ನವದೆಹಲಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪೂರ್ವ ಮತ್ತು ಉತ್ತರ ಭಾರತದ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳನ್ನು ಶನಿವಾರ ಮಧ್ಯರಾತ್ರಿಯಿಂದ ಮುಚ್ಚಲು ಗೃಹ ಸಚಿವಾಲಯ ನಿರ್ಧರಿಸಿದೆ. ಆದಾಗ್ಯೂ 20 ಅಂತಾರಾಷ್ಟ್ರೀಯ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ಗಳು (ಐಸಿಪಿಗಳು) ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
-
Ministry of Home Affairs (MHA): The operation of existing India-Bangladesh cross-border passengers trains & passengers buses shall remain suspended from March 15-April 15. #Coronavirus https://t.co/jOxChUvaZd
— ANI (@ANI) March 14, 2020 " class="align-text-top noRightClick twitterSection" data="
">Ministry of Home Affairs (MHA): The operation of existing India-Bangladesh cross-border passengers trains & passengers buses shall remain suspended from March 15-April 15. #Coronavirus https://t.co/jOxChUvaZd
— ANI (@ANI) March 14, 2020Ministry of Home Affairs (MHA): The operation of existing India-Bangladesh cross-border passengers trains & passengers buses shall remain suspended from March 15-April 15. #Coronavirus https://t.co/jOxChUvaZd
— ANI (@ANI) March 14, 2020
ಮಧ್ಯರಾತ್ರಿಯಿಂದ ನಿರ್ಬಂಧವನ್ನು ವಿಧಿಸುವ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆಯ ವಿದೇಶಿ ವಿಭಾಗವು ತೆಗೆದುಕೊಂಡಿದ್ದು, ಶುಕ್ರವಾರ ಜ್ಞಾಪಕ ಪತ್ರ ಹೊರಡಿಸಿದೆ.
"ಭಾರತ-ಬಾಂಗ್ಲಾದೇಶ ಗಡಿ, ಭಾರತ-ನೇಪಾಳ ಗಡಿ, ಭಾರತ-ಭೂತಾನ್ ಗಡಿ ಮತ್ತು ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಚೆಕ್ ಪೋಸ್ಟ್‌ಗಳಲ್ಲಿ ಪ್ರಯಾಣಿಕರ ಸಂಚಾರವನ್ನು ಮಾರ್ಚ್ 15 ಮಧ್ಯರಾತ್ರಿ 12 ರಿಂದ ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ಭಾರತ-ನೇಪಾಳ, ಭಾರತ -ಭೂತಾನ್ ಗಡಿಗಳಲ್ಲಿನ ನಿರ್ಬಂಧಗಳನ್ನು ಮೂರನೇ ದೇಶದ ಪ್ರಜೆಗಳಿಗೆ ಮಾತ್ರ ಅನ್ವಯಿಸಲಾಗುತ್ತದೆ. ಭಾರತೀಯ ನೇಪಾಳ ಅಥವಾ ಭೂತಾನ್ ಪ್ರಜೆಗಳಿಗೆ ಅನ್ವಯಿಸುವುದಿಲ್ಲ.
ಭಾರತ-ಬಾಂಗ್ಲಾದೇಶದ ಗಡಿರೇಖೆಯಲ್ಲಿನ ಪ್ರಯಾಣಿಕರ ರೈಲು ಮತ್ತು ಪ್ರಯಾಣಿಕರ ಬಸ್‌ಗಳ ಸಂಚಾರವನ್ನು ಮಾರ್ಚ್ 15 ರಿಂದ ಏಪ್ರಿಲ್ 15 ಅಥವಾ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ವೀಸಾಗಳನ್ನು ಹೊಂದಿರುವ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ವಿಶ್ವಸಂಸ್ಥೆ ಸಿಬ್ಬಂದಿಗಳು ಐಸಿಪಿ (ಇಂಟಿಗ್ರೇಟೆಡ್ ಚೆಕ್ ಪೋಸ್ಟ್) ದಾಟಲು ಅವಕಾಶವಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ ಅವರನ್ನು ಕೂಡ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ.