ತಿರುವನಂತಪುರಂ: ತಲಸ್ಸೇರಿ-ಕೂರ್ಗ್ ರಾಜ್ಯ ಹೆದ್ದಾರಿ- 30 ಅನ್ನು ಬಂದ್ ಮಾಡಿರುವ ಕರ್ನಾಟಕ ಪೊಲೀಸರ ಕ್ರಮದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಬೇಕೆಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.
![Kerala CM Pinarayi Vijayan writes to PM Modi](https://etvbharatimages.akamaized.net/etvbharat/prod-images/kl-knr-28-1-border-block-7203295_28032020092538_2803f_1585367738_319.jpg)
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಈ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಆದರೆ ಈ ರಸ್ತೆ ಕೇರಳ ರಾಜ್ಯಕ್ಕೆ ಬೇಕಾಗುವ ಅಗತ್ಯ ಸರಕುಗಳನ್ನು ಸಾಗಿಸುವ ಜೀವನಾಡಿಯಾಗಿದೆ. ಈ ರಸ್ತೆ ಕೇರಳವನ್ನು ವೀರಜಪೆಟ್ಟ ಮೂಲಕ ಕರ್ನಾಟಕದ ಕೂರ್ಗ್‌ನೊಂದಿಗೆ ಸಂಪರ್ಕಿಸುತ್ತದೆ ಎಂದಿದ್ದಾರೆ.
ಈ ರಸ್ತೆ ಹೊರತುಪಡಿಸಿದರೆ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ಸಾಗಿಸಲು ತುಂಬಾ ದೀರ್ಘವಾದ ರಸ್ತೆಯನ್ನು ಬಳಸಬೇಕಾಗಿದೆ. ಹೀಗಾಗಿ ಈ ವಿಷಯದಲ್ಲಿ ತುರ್ತಾಗಿ ಮಧ್ಯ ಪ್ರವೇಶಿಸಬೇಕು. ಅಗತ್ಯ ಸರಕುಗಳು ಶೀಘ್ರವಾಗಿ ರಾಜ್ಯವನ್ನು ತಲುಪುತ್ತವೆಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.