ಚೈನೈ: ದೇಶದ 2 ನೇ ಅತಿದೊಡ್ಡ ಪುಸ್ತಕ ಮೇಳವಾಗಿರುವ 43 ನೇ ಚೆನ್ನೈ ಪುಸ್ತಕ ಮೇಳ ಚೆನ್ನೈನ ವೈಎಂಸಿಎ ಮೈದಾನದ ನಂದನಂನಲ್ಲಿ ಪ್ರಾರಂಭವಾಯಿತು. ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸಾಮಿ ಸಮಾರಂಭವನ್ನು ಉದ್ಘಾಟಿಸಿದರು.
ಪ್ರಖ್ಯಾತ ಬರಹಗಾರರು ಮತ್ತು ಪ್ರಕಾಶಕರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃತಿಗಳಿಗಾಗಿ ಪ್ರಶಸ್ತಿಯನ್ನು ಪಡೆದರು. ದಕ್ಷಿಣ ಭಾರತದ ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಲ್ಲದೇ ಮೆಟ್ರೋ ಕಾರ್ಡುದಾರರಿಗೆ ಉಚಿತ ಪ್ರವೇಶವನ್ನು ಒದಗಿಸಲು ಚೆನ್ನೈ ಮೆಟ್ರೊ ಜೊತೆ ಮಾತುಕತೆ ನಡೆಸಲಾಯಿತು. ಮೇಳದಲ್ಲಿ ಸುಮಾರು 700 ಸ್ಟಾಲ್‌ಗಳಿದ್ದು, 15 ಲಕ್ಷ ಶೀರ್ಷಿಕೆಗಳ ಅಡಿಯಲ್ಲಿ ಎರಡು ಕೋಟಿ ಪುಸ್ತಕಗಳಿದ್ದವು. ಮಾನವ ಸಮಾಜದ ವಿಕಾಸಕ್ಕಾಗಿ ಪುಸ್ತಕಗಳು ಅಗತ್ಯವಿದೆ ಎಂದು ಸಿಎಂ ಹೇಳಿದ್ದು, ಮುಂದಿನ ವರ್ಷದಿಂದ ಅಭಿವೃದ್ಧಿಗೆ 75 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ.