ಹೈದರಾಬಾದ್ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಪ್ರಕರಣ ಏರಿಕೆ ಕಾಣುತ್ತಿವೆ. ಭಾರತದಲ್ಲಿ ಈವರೆಗೂ ಕಾಣಿಸಿಕೊಂಡ 8,20,916 ಕೊರೊನಾ ಪ್ರಕರಣ ಪೈಕಿ, 22,123 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಸೋಂಕಿತರ ಪೈಕಿ 5,15,386 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 2,83,407 ಸಕ್ರಿಯ ಪ್ರಕರಣಗಳಿವೆ. ಆದರೆ, 4 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೂ ಕೊರೊನಾ ಸೋಂಕಿಗೆ ಯಾರೊಬ್ಬರೂ ಮೃತಪಟ್ಟದಿರುವುದು ಸಂತಸದ ವಿಷಯ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 156 ಸೋಂಕಿತರು ಕಾಣಿಸಿಕೊಂಡಿದ್ದು 92 ಮಂದಿ ಗುಣಮುಖರಾಗಿದ್ದಾರೆ. 64 ಸಕ್ರಿಯ ಪ್ರಕರಣಗಳಿವೆ. ದಿಯು ಮತ್ತು ದಾಮನ್ನಲ್ಲಿ 459 ಕೊರೊನಾ ಪ್ರಕರಣ ಪೈಕಿ 211 ಮಂದಿ ಡಿಸ್ಚಾರ್ಜ್ ಆಗಿದ್ದು, 248 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪುರದಲ್ಲಿ 1582 ಕೇಸ್ಗಳು ದಾಖಲಾಗಿದ್ದು, 832 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 750 ಸಕ್ರಿಯ ಪ್ರಕರಣಗಳಿವೆ.
ಮಿಜೋರಾಮ್ನಲ್ಲಿ ಒಟ್ಟು 226 ಕೋವಿಡ್-19 ಪ್ರಕರಣ ವರದಿಯಾಗಿವೆ. ಅದರಲ್ಲಿ 143 ಡಿಸ್ಚಾರ್ಜ್, 83 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಾಲ್ಯಾಂಡ್ನಲ್ಲಿ ದಾಖಲಾದ 732 ಸೋಂಕಿತರ ಪೈಕಿ 304 ಗುಣಮುಖರಾಗಿದ್ದಾರೆ. 428 ಸೋಕಿತರಿದ್ದಾರೆ. ಸಿಕ್ಕಿಂನಲ್ಲಿ 134 ಪ್ರಕರಣ ವರದಿಯಾಗಿವೆ. 80 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. 54 ಸಕ್ರಿಯ ಪ್ರಕರಣಗಳಿವೆ. ಆದರೆ, ಒಂದು ಸಾವು ಕೂಡ ದಾಖಲಾಗಿಲ್ಲ. ಯಾಕೆಂದರೆ, ಅಲ್ಲಿನ ಸರ್ಕಾರಗಳು ಕೈಗೊಂಡ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎನ್ನಲಾಗಿದೆ.
6 ರಾಜ್ಯಗಳಲ್ಲಿ 10ಕ್ಕಿಂತ ಕಡಿಮೆ, ಹಾಗೆಯೇ ಮತ್ತೆ 6 ರಾಜ್ಯಗಳಲ್ಲಿ 50ಕ್ಕಿಂತ ಕಡಿಮೆ ಸಾವಿನ ಪ್ರಕರಣ ವರದಿಯಾಗಿವೆ. ಅವು ಯಾವುದು ಎಂಬುದನ್ನು ಈ ಪಟ್ಟಿಯ ಮೂಲಕ ತೋರಿಸುತ್ತೇವೆ. ನಾಳೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಶದ ಕೊರೊನಾ ಸೋಂಕಿತರ ವರದಿ ಬಿಡುಗಡೆ ಮಾಡಿದ ಬಳಿಕ ಅಂಕಿ-ಅಂಶ ಬದಲಾಗಲಿದೆ.
ಕ್ರ.ಸಂ | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಸಕ್ರಿಯ ಪ್ರಕರಣಗಳು | ಗುಣಮುಖರಾದವರು | ಸಾವು | ಒಟ್ಟು ಪ್ರಕರಣಗಳು |
---|---|---|---|---|---|
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪ | 64 | 92 | 0 | 156 |
2 | ಆಂಧ್ರಪ್ರದೇಶ | 11936 | 13194 | 292 | 25422 |
3 | ಅರುಣಾಚಲ ಪ್ರದೇಶದೆಹಲಿ | 213 | 120 | 2 | 335 |
4 | ಅಸ್ಸೋಂ | 5426 | 9147 | 27 | 14600 |
5 | ಬಿಹಾರ | 4347 | 10109 | 119 | 14575 |
6 | ಚಂಡೀಗಡ | 124 | 408 | 7 | 539 |
7 | ಚತ್ತೀಸ್ಗಡ | 722 | 3028 | 17 | 3767 |
8 | ದಿಯು ಮತ್ತು ದಾಮನ್ | 248 | 211 | 0 | 459 |
9 | ದೆಹಲಿ | 21146 | 84694 | 3300 | 109140 |
10 | ಗೋವಾ | 895 | 1347 | 9 | 2251 |
11 | ಗುಜರಾತ್ | 9900 | 28147 | 2022 | 40069 |
12 | ಹರಿಯಾಣ | 4740 | 14904 | 290 | 19934 |
13 | ಹಿಮಾಚಲ ಪ್ರದೇಶ | 277 | 883 | 11 | 1171 |
14 | ಜಮ್ಮು ಮತ್ತು ಕಾಶ್ಮೀರ | 3943 | 5786 | 159 | 9888 |
15 | ಜಾರ್ಖಾಂಡ್ | 1172 | 2224 | 23 | 3419 |
16 | ಕರ್ನಾಟಕ | 19039 | 13836 | 543 | 33418 |
17 | ಕೇರಳ | 3103 | 3820 | 27 | 6950 |
18 | ಲಡಾಖ್ | 146 | 917 | 1 | 1064 |
19 | ಮಧ್ಯಪ್ರದೇಶ | 3538 | 12481 | 638 | 16657 |
20 | ಮಹಾರಾಷ್ಟ್ರ | 95943 | 132625 | 9893 | 238461 |
21 | ಮಣಿಪುರ | 750 | 832 | 0 | 1582 |
22 | ಮೇಘಾಲಯ | 139 | 66 | 2 | 207 |
23 | ಮಿಜೋರಾಮ್ | 83 | 143 | 0 | 226 |
24 | ನಾಗಾಲ್ಯಾಂಡ್ | 428 | 304 | 0 | 732 |
25 | ಒಡಿಸ್ಸಾ | 3928 | 7972 | 56 | 11956 |
26 | ಪುದುಚೆರಿ | 618 | 637 | 17 | 1272 |
27 | ಪಂಜಾಬ್ | 2153 | 5017 | 187 | 7357 |
28 | ರಾಜಸ್ತಾನ | 5057 | 17620 | 497 | 23174 |
29 | ಸಿಕ್ಕಿಂ | 54 | 80 | 0 | 134 |
30 | ತಮಿಳುನಾಡು | 46108 | 82324 | 1829 | 130261 |
31 | ತೆಲಂಗಾಣ | 12680 | 19205 | 339 | 32224 |
32 | ತ್ರಿಪುರ | 545 | 1372 | 1 | 1918 |
33 | ಉತ್ತರಾಖಾಂಡ್ | 621 | 2706 | 46 | 3373 |
34 | ಉತ್ತರ ಪ್ರದೇಶ | 11024 | 21787 | 889 | 33700 |
35 | ಪಶ್ಚಿಮ ಬಂಗಾಳ | 8881 | 17348 | 880 | 27109 |
| ರಾಜ್ಯಗಳಿಗೆ ಮರುನಿಯೋಜನೆ ಮಾಡಿರುವ ಪ್ರಕರಣಗಳು | 3416 | | | 3416 |
| ಒಟ್ಟು | 283407 | 515386 | 22123 | 820916 |