ETV Bharat / bharat

ಭಾರತದಲ್ಲಿ ಅರ್ಧ ಲಕ್ಷದ ಸಮೀಪ ಕೋವಿಡ್​ ​... 24 ಗಂಟೆಯಲ್ಲೇ 2,958 ಪ್ರಕರಣ ದಾಖಲು! - ದೇಶದಲ್ಲಿ ಕೊರೊನಾ ಕೇಸ್​

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟ ಮುಂದುವರಿದಿದ್ದು, ಈ ಮಧ್ಯೆ ಕೂಡ ದೇಶದಲ್ಲಿ ಅತಿ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.

Coronavirus Cases In India
Coronavirus Cases In India
author img

By

Published : May 6, 2020, 10:28 AM IST

ನವದೆಹಲಿ: ಮಹಾಮಾರಿ ಕೋವಿಡ್​ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2,958 ಪ್ರಕರಣ ಕಾಣಿಸಿಕೊಂಡಿದ್ದು, 126 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ದೇಶದಲ್ಲಿ ಒಟ್ಟು ಕೋವಿಡ್​ ಸಂಖ್ಯೆ 49,391 ಆಗಿದೆ.

ಮಹಾರಾಷ್ಟ್ರದಲ್ಲೇ ನಿನ್ನೆ 984 ಹೊಸ ಪ್ರಕರಣ ಕಾಣಿಸಿಕೊಂಡಿರುವುದರಿಂದ ಒಟ್ಟು ಸೋಂಕಿತರ ಸಂಖ್ಯೆ 15,525ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲೂ 508 ಹೊಸ ಪ್ರಕರಣ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 4 ಸಾವಿರ ಆಗಿದೆ. ಗುಜರಾತ್​ನಲ್ಲಿ ಕಳೆದ 24 ಗಂಟೆಯಲ್ಲಿ 441 ಕೇಸ್​​ನಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 6,245 ಆಗಿದ್ದು, ದೆಹಲಿಯಲ್ಲೂ 206 ಹೊಸ ಪ್ರಕರಣ ಕಾಣಿಸಿಕೊಂಡಿದ್ದು ಒಟ್ಟು ಸೋಂಕಿತರ ಸಂಖ್ಯೆ 5,104 ಆಗಿದೆ.

ದೇಶದಲ್ಲಿ ಇಲ್ಲಿಯವರೆಗೆ 49,391 ಪ್ರಕರಣಗಳಿದ್ದು, ಇದರಲ್ಲಿ 33,514 ಆ್ಯಕ್ಟೀವ್​ ಕೇಸ್​​ಗಳಿವೆ. ಉಳಿದಂತೆ 14,183 ಜನರು ಸೋಂಕಿನಿಂದ ಗುಣಮುಖರಾಗಿದ್ದು, 1,694 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದೀಗ ದೇಶದಲ್ಲಿ ಮೇ.17ರವರೆಗೆ ಲಾಕ್​ಡೌನ್​ ಮುಂದೂಡಿಕೆ ಮಾಡಲಾಗಿದ್ದು, ಇದರ ಮಧ್ಯೆ ಕೂಡ ಅತಿ ಹೆಚ್ಚು ಕೋವಿಡ್​ ಪ್ರಕರಣ ಕಾಣಿಸಿಕೊಳ್ಳುತ್ತಿರುವುದು ದೇಶದ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ 1456 ಸೋಂಕಿತರು ಕೋವಿಡ್​ನಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿ ಮನೆಗೆ ಸೇರಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.