ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆ: ಆರೋಗ್ಯ ಇಲಾಖೆ ಮಾಹಿತಿ - 81 ಕೊರೊನಾ ವೈರಸ್ ಪ್ರಕರಣಗಳು
ಭಾರತದಲ್ಲಿ ಈವರೆಗೆ ಒಟ್ಟು 81 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ದೃಢಪಡಿಸಿದೆ.

ನವದೆಹಲಿ: 16 ಮಂದಿ ಇಟಲಿ ಪ್ರವಾಸಿಗರು, ಓರ್ವ ಕೆನಡಾ ಪ್ರಜೆ ಸೇರಿ ಭಾರತದಲ್ಲಿ ಈವರೆಗೆ ಒಟ್ಟು 81 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಜಪಾನ್ನಿಂದ ಕರೆತರಲಾದ 124, ಚೀನಾದಿಂದ ಕರೆತರಲಾದ 112 ಮಂದಿಯನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಫಲಿತಾಂಶ ನೆಗಟಿವ್ ಎಂದು ಬಂದಿದ್ದು, ಆಸ್ಪತ್ರೆಯಿಂದ ಹೊರಬಂದಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಚೀನಾ, ಅಮೆರಿಕಾ, ಮಡಗಾಸ್ಕರ್ ಹಾಗೂ ಮಾಲ್ಡೀವ್ಸ್ ಸೇರಿ ಒಟ್ಟು 1,031 ಭಾರತೀಯರನ್ನು ಅಲ್ಲಿಂದ ಕರೆತರಲಾಗಿದೆ. ಇನ್ನು ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನಾಳೆ ಮಿಲನ್‌ಗೆ ಏರ್ ಇಂಡಿಯಾ ತನ್ನ ವಿಮಾನವನ್ನು ಕಳುಹಿಸಲಿದೆ. ಇದು ಭಾನುವಾರ ದೆಹಲಿಗೆ ಹಿಂದಿರುಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ರುಬಿನಾ ಅಲಿ ತಿಳಿಸಿದ್ದಾರೆ.