, 12:36 PM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಬುಧವಾರದ ವೇಳೆಗೆ 7,42,417 ತಲುಪಿದೆ. ಮಾರಕ ವೈರಾಣುವಿಗೆ 20,642 ಮಂದಿ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳಲ್ಲಿ 4,56,830 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 2,64,944 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯವಾರು ಕೋವಿಡ್​ ಅಂಕಿ-ಅಂಶಗಳು:

COVID 19
ರಾಜ್ಯವಾರು ಅಂಕಿ-ಅಂಶಗಳು

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ಪ್ರಕರಣಗಳು 2,17,121 ಇವೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೆ 9,250 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 89,313 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ 1,18,558 ಜನಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಆಂಧ್ರ ಪ್ರದೇಶ: ನೆರೆಯ ರಾಜ್ಯದಲ್ಲಿ ಆಂಧ್ರಪ್ರದೇಶದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ 21,197ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ 11,200 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ. ಉಳಿದಂತೆ 9,745 ಜನ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು​, 252 ಜನ ಸೋಂಕಿಗೆ ಬಲಿಯಾಗಿದ್ದಾರೆ.

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,02,831ಕ್ಕೆ ತಲುಪಿದೆ. 25,449 ಆ್ಯಕ್ಟಿವ್​ ಕೇಸ್​ಗಳಿದ್ದು, ಉಳಿದ 74,217 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 3,165 ಕ್ಕೆ ಬಂದು ನಿಂತಿದೆ.

ಗುಜರಾತ್​: ದೇಶದ ಪಶ್ಚಿಮ ದಿಕ್ಕಿನಲ್ಲಿರುವ ರಾಜ್ಯದಲ್ಲಿ ಕೊರೊನಾ ಕೇಸ್​ಗಳು 37,550ಕ್ಕೆ ಏರಿಕೆಯಾಗಿದ್ದು, ಈವರೆಗೆ 1,977 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 8,853 ಸಕ್ರಿಯ ಪ್ರಕರಣಗಳಿದ್ದು, 26,720 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ತೆಲಂಗಾಣ: ರಾಜ್ಯದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 27,612ಕ್ಕೆ ಏರಿಕೆಯಾಗಿದ್ದು, ಈವರೆಗೆ 313 ಜನ ಬಲಿಯಾಗಿದ್ದಾರೆ. 16,287 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ಮರಳಿದ್ದು, 11,012 ಪ್ರಕರಣಗಳಿಗೆ ಚಿಕಿತ್ಸೆ ಮುಂದುವರಿದಿದೆ.

ತಮಿಳುನಾಡು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೊಸ ಕೇಸ್​ಗಳು ಜಾಸ್ತಿಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,18,594 ತಲುಪಿದೆ. ಈವರೆಗೆ ಸೋಂಕಿನಿಂದ 1,636 ಜನ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 45,842 ಸಕ್ರಿಯ ಪ್ರಕರಣಗಳಿದ್ದು, 71,116 ಜನ ಗುಣಮುಖರಾಗಿದ್ದಾರೆ.

ಕರ್ನಾಟಕ: ಕರುನಾಡಿನ ಕೊರೊನಾ ಪ್ರಕರಣಗಳ ಸಂಖ್ಯೆ 26,815ಕ್ಕೇರಿಕೆಯಾಗಿದೆ. ಈವರೆಗೆ ಸೋಂಕಿನಿಂದ 416 ಜನ ಸಾವನ್ನಪ್ಪಿದ್ದಾರೆ. 15,301 ಆ್ಯಕ್ಟಿವ್​ ಕೇಸ್​ಗಳಿದ್ದು, ಉಳಿದಂತೆ 11,098 ಜನ ಗುಣಮುಖರಾಗಿದ್ದಾರೆ.

ಕೇರಳ: ಒಂದು ಹಂತದಲ್ಲಿ ಹತೋಟಿಗೆ ಬಂದಿದ್ದ ಕೇರಳದ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿದೆ. ರಾಜ್ಯದ ಕೊರೊನಾ ಪ್ರಕರಣಗಳ ಸಂಖ್ಯೆ 5,894ಕ್ಕೇರಿಕೆಯಾಗಿದೆ. ಇದರಲ್ಲಿ 3,452 ಜನ ಗುಣಮುಖರಾಗಿದ್ದು, 2,415 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.