ETV Bharat / bharat

ಕೊರೊನಾ ತಂದಿಟ್ಟ ಕೆಲಸದೊತ್ತಡ: ಗುಂಡು ಹಾರಿಸಿಕೊಂಡ ಪೊಲೀಸ್​ ಪೇದೆ - ಮಹಾಮಾರಿ ಕೊರೊನಾ

ಲಾಕ್​ಡೌನ್​ ವಿಸ್ತರಣೆಗೊಂಡಿರುವ ಕಾರಣ ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ದಿನದ 24 ಗಂಟೆ ಕೆಲಸ ಮಾಡ್ತಿದ್ದು, ಇದೇ ಒತ್ತಡದಲ್ಲಿ ಪೊಲೀಸ್​ ಪೇದೆವೋರ್ವ ಗುಂಡು ಹಾರಿಸಿಕೊಂಡಿದ್ದಾನೆ.

ಕೊರೊನಾ
coronavirus pandemic
author img

By

Published : Apr 14, 2020, 7:44 PM IST

ಭೋಪಾಲ್​: ದೇಶದಲ್ಲಿ ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದಿಂದ ಪೊಲೀಸ್​ ಸಿಬ್ಬಂದಿ ಹಾಗೂ ವೈದ್ಯಕೀಯ ವರ್ಗ ದಿನದ 24 ಗಂಟೆ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಮನೆಗೆ ಹೋಗಲು ಆಗದಂತಹ ಪರಿಸ್ಥಿತಿ ಉದ್ಭವವಾಗಿದೆ.

ಲಾಕ್​ಡೌನ್​ ಪರಿಸ್ಥಿತಿ ನಿಭಾಯಿಸಲು ಪೊಲೀಸರು ದಿನದ 24 ಗಂಟೆ ಕೆಲಸ ಮಾಡಬೇಕಾಗಿದೆ. ತೀವ್ರ ಕೆಲಸದ ಒತ್ತಡಕ್ಕೊಳಗಾದ ಪೊಲೀಸ್​ ಪೇದೆ ಗುಂಡು ಹಾರಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ.

ಕಾನ್ಸ್​ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದ 36 ವರ್ಷದ ಚೇತನ್​ ರಾಥೋಡ್​​ ಈ ಕೃತ್ಯವೆಸಗಿದ್ದಾನೆ. ರೈತಿಬ್ರಾ ಪೊಲೀಸ್​ ಸ್ಟೇಷನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಪೇದೆ ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಪಿಸ್ತೂಲ್​ನಿಂದ ಗುಂಡಿಕ್ಕಿಕೊಂಡಿದ್ದಾನೆ.

ಕಾರಣ ಏನು?:

ಮಧ್ಯಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೋವಿಡ್​​ ಪ್ರಕರಣ ಕಂಡು ಬರುತ್ತಿದ್ದು, ಜನಸಂಪರ್ಕವಿರುವ ಪ್ರದೇಶಗಳಲ್ಲಿ ಕೆಲಸ ಮಾಡಲು ಪೇದೆಗೆ ಇಷ್ಟವಿರಲಿಲ್ಲ. ಆದರೆ ಹಿರಿಯ ಅಧಿಕಾರಿಗಳು ಡ್ಯೂಟಿ ಮಾಡಲು ಹೇಳ್ತಿದ್ದ ಕಾರಣ ಬೇರೆ ದಾರಿ ಕಾಣದೇ ಕೆಲಸ ನಿರ್ವಹಿಸಬೇಕಾದ ಒತ್ತಡವಿತ್ತು. ನಿನ್ನೆ ಆಕ್ರೋಶದಲ್ಲಿ ಈ ಕೃತ್ಯವೆಸಗಿದ್ದು, ಇದೀಗ ಭೋಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ಪ್ರಾಣಾಪಾಯದಿಂದ ಪೊಲೀಸ್ ಸಿಬ್ಬಂದಿ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ 10 ಮಂದಿ ಪೊಲೀಸರಲ್ಲಿ ಈ ಮಹಾಮಾರಿ ಕಾಣಿಸಿಕೊಂಡಿದ್ದು, ಇಲಾಖೆಯ ಸಿಬ್ಬಂದಿಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.