ನವದೆಹಲಿ: ರಕ್ಕಸ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯ ಪಿಎಂ ಕೇರ್ಸ್ ನಿಧಿಗೆ ಕೋಟ್ಯಂತರ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಬರುತ್ತಿದೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ಕೈ ಜೋಡಿಸಿದ್ದಾರೆ.
-
People ask what can their country do for them. The real question is what can you do for your country?
— Gautam Gambhir (@GautamGambhir) April 2, 2020 " class="align-text-top noRightClick twitterSection" data="
I am donating my 2 year's salary to #PMCaresFund. You should come forward too! @narendramodi @JPNadda @BJP4Delhi #IndiaFightsCorona
">People ask what can their country do for them. The real question is what can you do for your country?
— Gautam Gambhir (@GautamGambhir) April 2, 2020
I am donating my 2 year's salary to #PMCaresFund. You should come forward too! @narendramodi @JPNadda @BJP4Delhi #IndiaFightsCoronaPeople ask what can their country do for them. The real question is what can you do for your country?
— Gautam Gambhir (@GautamGambhir) April 2, 2020
I am donating my 2 year's salary to #PMCaresFund. You should come forward too! @narendramodi @JPNadda @BJP4Delhi #IndiaFightsCorona
ಈಗಾಗಲೇ ಪಿಎಂ ಕೇರ್ಸ್ ನಿಧಿಗೆ ಸಂಸದರ ನಿಧಿಯಿಂದ 1 ಕೋಟಿ ರೂ ದೇಣಿಗೆ ನೀಡಿರುವ ಗಂಭೀರ್, ತಮ್ಮ ಎರಡು ವರ್ಷಗಳ ಸ್ಯಾಲರಿ ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಲು ನಿರ್ಧರಿಸಿದ್ದಾರೆ. ಸಂಸದರಾಗಿರುವ ಗಂಭೀರ್, ಬೇರೆಯವರ ಬಳಿ ಕೂಡ ಮನವಿ ಮಾಡಿಕೊಂಡಿದ್ದು, ಕೋವಿಡ್-19 ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿ ಎಂದ ಕೋರಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಗಂಭೀರ್, ದೇಶ ನನಗಾಗಿ ಏನು ಮಾಡಿದೆ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಆದರೆ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದು ಮುಖ್ಯ. ನಾನು ನನ್ನ ದೇಶಕ್ಕಾಗಿ ಎರಡು ವರ್ಷದ ಸಂಬಳ ನೀಡುತ್ತಿದ್ದೇನೆ. ನೀವೂ ಕೂಡ ಮುಂದೆ ಬನ್ನಿ ಎಂದಿದ್ದಾರೆ.
ದೇಶದಲ್ಲಿ 1900ರ ಗಡಿ ದಾಟಿರುವ ಕೋವಿಡ್-19 ಈಗಾಗಲೇ 50ಕ್ಕೂ ಹೆಚ್ಚು ಜನರ ಬಲಿ ಪಡೆದುಕೊಂಡು ವೇಗವಾಗಿ ಎಲ್ಲರಲ್ಲೂ ಹರಡುತ್ತಿದೆ.