ಟೋಕಿಯೊ: ಕೊರೊನಾ ವೈರಸ್ ಒಂಬತ್ತು ಗಂಟೆಗಳ ಕಾಲ ಮಾನವ ಚರ್ಮದ ಮೇಲೆ ಸಕ್ರಿಯವಾಗಿದೆ ಎಂಬುದನ್ನು ಜಪಾನಿನ ಸಂಶೋಧಕರು ಕಂಡುಹಿಡಿದಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗ ಎದುರಿಸಲು ಸಂಶೋಧನೆಯಲ್ಲಿ ಆಗಾಗ್ಗೆ ಕೈ ತೊಳೆಯುವ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ. ಜ್ವರಕ್ಕೆ ಕಾರಣವಾಗುವ ರೋಗಕಾರಕವು ಮಾನವ ಚರ್ಮದ ಮೇಲೆ ಹೋಲಿಸಿದರೆ ಸುಮಾರು 1.8 ಗಂಟೆಗಳ ಕಾಲ ಬದುಕುಳಿಯುತ್ತದೆ ಎಂದು ಕ್ಲಿನಿಕಲ್ ಸಾಂಕ್ರಾಮಿಕ ರೋಗಗಳ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಮಾನವ ಚರ್ಮದ ಮೇಲೆ ಸಾರ್ಸ್-ಕೊವಿ-2( SARS-CoV-2) (ಕೋವಿಡ್ -19 ಗೆ ಕಾರಣವಾಗುವ ವೈರಸ್ ಸ್ಟ್ರೈನ್ನ ಒಂಬತ್ತು ಗಂಟೆಗಳ ಬದುಕುಳಿಯುವಿಕೆಯು ಐಎವಿಗೆ IAV (ಇನ್ಫ್ಲುಯೆನ್ಸ್ ಎ ವೈರಸ್) ಹೋಲಿಸಿದರೆ ಸಂಪರ್ಕ ಪ್ರಸರಣದ ಅಪಾಯ ಹೆಚ್ಚಿಸುತ್ತದೆ. ಇದರಿಂದಾಗಿ ಸಾಂಕ್ರಾಮಿಕ ರೋಗವು ವೇಗಗೊಳ್ಳುತ್ತದೆ ಎಂದು ಹೇಳಿದೆ.
ಸಾವಿನ ಒಂದು ದಿನದ ನಂತರ ಶವಪರೀಕ್ಷೆಯ ಮಾದರಿಗಳಿಂದ ಸಂಗ್ರಹಿಸಿದ ಚರ್ಮ ತೆಗೆದುಕೊಂಡು ಸಂಶೋಧನಾ ತಂಡವು ಆಘಾತಕಾರಿ ಮಾಹಿತಿಯನ್ನು ಪರೀಕ್ಷೆಯಲ್ಲಿ ತಿಳಿಸಿದೆ.
ಕೊರೊನಾ ವೈರಸ್ ಮತ್ತು ಫ್ಲೂ ವೈರಸ್ ಎರಡೂ ಎಥೆನಾಲ್ ಅನ್ವಯಿಸುವ ಮೂಲಕ 15 ಸೆಕೆಂಡುಗಳಲ್ಲಿ ನಿಷ್ಕ್ರಿಯಗೊಳ್ಳುತ್ತವೆ. ಇದನ್ನು ಕೈ ಸ್ಯಾನಿಟೈಸರ್ಗಳಲ್ಲಿ ಬಳಸಲಾಗುತ್ತದೆ. ಚರ್ಮದ ಮೇಲೆ ಸಾರ್ಸ್- ಕೊವಿ-2ನ ದೀರ್ಘಾವಧಿಯ ಬದುಕುಳಿಯುವಿಕೆಯು ಸಂಪರ್ಕ - ಪ್ರಸರಣ ಅಪಾಯ ಹೆಚ್ಚಿಸುತ್ತದೆ. ಆದರೆ, ಕೈತೊಳೆಯುವ ನೈರ್ಮಲ್ಯದ ಮೂಲಕ ಈ ಅಪಾಯ ಕಡಿಮೆ ಮಾಡಬಹುದು ಎಂದಿದೆ.