ಹೈದರಾಬಾದ್: ಕೋವಿಡ್-19 ಲಸಿಕೆ 'ಕೋವಾಕ್ಸಿನ್'ನ ಪ್ರಾಣಿ ಅಧ್ಯಯನ ಫಲಿತಾಂಶವೂ ಪಾಸಿಟಿವ್ ಬಂದಿದ್ದು, ಲೈವ್ ವೈರಲ್ ಚಾಲೆಂಜ್ ಮಾದರಿಯಲ್ಲೂ ರಕ್ಷಣಾತ್ಮಕ ಗುಣಗಳನ್ನು ಹೊಂದಿದೆ ಎಂದು ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.
ಇದಕ್ಕೂ ಮುನ್ನ ಸೆಪ್ಟೆಂಬರ್ 5 ರಂದು ಸ್ಥಳೀಯವಾಗಿ ಕೊವಾಕ್ಸಿನ್ನ ಎರಡನೇ ಹಂತದ ಪ್ರಯೋಗ ಮಾಡಲು, ಆರೋಗ್ಯ ಸೇವೆಗಳ ನಿರ್ದೇಶನಾಲಯದ ಜನರಲ್ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನಿಂದ ಅನುಮೋದನೆ ಪಡೆಯಿತು.
ಲಸಿಕೆಯ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಜುಲೈ 15 ರಂದು, ದೇಶದ 12 ಕೇಂದ್ರಗಳಲ್ಲಿ ನಡೆಯಿತು. ಅಲ್ಲಿ ಆರೋಗ್ಯವಂತ ಸ್ವಯಂಸೇವಕರಿಗೆ 14 ದಿನಗಳ ಅಂತರದೊಂದಿಗೆ ಎರಡು ಪ್ರಮಾಣದ ವ್ಯಾಕ್ಸಿನೇಷನ್ ನೀಡಲಾಯಿತು. 375 ಸ್ವಯಂಸೇವಕರ ಮೇಲಿನ ಈ ಪ್ರಯೋಗ ಇನ್ನೂ ಮುಂದುವರೆದಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಕೋವಾಕ್ಸಿನ್ನನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಭಾರತ್ ಬಯೋಟೆಕ್ ಜೂನ್ 29 ರಂದು ಘೋಷಿಸಿಕೊಂಡಿತ್ತು.