ETV Bharat / bharat

ದೇಶದಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿ; 69 ವರ್ಷದ ವೃದ್ಧೆ ಸಾವು -  ದೇಶದಲ್ಲಿ ಕೊರೊನಾ ವೈರಸ್​ಗೆ ಎರಡನೇ ಸಾವು

ನವದೆಹಲಿಯಲ್ಲಿ ಕೊರೊನಾ ವೈರಸ್​ಗೆ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದ ರಾಜಧಾನಿಯಲ್ಲಿ ಮಾರಣಾಂತಿಕ ವೈರಸ್ ಮೊದಲ ಬಲಿ ಪಡೆದುಕೊಂಡಿದೆ.

coronavirus death, coronavirus death toll rise, coronavirus death toll rise in India, coronavirus death toll rise in India, ಕೊರೊನಾ ವೈರಸ್​ಗೆ ಸಾವು,  ಕೊರೊನಾ ವೈರಸ್​ಗೆ ಎರಡನೇ ಸಾವು, ದೇಶದಲ್ಲಿ  ಕೊರೊನಾ ವೈರಸ್​ಗೆ ಎರಡನೇ ಸಾವು,
ದೇಶದಲ್ಲಿ ಕೊರೊನಾಗೆ ಎರಡನೇ ಸಾವು
author img

By

Published : Mar 13, 2020, 10:43 PM IST

Updated : Mar 13, 2020, 11:06 PM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ಗೆ ಎರಡನೇ ಬಲಿಯಾಗಿದೆ. ದೆಹಲಿ ಆರ್​ಎಂಎಲ್​ ಆಸ್ಪತ್ರೆಯಲ್ಲಿ 69 ವರ್ಷದ ವೃದ್ಧೆಯೊಬ್ಬರು ಕೊರೊನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಈ ವಿಚಾರವನ್ನು ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ಪಶ್ಚಿಮ ದೆಹಲಿಯ ಜನಕ್​ಪುರಿ ನಿವಾಸಿ 69 ವರ್ಷದ ವೃದ್ಧೆ ಕೊರೊನಾ ವೈರಸ್​ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ವೃದ್ಧೆ ಬಳಲುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಸಂತ್ರಸ್ಥೆಯ ಮಕ್ಕಳಲ್ಲೊಬ್ಬರು ವಿದೇಶದಲ್ಲಿದ್ದು, ಇತ್ತೀಚೆಗೆ ದೆಹಲಿಗೆ ಬಂದಿದ್ದರು. ಈ ವೇಳೆ ಅವರಲ್ಲಿದ್ದ ಕೊರೊನಾ​ ಸೋಂಕು ತಾಯಿಗೂ ಹರಡಿದೆ ಎನ್ನಲಾಗುತ್ತಿದೆ.

ಮಾರಣಾಂತಿಕ ವೈರಸ್ ತಗುಲಿ ಬಳಲುತ್ತಿದ್ದ ಮಹಿಳೆಯನ್ನು ಇಲ್ಲಿನ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಕೆ ಇಂದು ಮೃತಪಟ್ಟಿದ್ದಾರೆ.

ಕಲಬುರಗಿಯಲ್ಲಿ ಕೊರೊನಾಗೆ ಮೊದಲ ಸಾವು:

ನಿನ್ನೆ(ಗುರುವಾರ) ನಮ್ಮ ರಾಜ್ಯದ ಕಲಬುರಗಿಯಲ್ಲಿ 76 ವರ್ಷದ ವೃದ್ಧ ವ್ಯಕ್ತಿ ಕೊರೊನಾ ವೈರಸ್​ಗೆ ಬಲಿಯಾದ ವಿಚಾರ ಸಂಚಲನ ಸೃಷ್ಟಿಸಿತ್ತು. ಈ ವ್ಯಕ್ತಿ ಕೂಡಾ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.

Last Updated : Mar 13, 2020, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.