ನವದೆಹಲಿ: ಭಾರತದ ಏಳು ಕ್ಲಿನಿಕಲ್ ತಾಣಗಳಲ್ಲಿ ರೋಗಿಗಳ ಮೇಲೆ ನಡೆಸಿದ 3ನೇ ಹಂತದ ವೈರಸ್‌ನಿರೋಧಕ ಔಷಧಗಳ ಪ್ರಯೋಗದ ಸಕಾರಾತ್ಮಕ ಫಲಿತಾಂಶಗಳನ್ನು ದೇಶೀಯ ಫಾರ್ಮಾ ಕಂಪನಿ ಗ್ಲೆನ್‌ಮಾರ್ಕ್ ಪ್ರಕಟಿಸಿದೆ.
ಫಾವಿಪಿರವಿರ್ ಔಷಧಿಯಿಂದ ಚಿಕಿತ್ಸೆ ಪಡೆದ ಕೋವಿಡ್ ರೋಗಿಗಳು ಇತರ ಕ್ಲಿನಿಕಲ್ ಚಿಕಿತ್ಸೆಯ ಆರೈಕೆ ಪಡೆಯುತ್ತಿರುವ ರೋಗಿಗಳಿಗಿಂತ ಬೇಗ ಚೇರಿಸಿಕೊಂಡಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
"ಪ್ರಯೋಗದ 3ನೇ ಹಂತದಲ್ಲಿ, ಶೇ 28.6ರಷ್ಟು ವೇಗವಾಗಿ ವೈರಲ್ ಕ್ಲಿಯರೆನ್ಸ್ ದೊರಕಿದೆ" ಎಂದು ಕಂಪನಿ ಹೇಳುತ್ತಿದೆ. ದೇಶದ ವಿವಿಧೆಡೆಯಿಂದ 150 ಸೋಂಕಿತರನ್ನು ಈ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ರೋಗದ ತೀವ್ರತೆಯ ಆಧಾರದ ಮೇಲೆ ಸೌಮ್ಯ (90 ರೋಗಿಗಳು) ಮತ್ತು ಮಧ್ಯಮ (60 ರೋಗಿಗಳು) ವರ್ಗದ ರೋಗಿಗಳೆಂದು ವರ್ಗೀಕರಿಸಿ, ವಿವಿಧ ಡೋಸೇಜ್ಗಳಲ್ಲಿ ಔಷಧಿ ನೀಡಲಾಗಿದೆ.