ETV Bharat / bharat

ವಿಶೇಷ ಅಂಕಣ: ಕೋವಿಡ್ -19 ಮತ್ತು ಬಡತನ - ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ

ಜಾಗತಿಕ ಮಟ್ಟದಲ್ಲಿ, ಇತರೆ ದೇಶಗಳಲ್ಲಿ ಘೋಷಣೆ ಮಾಡಲಾಗಿರುವ ಉತ್ತೇಜನ ಪ್ಯಾಕೇಜ್‌ ಭಾರತ ದೇಶದಲ್ಲಿ ಘೋಷಣೆ ಮಾಡಿರುವುದಕ್ಕಿಂದ ಅತ್ಯಂತ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ಆರೋಗ್ಯ ವ್ಯವಸ್ಥೆಗಳ ವಿಷಯದಲ್ಲಿ ಇತರ ದೇಶಗಳಿಂದ ಭಾರತ ಕಲಿಯಬೇಕಾಗಿದೆ.

Poverty
ಬಡತನ
author img

By

Published : Oct 19, 2020, 9:21 PM IST

ಇಂದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ. 2020 ರ ಈ ದಿನದ ವಿಷಯವು ವಿಶ್ವದ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಪರಿಸರ ನ್ಯಾಯವನ್ನು ನೀಡುವುದು ಸಾಧಿಸುವ ಗುರಿಯಾಗಿದೆ. ಬಹು ಆಯಾಮದಲ್ಲಿ ಹೆಚ್ಚುತ್ತಿರುವ ಬಡತನದ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ವಿಷಯಗಳು ಬೇರ್ಪಡಿಸಲಾಗದ ಅವಿಭಾಜ್ಯ ಅಂಗವಾಗಿ ಹೆಣೆದುಕೊಂಡಿವೆ.

ಹವಾಮಾನ ಬದಲಾವಣೆ ಮತ್ತು ಪರಿಸರ ಸವಾಲುಗಳನ್ನು ಒಂದೇ ಸಮಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪರಿಹರಿಸದೆ ಹೋದರೆ ಸಾಮಾಜಿಕ ನ್ಯಾಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಆದಾಯದ ಬಡತನವನ್ನು ಪರಿಹರಿಸುವಲ್ಲಿ ಪ್ರಗತಿ ಸಾಧಿಸಲಾಗಿದ್ದರೂ, ಬಡತನದ ಇತರ ಪ್ರಮುಖ ಆಯಾಮಗಳನ್ನು ಪರಿಹರಿಸುವಲ್ಲಿ ಕಡಿಮೆ ಯಶಸ್ಸು ಕಂಡುಬಂದಿದೆ, ಪರಿಸರದ ವೇಗವಾಗಿ ಬೆಳೆಯುತ್ತಿರುವ ಪ್ರಭಾವ ಸೇರಿದಂತೆ ಹೆಚ್ಚು ಸಮಗ್ರ ವಿಧಾನದಲ್ಲಿ ಬಡತನದ ನಿರ್ಮೂಲನೆಗೆ ಪ್ರಯತ್ನ ಆಗಬೇಕಿದೆ.

ಪ್ರಪಂಚದ ಅನೇಕ ಭಾಗಗಳಲ್ಲಿ ಹಸಿವಿನ ಹರಡುವಿಕೆಯು ಜಗತ್ತು ಪರಿಹರಿಸಬೇಕಾದ ಬಡತನಕ್ಕೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯಾಗಿದೆ. ಸೂಕ್ತ ರೀತಿಯಲ್ಲಿ ಹಸಿವನ್ನು ಎದುರಿಸುವ ಪ್ರಯತ್ನಗಳಿಗಾಗಿ, ಯುದ್ಧ ಮತ್ತು ಸಂಘರ್ಷದಲ್ಲಿ ಹಸಿವನ್ನು ಒಂದು ಅಸ್ತ್ರವಾಗಿ ಬಳಕೆ ಮಾಡುವುದನ್ನ ತಡೆಯಲು ಮಾಡಿದ ಅಭೂತಪೂರ್ವ ಪ್ರಯತ್ನ ಮತ್ತು ಪೀಡಿತ ಪ್ರದೇಶಗಳಲ್ಲಿ ಶಾಂತಿಗಾಗಿ ಉತ್ತಮ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಲು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನೊಬೆಲ್ ಸಮಿತಿಯು ವಿಶ್ವ ಆಹಾರ ಕಾರ್ಯಕ್ರಮಕ್ಕೆ (WFP) 2020 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿತು. ತೀವ್ರವಾದ ಆಹಾರ ಅಭದ್ರತೆ ಮತ್ತು ಹಸಿವಿನಿಂದ ಬಳಲುತ್ತಿದ್ದ 88 ದೇಶಗಳಲ್ಲಿನ ಸುಮಾರು 100 ಮಿಲಿಯನ್ ಜನರಿಗೆ 2019 ರಲ್ಲಿ ಡಬ್ಲ್ಯುಎಫ್‌ಪಿ ಆಹಾರದ ನೆರವು ನೀಡಿತು.

ಉದ್ಯೋಗ ಮತ್ತು ಬಡತನದ ಮೇಲೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿನಾಶಕಾರಿ ಪರಿಣಾಮದಿಂದಾಗಿ ಈ ವರ್ಷದ ಬಡತನದ ವಿಷಯವು ಹೆಚ್ಚು ಮಹತ್ವದ್ದಾಗಿದೆ. ಬಡತನ ರೇಖೆಗಿಂತ ಕೆಳಗಿನ ಜನಸಂಖ್ಯೆಯು ಹೆಚ್ಚಾಗಬಹುದು, ನಿರುದ್ಯೋಗ ಸಹ ಹೆಚ್ಚಾಗಬಹುದು ಮತ್ತು ಅನೇಕ ಅನೌಪಚಾರಿಕ ಕಾರ್ಮಿಕರು ಬಡತನಕ್ಕೆ ಸಿಲುಕಬಹುದು ಎಂದು ಕೆಲ ಸೂಚ್ಯಂಕಗಳು ತೋರಿಸುತ್ತವೆ. ಹೆಲ್ಸಿಂಕಿಯ ಯುಎನ್-ವೈಡರ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ಕ್ಯಾಪುಟಾ ಆದಾಯ ಶೇಕಡಾ 10 ರಷ್ಟು ಕುಸಿತ ಕಂಡಿರುವುದು ತೋರುತ್ತದೆ, ಬಡತನದ ಹೆಡ್‌ಕೌಂಟ್‌ನ ಹೆಚ್ಚಳವು ಕ್ರಮವಾಗಿ ಸುಮಾರು US $ 1.90, US $ 3.20 ಮತ್ತು US $ 5.50 ಅಂದರೆ 180, 280, ಮತ್ತು 250 ದಶಲಕ್ಷ ಜನರಲ್ಲಿ ಆಗಿದೆ, ಆದರೆ ಕುಸಿತವು ಶೇಕಡಾ 20 ಆಗಿದ್ದರೆ, ಬಡವರ ಹೆಚ್ಚಳವು ಸುಮಾರು 420, 580 ಮತ್ತು 520 ಮಿಲಿಯನ್ ಜನರು ಆಗಿರಬಹುದು.

ಜಾಗತಿಕ ಮಟ್ಟದಲ್ಲಿ, COVID-19 ನ ಸಂಭಾವ್ಯ ಪರಿಣಾಮವು 2030 ರ ವೇಳೆಗೆ ಬಡತನವನ್ನು ಕೊನೆಗೊಳಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗೆ ನಿಜವಾದ ಸವಾಲನ್ನು ಒಡ್ಡುತ್ತದೆ ಏಕೆಂದರೆ 1990 ರಿಂದ ಇದೇ ಮೊದಲ ಬಾರಿಗೆ ಮೂರು ಬಡತನ ರೇಖೆಗಳ ಅಡಿಯಲ್ಲಿ ಬಡವರ ಸಂಖ್ಯೆಯ ಸಾಪೇಕ್ಷ ಮತ್ತು ಸಂಪೂರ್ಣ ಗಾತ್ರದಲ್ಲಿ ಹೆಚ್ಚಳವು ದಾಖಲಾಗಲಿದೆ ಮತ್ತು ಅವರು ಬಡತನವನ್ನು ಕಡಿಮೆ ಮಾಡುವಲ್ಲಿ ಸುಮಾರು ಒಂದು ದಶಕದ ಪ್ರಗತಿಯ ಹಿಮ್ಮುಖವನ್ನು ಪ್ರತಿನಿಧಿಸಬಹುದು. ದಿನಕ್ಕೆ 1.9 ಅಮೆರಿಕನ್‌ ಡಾಲರ್ ಮತ್ತು 3.2 ಅಮೆರಿಕನ್‌ ಡಾಲರ್ ದಿನದ ಆದಾಯ ಪಡೆಯುವ ಬಡತನದ ರೇಖೆಗಿಂತ ಕಡಿಮೆ ಇರುವ ಹೊಸ ಬಡವರ ಸಾಂದ್ರತೆಯು ವಿಶ್ವದ ಬಡ ಪ್ರದೇಶಗಳಲ್ಲಿ ಸಂಭವಿಸುತ್ತದೆ, ಮುಖ್ಯವಾಗಿ ಸಬ್ ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ, ಈ ರಾಷ್ಟ್ರಗಳು ವಿಶ್ವದ ಮೂರನೇ ಎರಡರಷ್ಟು ಮತ್ತು 80–85 ಶೇಕಡಾ ಒಟ್ಟು ಬಡವರನ್ನ ಹೊಂದಿವೆ. ದಕ್ಷಿಣ ಏಷ್ಯಾದಲ್ಲಿ, ನಾವು ದಿನಕ್ಕೆ 3.2 ಅಮೆರಿಕನ್ ಡಾಲರ್‌ ಕನಿಷ್ಠ ಆದಾಯದ ಲೆಕ್ಕ ತೆಗೆದುಕೊಂಡರೆ 2018 ರಲ್ಲಿ 847 ಮಿಲಿಯನ್‌ ಇದ್ದ ಬಡತನವು 2020 ರಲ್ಲಿ 915 ಮಿಲಿಯನ್‌ಗೆ ಹೆಚ್ಚಾಗಬಹುದು.

ಇತ್ತೀಚಿನ ವಿಶ್ವ ಬ್ಯಾಂಕಿನ ಅಧ್ಯಯನವು COVID-19 ಸಾಂಕ್ರಾಮಿಕವು ಈ ವರ್ಷ ಹೆಚ್ಚುವರಿ 88 ದಶಲಕ್ಷದಿಂದ 115 ದಶಲಕ್ಷ ಜನರನ್ನು ತೀವ್ರ ಬಡತನಕ್ಕೆ ತಳ್ಳುತ್ತದೆ ಎಂದು ಅಂದಾಜಿಸಲಾಗಿದೆ, ಆರ್ಥಿಕ ಹಿಂಜರಿತದ ತೀವ್ರತೆಯ ಆಧಾರದ ಮೇಲೆ ಹೇಳುವುದಾದರೆ 2021 ರ ವೇಳೆಗೆ ಒಟ್ಟು ತೀವ್ರ ಬಡವರ ಸಂಕ್ಯೆ 150 ದಶಲಕ್ಷದಷ್ಟು ಏರಿಕೆಯಾಗಲಿದೆ. ಸುಮಾರು 25 ವರ್ಷಗಳಿಂದ ತೀವ್ರ ಬಡತನ ಸ್ಥಿರವಾಗಿ ಕುಸಿದಿತ್ತು. ಆದರೆ ಈಗ, ಇದೊಂದು ಪೀಳಿಗೆಯಲ್ಲಿ ಮೊದಲ ಬಾರಿಗೆ, ಬಡತನವನ್ನು ಕೊನೆಗೊಳಿಸುವ ಅನ್ವೇಷಣೆಯು ಅದರ ಕೆಟ್ಟ ಹಿನ್ನಡೆ ಅನುಭವಿಸಿದೆ. ಈ ಹಿನ್ನಡೆ ಹೆಚ್ಚಾಗಿ ಪ್ರಮುಖ ಸವಾಲುಗಳಾದ COVID 19, ಸಂಘರ್ಷ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳಿಂದ ಆಗಿದೆ. ಎಲ್ಲ ದೇಶಗಳು ಈ ಹಿನ್ನಡೆ ಎದುರಿಸುತ್ತಿವೆ, ಆದರೆ, ನಿರ್ದಿಷ್ಟವಾಗಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳು ಇದರ ಪರಿಣಾಮವನ್ನು ಹೆಚ್ಚಾಗಿ ನೋಡುತ್ತಿವೆ. 2019 ರಿಂದ 2020 ರವರೆಗೆ ತೀವ್ರ ಬಡತನದ ಹೆಚ್ಚಳವು ವಿಶ್ವಬ್ಯಾಂಕ್ ಜಾಗತಿಕವಾಗಿ ಬಡತನವನ್ನು ಸ್ಥಿರ ರೀತಿಯಲ್ಲಿ ಪತ್ತೆ ಹಚ್ಚಲು ಪ್ರಾರಂಭಿಸಿದಾಗಿನಿಂದ ಯಾವುದೇ ಸಮಯಕ್ಕಿಂತ ದೊಡ್ಡದಾಗಿದೆ ಎಂದು ಊಹಿಸಲಾಗಿದೆ. COVID-19 ಇದೀಗ ಹೊಸ ಅಡಚಣೆಯಾಗಿದ್ದರೂ, ಘರ್ಷಣೆಗಳು ಮತ್ತು ಹವಾಮಾನ ಬದಲಾವಣೆಯು ವಿಶ್ವದ ಕೆಲವು ಭಾಗಗಳಲ್ಲಿ ತೀವ್ರ ಬಡತನವನ್ನು ಹೆಚ್ಚಿಸುತ್ತಿವೆ.

ಕೊಳಗೇರಿಗಳಲ್ಲಿ ಕರೋನ ವೈರಸ್ ನಿರ್ಮೂಲನೆ ಮಾಡುವುದರಲ್ಲಿ ಮುಂಬೈ ನಗರವನ್ನು ವಿಶ್ವ ಬ್ಯಾಂಕಿನ ಅಧ್ಯಯನವು ಮೆಚ್ಚಿದೆ. ಪರಿಣಾಮಕಾರಿ ವಿಧಾನಗಳು ಸಮುದಾಯದ ಸದಸ್ಯರ ಕೌಶಲ್ಯ ಮತ್ತು ಸಮರ್ಪಣೆಯನ್ನು ಗಮನದಲ್ಲಿರಿಸಿಕೊಂಡಿವೆ ಎಂದು ಗಮನಿಸಿದ ವಿಶ್ವ ಬ್ಯಾಂಕ್, ಮುಂಬೈಯಲ್ಲಿ, ನಗರದ ದೊಡ್ಡ ನಗರ ವಸಾಹತುಗಳಲ್ಲಿ ಒಂದಾದ ಧಾರವಿ ಕೊಳಗೇರಿಯಲ್ಲಿ ಕರೋನ ವೈರಸ್ ಅನ್ನು ವೇಗವಾಗಿ ಹರಡುವುದನ್ನ ತಡೆಯುವಲ್ಲಿ ನಗರದ ಅಧಿಕಾರಿಗಳು ಸಮರ್ಥರಾಗಿದ್ದಾರೆ. ಸಾಮೂಹಿಕ ತಪಾಸಣೆ ಆಧಾರಿತ ಯೋಜನೆ ಮೂಲಕ ಖಾಸಗಿ ವೈದ್ಯಕೀಯ ಚಿಕಿತ್ಸಾಲಯಗಳ ಸಿಬ್ಬಂದಿ ಬಳಸಿಕೊಂಡು ಸಮುದಾಯದ ಸದಸ್ಯರನ್ನು ಸಜ್ಜುಗೊಳಿಸುವ ಮೂಲಕ ಜ್ವರ ಮತ್ತು ಆಮ್ಲಜನಕದ ಮಟ್ಟಗಳನ್ನ ಪರೀಕ್ಷೆ ನಡೆಸಲಾಗಿದೆ.

ಭಾರತದಲ್ಲಿ ಬಡತನದ ಮೇಲೆ ಪರಿಣಾಮವು ತುಂಬಾ ಹೆಚ್ಚಾಗಿದೆ. ಆರ್ಥಿಕ ಆಘಾತವು ಎರಡು ಕಾರಣಗಳಿಗಾಗಿ ಭಾರತಕ್ಕೆ ಹೆಚ್ಚು ತೀವ್ರವಾಗಿದೆ. ಮೊದಲನೆಯದಾಗಿ, COVID-19 ರ ಪೂರ್ವದಲ್ಲಿ, ಆರ್ಥಿಕತೆಯು ಈಗಾಗಲೇ ನಿಧಾನವಾಗುತ್ತಿತ್ತು, ಅಸ್ತಿತ್ವದಲ್ಲಿರುವ ನಿರುದ್ಯೋಗ, ಕಡಿಮೆ ಆದಾಯ, ಗ್ರಾಮೀಣ ಯಾತನೆ, ಅಪೌಷ್ಟಿಕತೆ ಮತ್ತು ವ್ಯಾಪಕ ಅಸಮಾನತೆಯ ಕಾರಣದಿಂದ ಆರ್ಥಿಕ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಎರಡನೆಯದಾಗಿ, ಭಾರತದ ದೊಡ್ಡ ಅನೌಪಚಾರಿಕ ವಲಯವು ವಿಶೇಷವಾಗಿ ಅತ್ಯಂತ ದುರ್ಬಲವಾಗಿದೆ. ರಾಷ್ಟ್ರೀಯ ಒಟ್ಟು 465 ಮಿಲಿಯನ್ ಕಾರ್ಮಿಕರಲ್ಲಿ, ಸುಮಾರು 91% (422 ಮಿಲಿಯನ್) ಜನರು 2017-18ರಲ್ಲಿ ಅನೌಪಚಾರಿಕ ಕಾರ್ಮಿಕರಾಗಿದ್ದರು. ನಿಯಮಿತ ಸಂಬಳ ಅಥವಾ ಆದಾಯದ ಕೊರತೆಯಿಂದಾಗಿ, ಈ ಕೃಷಿ, ವಲಸೆಗಾರ ಮತ್ತು ಇತರ ಅನೌಪಚಾರಿಕ ಕಾರ್ಮಿಕರು ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ತೊಂದರೆ ಅನುಭವಿಸಿದ್ದಾರೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಯ ಅಂದಾಜಿನ ಪ್ರಕಾರ ಈ ಬಾರಿ ನಿರುದ್ಯೋಗದ ಪ್ರಮಾಣವು ಾಪಾರವಾಗಿ ಅಂದರೆ 8.4% ರಿಂದ 27% ಕ್ಕೆ ಏರಿದೆ. ದೇಶದಲ್ಲಿ 122 ಮಿಲಿಯನ್ ಉದ್ಯೋಗಗಳು ನಷ್ಟವಾಗಿವೆ. ಅದರಲ್ಲಿ ಸಣ್ಣ ವ್ಯಾಪಾರಿಗಳು ಮತ್ತು ಪ್ರಾಸಂಗಿಕ ಕಾರ್ಮಿಕರು 91 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡ ಕಾರ್ಮಿಕರಾಗಿದ್ದಾರೆ. ಭಾರತದಲ್ಲಿ 400 ಮಿಲಿಯನ್ ಅನೌಪಚಾರಿಕ ಕಾರ್ಮಿಕರು ಬಿಕ್ಕಟ್ಟಿನ ಸಂದರ್ಭದಲ್ಲಿ ಬಡತನಕ್ಕೆ ಆಳವಾಗಿ ಬೀಳುವ ಅಪಾಯವಿದೆ ಎಂದು ILO ವರದಿಯೊಂದು ಬಹಿರಂಗಪಡಿಸಿದೆ. ಕೋವಿಡ್ -19 ರ ಮೊದಲ ಕೆಲವು ತಿಂಗಳುಗಳಲ್ಲಿ 77% ರಷ್ಟು ಕುಟುಂಬಗಳು ಮೊದಲಿಗಿಂತ ಕಡಿಮೆ ಆಹಾರವನ್ನು ಹೊಂದಿದ್ದಾರೆ ಎಂದು ಅಜೀಮ್ ಪ್ರೇಮ್ಜಿ ವಿಶ್ವವಿದ್ಯಾಲಯದ ಅಧ್ಯಯನವು ತೋರಿಸುತ್ತದೆ.

ಆತ್ಮನಿರ್ಭರ ಘೋಷಣೆಯ ಭಾಗವಾಗಿ ಭಾರತದ ಆರ್ಥಿಕ ಉತ್ತೇಜನ ಪ್ಯಾಕೇಜ್ ಆಗಿ ಕೇಂದ್ರ ಸರ್ಕಾರವು ಸುಮಾರು ರೂ. 20 ಲಕ್ಷ ಕೋಟಿ ಘೋಷಣೆ ಮಾಡಿದ್ದರೂ ಸಹ, 10% ರಷ್ಟು ಜಿಡಿಪಿ ಪ್ಯಾಕೇಜಿನ ಹಣಕಾಸಿನ ಉತ್ತೇಜನವು ಜಿಡಿಪಿಯ ಕೇವಲ 1% ರಿಂದ 2% ಮಾತ್ರ ಎಂದು ವಿಶ್ಲೇಷಕರು ಹೇಳುತ್ತಾರೆ. ಅಭೂತಪೂರ್ವವಾದ ಬಿಕ್ಕಟ್ಟಿನ ಪ್ರಮಾಣವನ್ನು ಗಮನಿಸಿದರೆ ಬಡವರಿಗೆ ಅಷ್ಟೇ ಪ್ರಮಾಣದಲ್ಲಿ ಆರ್ಥಿಕ ಸಹಾಯ ಮಾಡಬೇಕಾಗಿರುವುದು ಗಮನಾರ್ಹ ಅಂಶವಾಗಿದೆ. ಸದ್ಯ ಈಗಿರುವ ಭೀಕರ ಸಮಸ್ಯೆಗೆ ಹೋಲಿಸಿದರೆ ಕೇಂದ್ರ ಸರ್ಕಾರದ ಹಣಕಾಸಿನ ಪರಿಹಾರ ಅಥವಾ ಉತ್ತೇಜನವು ಸಮರ್ಪಕವಾಗಿಲ್ಲ. ಮೊದಲ ುತ್ತೇಜನ ಪ್ಯಾಕೇಜ್‌ ಘೋಷಣೆಯ ನಂತರ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರು ಸಾಮಾಜಿಕ ವರ್ಗಾವಣೆ ಯೋಜನೆಗಳೊಂದಿಗೆ ಸರ್ಕಾರ ಹೆಚ್ಚು ಪರಿಣಾಮಕಾರಿಯಾಗಿ ಇರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಅವರ ಪ್ರಕಾರ “ಸರ್ಕಾರವು ಈಗ ನೀಡುತ್ತಿರುವುದು ಕೇವಲ ಒಂದು ಸಣ್ಣ ಆಲೂಗಡ್ಡೆ ಮಾತ್ರ- ದೇಶಾದ್ಯಂತ ಇರುವ ಜನರು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೆಲವೆ ಕೆಲವು ದಿನಗಳಲ್ಲಿ ಖರ್ಚು ಮಾಡುತ್ತಾರೆ”.

ಜಾಗತಿಕ ಮಟ್ಟದಲ್ಲಿ, ಇತರೆ ದೇಶಗಳಲ್ಲಿ ಘೋಷಣೆ ಮಾಡಲಾಗಿರುವ ಉತ್ತೇಜನ ಪ್ಯಾಕೇಜ್‌ ಭಾರತ ದೇಶದಲ್ಲಿ ಘೋಷಣೆ ಮಾಡಿರುವುದಕ್ಕಿಂದ ಅತ್ಯಂತ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ಆರೋಗ್ಯ ವ್ಯವಸ್ಥೆಗಳ ವಿಷಯದಲ್ಲಿ ಇತರ ದೇಶಗಳಿಂದ ಭಾರತ ಕಲಿಯಬೇಕಾಗಿದೆ. ಉದಾಹರಣೆಗೆ, ಕೆಲವು ಶ್ರೀಮಂತ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆಗಳು COVID-19 ರ ಹೊಡೆತದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿಯುವ ಹಂತಕ್ಕೆ ಬಂದಿದ್ದರೂ, ವಿಯೆಟ್ನಾಂ ದೇಶವು ಶೀಘ್ರವಾಗಿ ಈ ಸಮಸ್ಯೆ ಪರಿಹರಿಸಿಕೊಂಡು ಆರೋಗ್ಯ ವ್ಯವಸ್ಥೆಯನ್ನ ನಿಯಂತ್ರಣಕ್ಕೆ ತಂದುಕೊಂಡಿದೆ. ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ಸೇವೆಯನ್ನ ತ್ವರಿತ, ಪರಿಣಾಮವಾಗಿಯಾಗಿ ಸುಧಾರಿಸಿದ ಈ ದೇಶದ ಕಾರ್ಯತಂತ್ರ ಇತರ ಕಡಿಮೆ-ಆದಾಯದ ದೇಶಗಳಿಗೆ ಕಾರ್ಯಸಾಧ್ಯವಾದ ಮಾದರಿಯಾಗಿ ಕಾರ್ಯನಿರ್ವಹಿಸಬಹುದೇ?

97 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ, ವಿಯೆಟ್ನಾಂ ದೇಶವು SARS, MERS, ದಡಾರ ಮತ್ತು ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳನ್ನ ತಡೆಗಟ್ಟುವ ಪರಿಣಾಮವಾಗಿ ಅನುಭವವನ್ನು ಹೊಂದಿದೆ. ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಈ ದೇಶವು ಹಲವು ವರ್ಷಗಳಿಂದ ನಿರಂತರವಾಗಿ ಶ್ರಮ ಪಟ್ಟಿದೆ. ಆದ್ದರಿಂದ ಇದು ಈ ರೀತಿಯ ಏಕಾಏಕಿ ದಾಳಿ ಇಟ್ಟ ಕೊರೋನಾ ವೈರಸ್‌ ಮಹಾಮಾರಿಯ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗಿದೆ. ವಿಯೆಟ್ನಾಂ ದೇಶವು ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ತುಲನಾತ್ಮಕವಾಗಿ ವೆಚ್ಚ-ಪರಿಣಾಮಕಾರಿ ನಾಲ್ಕು ಪರಿಹಾರಗಳನ್ನು ಅವಲಂಬಿಸಿದೆ, ಇದರಲ್ಲಿ ಕಾರ್ಯತಂತ್ರದ ಪರೀಕ್ಷೆ, ಅಪ್ಲಿಕೇಶನ್‌ಗಳ ಮೂಲಕ ಸಂಪರ್ಕ ಪತ್ತೆ ಹಚ್ಚುವಿಕೆ ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂವಹನ ಅಭಿಯಾನಗಳು ಸೇರಿವೆ.

ಕೋವಿಡ್ -19 ರ ಕಾರಣದಿಂದಾಗಿ ದೇಶದ ಬಡತನದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಭಾರತ ಸರ್ಕಾರ ಶೀಘ್ರ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮೊದಲನೆಯದಾಗಿ, ಎಂಜಿಎನ್‌ಆರ್‌ಇಜಿಎ (MGNREGA)ಗೆ ಹೆಚ್ಚುತ್ತಿರುವ ಅನುದಾನದ ಹಂಚಿಕೆ ಸೇರಿದಂತೆ ಬಡವರಿಗೆ ಆಹಾರ ಮತ್ತು ನಗದು ವರ್ಗಾವಣೆಯಂತಹ ಪರಿಹಾರ ಕ್ರಮಗಳು ಅಗತ್ಯ. ಎರಡನೆಯದಾಗಿ, ಸಾಂಕ್ರಾಮಿಕವು ನಮ್ಮ ಆರೋಗ್ಯ ಮೂಲಸೌಕರ್ಯವನ್ನು ಪುನರುಜ್ಜೀವನಗೊಳಿಸಲು ಒಂದು ಅವಕಾಶವನ್ನು ನೀಡಿದೆ. ಮೂರನೆಯದಾಗಿ, ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ. 2020-21ರಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ 10 ರಷ್ಟು ಕುಗ್ಗುವ ನಿರೀಕ್ಷೆಯಿದೆ. ನಾಲ್ಕನೆಯದಾಗಿ, ಕೃಷಿ ಬಡವರ ಪರವಾದ ಕ್ಷೇತ್ರವಾಗಿದೆ. ಇತ್ತೀಚಿನ ಕೃಷಿ ಸುಧಾರಣೆಗಳು ಒಟ್ಟು ರೈತರಲ್ಲಿ 86% ರಷ್ಟಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಬೇಕಾಗಿದೆ.

ಅತ್ಯಂತ ಮುಖ್ಯವಾಗಿ, ಬಡತನ ಕಡಿಮೆ ಮಾಡಲು ಉದ್ಯೋಗ ಸೃಷ್ಟಿ ಬಹುಮುಖ್ಯವಾಗಿದೆ. ಸದ್ಯ ಇರುವ ಕೆಲವು ಉದ್ಯೋಗ ಸವಾಲುಗಳು ಹೀಗಿವೆ:

(ಎ) ವರ್ಷಕ್ಕೆ 7 ರಿಂದ 8 ಮಿಲಿಯನ್ ಉತ್ಪಾದಕ ಉದ್ಯೋಗಗಳನ್ನು ಸೃಷ್ಟಿಸುವುದು (ಬಿ) ಕಾರ್ಮಿಕರ ಬೇಡಿಕೆಯ ಪೂರೈಕೆಯ ನಡುವಿನ ಹೊಂದಾಣಿಕೆಯನ್ನು ಸರಿಪಡಿಸುವುದು: ದಕ್ಷಿಣ ಕೊರಿಯಾದಲ್ಲಿ 96% ಕ್ಕೆ ಹೋಲಿಸಿದರೆ ಭಾರತದ 10% ಕ್ಕಿಂತ ಕಡಿಮೆ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ ಇದೆ, ಜಪಾನ್‌ನಲ್ಲಿ 80%, ಜರ್ಮನಿಯಲ್ಲಿ 95%, ಯುಕೆಯಲ್ಲಿ 68% ಮತ್ತು ಯುನೈಟೆಡ್‌ ಸ್ಟೇಟ್ಸ್‌ ಆಫ್ ಅಮೆರಿಕದಲ್ಲಿ 52% ರಷ್ಟಿದೆ. (ಸಿ) ಉದ್ಯಮಗಳು ಮತ್ತು ಕಾರ್ಯಪಡೆಯ ಔಪಚಾರಿಕೀಕರಣ (ಡಿ) ಎಂಎಸ್‌ಎಂಇ ಮತ್ತು ಅನೌಪಚಾರಿಕ ವಲಯವನ್ನು ಕೇಂದ್ರೀಕರಿಸುವುದು (ಇ) ಯಾಂತ್ರೀಕೃತಗೊಂಡ ಮತ್ತು ತಂತ್ರಜ್ಞಾನ ಕ್ರಾಂತಿಗೆ ಸಿದ್ಧವಾಗುವುದು (ಎಫ್) ಎಲ್ಲರಿಗೂ ಸಾಮಾಜಿಕ ಭದ್ರತೆ ಮತ್ತು ಯೋಗ್ಯ ಕೆಲಸದ ಪರಿಸ್ಥಿತಿಗಳನ್ನ ನಿರ್ಮಾಣ ಮಾಡುವುದು ಇಂದಿನ ಅತ್ಯಂತ ಅಗತ್ಯವಾಗಿದೆ.

ಮುಂದಿನ ಕೆಲವು ವರ್ಷಗಳಲ್ಲಿ ಗಿಗ್ ಆರ್ಥಿಕತೆಗೆ ಉದ್ಯೋಗ ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ರಫ್ತು ಮಾಡುವ ಉತ್ಪಾದನೆಯಲ್ಲಿ ದ್ವಿಮುಖ ತಂತ್ರದ ಅಗತ್ಯವಿದೆ. ಮೊದಲನೆಯದು ಕಾರ್ಮಿಕ ತೀವ್ರ ವಲಯಗಳಾದ ಉಡುಪು, ಪಾದರಕ್ಷೆಗಳು, ಪೀಠೋಪಕರಣಗಳು ಮತ್ತು ಹಲವಾರು ಬೆಳಕಿನ ಉತ್ಪಾದನೆಗಳನ್ನು ಉತ್ತೇಜಿಸುವುದು. ಜಾಗತಿಕ ಮೌಲ್ಯ ಸರಪಳಿಯಲ್ಲಿ ಚೀನಾ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಅದರ ಲಾಭ ಪಡೆಯುವುದು, ಉದ್ಯೋಗ ಸೃಷ್ಟಿಗೆ ನಾವು ನವೀನ ಮತ್ತು ಹೊರಗಿನ ಚಿಂತನೆಯನ್ನು ಅಭಿವೃದ್ಧಿಪಡಿಸಬೇಕು

ಅಂತಿಮವಾಗಿ, ಈ ವರ್ಷದ ವಿಷಯವಾಗಿರುವ ಹವಾಮಾನ ಬದಲಾವಣೆಯು ಬಡತನ ನಿವಾರಣೆಗೆ ನಿರಂತರ ಅತ್ಯಂತ ಆತಂಕಕಾರಿಯಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳುತ್ತದೆ. ಹವಾಮಾನ ಬದಲಾವಣೆಯು 2030 ರ ವೇಳೆಗೆ 68 ದಶಲಕ್ಷದಿಂದ 135 ದಶಲಕ್ಷ ಜನರನ್ನು ಬಡತನಕ್ಕೆ ದೂಡುತ್ತದೆ ಎಂದು ಹಲವು ಅಂದಾಜುಗಳು ಹೇಳುತ್ತವೆ. ಹವಾಮಾನ ಬದಲಾವಣೆಯು ಪ್ರಮುಖವಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬಡವರ ಸಂಖ್ಯೆ ಹೊಂದಿರುವ ಪ್ರದೇಶಗಳಾದ ಉಪ-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ಹೆಚ್ಚು ಗಂಭೀರ ಅಪಾಯದ ವಿಷಯವಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳಲ್ಲಿ ಹೆಚ್ಚಿದ ಆಹಾರ ಬೆಲೆಗಳು, ಹದಗೆಡುತ್ತಿರುವ ಆರೋಗ್ಯ ಪರಿಸ್ಥಿತಿಗಳು, ಬಡವರು ಮತ್ತು ಸಾಮಾನ್ಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಪ್ರವಾಹದಂತಹ ವಿಪತ್ತುಗಳಿಗೆ ಒಡ್ಡಿಕೊಳ್ಳುವುದು ಸಹ ಒಳಗೊಂಡಿರಬಹುದು. ವಿಶೇಷವಾಗಿ ಬಡ ದೇಶಗಳಿಗೆ, ಹವಾಮಾನ ಬದಲಾವಣೆಯು ಬಹುಶಃ ಅತ್ಯಂತ ತೊಂದರೆಯಾಗುವ ಸವಾಲಾಗಿದೆ. ಆದರೆ, ಆದೇಶಗಳು ಸೃಷ್ಟಿಸದ ಸಮಸ್ಯೆಗೆ ಆ ದೇಶಗಳು ತುತ್ತಾಗುತ್ತವೆ. ಜಾಗತಿಕ ತಾಪಮಾನ ಮತ್ತು ಸಮುದ್ರ ಮಟ್ಟಗಳಲ್ಲಿನ ಮಾನವ-ಪ್ರೇರಿತ ಏರಿಕೆಗಳು ಬಹುತೇಕವಾಗಿ ಹೆಚ್ಚಿನ ಆದಾಯದ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ದೊಡ್ಡದಾದ, ವೇಗವಾಗಿ ಬೆಳೆಯುತ್ತಿರುವ ಮಧ್ಯಮ-ಆದಾಯದ ದೇಶಗಳ ಶಕ್ತಿಯ ಬಳಕೆಯ ಮಟ್ಟದ ಪರಿಣಾಮವಾಗಿದೆ.

ಒಟ್ಟಾರೆ ಹೇಳುವುದಾದರೆ,1990 ರ ನಂತರ ಮೊದಲ ಬಾರಿಗೆ ಸಾಂಕ್ರಾಮಿಕ ರೋಗದಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಬಡತನ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಡತನ ನಿರ್ಮೂಲನೆ ದಿನದಂದು, ಬಡತನವನ್ನು ಕಡಿಮೆ ಮಾಡಲು ಮತ್ತು 2030 ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಉತ್ಪಾದಕ ಉದ್ಯೋಗವನ್ನು ಸೃಷ್ಟಿಸುವುದು, ಹವಾಮಾನ ಬದಲಾವಣೆ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ ಮುಂತಾದ ವಿಷಯಗಳು ಅಗತ್ಯವೆಂದು ನಾವು ಒತ್ತಿ ಹೇಳುತ್ತೇವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.