ETV Bharat / bharat

ವಿಶೇಷ ಅಂಕಣ: ನದಿಗಳ ಪುನಶ್ಚೇತನ... ಕೊರೊನಾ ಕಲಿಸಿದ ಪಾಠ..!

ಕೊರೊನಾ ವೈರಸ್‌ ಸಾಂಕ್ರಾಮಿಕವನ್ನು ತಡೆಗಟ್ಟುವ ತಂತ್ರದ ಈಗ ದೇಶಾದ್ಯಂತ ದಿಗ್ಬಂಧನ ಜಾರಿಗೊಳಿಸಿದ್ದರಿಂದ, ಕೈಗಾರಿಕಾ ಚಟುವಟಿಕೆಗಳು ಸ್ಥಗಿತವಾಗಿದ್ದು, ಅಚ್ಚರಿ ಮೂಡಿಸುವ ರೀತಿ ನಮ್ಮ ವಾತಾವರಣವು ಗುಣಮಟ್ಟ ಹಾಗೂ ಪರಿಶುದ್ಧತೆಯನ್ನು ಪಡೆದುಕೊಂಡಿದೆ.

Corona’s lesson for revival of rivers
ನದಿಗಳ ಪುನಶ್ಚೇತನ
author img

By

Published : Apr 24, 2020, 8:35 PM IST

ನವದೆಹಲಿ: ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ನಡೆಸಿದ ದಡ್ಡತನದ ಕೃತ್ಯಗಳು ಮನುಕುಲದ ಉಳಿವಿಗೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಕೈಗಾರೀಕರಣದಿಂದ ಉಂಟಾದ ಮಾಲಿನ್ಯವು ಆಕಾಶ ಮತ್ತು ಭೂಮಿ, ನೀರು ಹಾಗೂ ಮನುಷ್ಯನ ಜೀವನವನ್ನು ವಿಷಮಯವಾಗಿಸುತ್ತಿದೆ.

2008ರಲ್ಲಿ ನಡೆಸಲಾದ ಅಂತಾರಾಷ್ಟ್ರೀಯ ಅಧ್ಯಯನವೊಂದರ ಪ್ರಕಾರ, ಜಗತ್ತಿನಾದ್ಯಂತ 830 ಲಕ್ಷ ಜನ ಮಾಲಿನ್ಯದಿಂದಾಗಿ ಕೊಲ್ಲಲ್ಪಟ್ಟಿದ್ದಾರೆ ಹಾಗೂ ಈ ಪೈಕಿ 230 ಲಕ್ಷ ಜನ ಭಾರತೀಯರು. ಬಹುತೇಕ 125 ಲಕ್ಷದಷ್ಟು ಭಾರತೀಯರ ಸಾವಿಗೆ ಕೈಗಾರಿಕಾ ಮಾಲಿನ್ಯವೊಂದೇ ಮುಖ್ಯ ಕಾರಣವಾಗಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕವನ್ನು ತಡೆಗಟ್ಟುವ ತಂತ್ರದ ನಿಮಿತ್ತ ಈಗ ದೇಶಾದ್ಯಂತ ದಿಗ್ಬಂಧನ ಜಾರಿಗೊಳಿಸಿದ್ದರಿಂದ, ಕೈಗಾರಿಕಾ ಚಟುವಟಿಕೆಗಳು ಸ್ಥಗಿತವಾಗಿದ್ದು, ಅಚ್ಚರಿ ಮೂಡಿಸುವ ರೀತಿ ನಮ್ಮ ವಾತಾವರಣವು ಗುಣಮಟ್ಟ ಹಾಗೂ ಪರಿಶುದ್ಧತೆಯನ್ನು ಪಡೆದುಕೊಂಡಿದೆ. ನದಿಗಳಿಗೆ ವಿಷಕಾರಿ ತ್ಯಾಜ್ಯ ಸೇರ್ಪಡೆ ನಿಂತಿರುವುದರಿಂದ, ಅವು ಸ್ವಚ್ಛ ನೀರಿನಿಂದ ಹರಿಯುವಂತಾಗಿದೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ದೃಢೀಕರಣ ನೀಡಿದೆ.

ಮೂರೂವರೆ ದಶಕಗಳ ಹಿಂದೆ ಕೇಂದ್ರ ಸರಕಾರ ತನ್ನ ಮಹತ್ವದ ಗಂಗಾ ನದಿ ಶುದ್ಧೀಕರಣ ಯೋಜನೆಯನ್ನು ಪ್ರಕಟಿಸಿತ್ತು. ರಾಜೀವ್‌ ಗಾಂಧಿ ಅವರು ಪ್ರಧಾನಮಂತ್ರಿಗಳಾಗಿದ್ದ ಅವಧಿಯಲ್ಲಿ, 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಇದರಿಂದ ಯಾವುದೇ ಪರಿಣಾಮ ಉಂಟಾಗದಿದ್ದ ಹಿನ್ನೆಲೆಯಲ್ಲಿ ಮೋದಿ ಸರಕಾರವು “ನಮಾಮಿ ಗಂಗಾ” ಎಂಬ ಬೃಹತ್‌ ಯೋಜನೆಯನ್ನು 2014ರಲ್ಲಿ ಪ್ರಾರಂಭಿಸಿತು. ರೂ.28,790 ಕೋಟಿ ವೆಚ್ಚದಲ್ಲಿ, 310 ಯೋಜನೆಗಳ ಮೂಲಕ, ಈ ವರ್ಷಾಂತ್ಯದ ವೇಳೆಗೆ ಅದನ್ನು ಪೂರ್ಣಗೊಳಿಸಲು ಉದ್ದೇಶಿಸಿತ್ತು. ಅದಾಗ್ಯೂ, ಕೇವಲ ಶೇಕಡಾ 37ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ.

ಗಂಗಾ ನದಿಯನ್ನು ಶುದ್ಧೀಕರಿಸುವ ನಿಮಿತ್ತ ಕೊಳಚೆ ನೀರನ್ನು ಶುದ್ಧಗೊಳಿಸುವ ಯೋಜನೆಗಳನ್ನು ಸರಕಾರ ವ್ಯಾಪಕವಾಗಿ ಕೈಗೊಂಡಿದ್ದಾಗ್ಯೂ, ಅದ್ಯಾವುದರ ಹಂಗಿಲ್ಲದೇ ತಾನು ಶುದ್ಧಗೊಳ್ಳಬಲ್ಲೆ ಎಂಬುದನ್ನು ಗಂಗೆ ತಾನೇ ತೋರಿಸಿಕೊಟ್ಟಿದ್ದಾಳೆ! ಕೈಗಾರಿಕಾ ಮಾಲಿನ್ಯ ಇಲ್ಲದಿರುವುದರಿಂದ ನಮ್ಮ ಪ್ರಮುಖ ನದಿಗಳೆಲ್ಲವೂ ತಂತಾನೇ ಶುದ್ಧೀಕರಣಗೊಳ್ಳುವ ಮೂಲಕ, ನದಿ ನೀರನ್ನು ಶುದ್ಧೀಕರಿಸುವ ತಂತ್ರಗಾರಿಕೆಯನ್ನು ನಾವು ಬದಲಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿವೆ.

ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು ಅವರು ಗಂಗಾ ನದಿಯನ್ನು ಭಾರತದ ಆತ್ಮಕ್ಕೆ ಹೋಲಿಸಿದ್ದರು. ಅಂತಹ ನದಿಯ ನೀರು ಮಾಲಿನ್ಯಗೊಳ್ಳಲು ಅವಕಾಶ ನೀಡುವುದು ಹಾಗೂ ಕುಡಿಯುವುದು ಒತ್ತಟ್ಟಿಗಿರಲಿ ಸ್ನಾನ ಮಾಡಲು ಸಹ ಅದನ್ನು ಅಯೋಗ್ಯವಾಗಿಸಿದ್ದರ ಪಾಪ ಎಂಟು ರಾಜ್ಯಗಳ ಸರಕಾರಗಳಿಗೆ ಹೋಗುತ್ತದೆ! ಮುಖ್ಯ ನದಿಯ ದಂಡೆಯಲ್ಲಿರುವ 97 ಪಟ್ಟಣಗಳಿಂದ ಪ್ರತಿ ದಿನ ಗಂಗಾ ನದಿಗೆ 300 ಕೋಟಿ ಲೀಟರ್‌ ತ್ಯಾಜ್ಯ ನೀರು 155 ದೊಡ್ಡ ಕಾಲುವೆಗಳ ಮೂಲಕ ಸೇರುತ್ತಿದ್ದು, ಗಂಗಾ ನದಿಯನ್ನು ಅಕ್ಷರಶಃ ಹಾಳು ಮಾಡಿಬಿಟ್ಟಿವೆ.

ಸಂಬಂಧಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಗಳ ಗುಪ್ತ ನೆರವಿನಿಂದಾಗಿ ಗಂಗಾ ನದಿಯೊಂದೇ ಅಲ್ಲ, ಮಾಲಿನ್ಯಕಾರಕಗಳು ಮತ್ತು ತ್ಯಾಜ್ಯಗಳನ್ನು ದೇಶದ ಪ್ರಮುಖ ನದಿಗಳಿಗೆ ಅಬಾಧಿತವಾಗಿ ಬಿಡುಗಡೆ ಮಾಡಲಾಗುತ್ತಿದ್ದು, ಇದು ಇಡೀ ವ್ಯವಸ್ಥೆಯನ್ನು ಅಕ್ಷರಶಃ ನೆಲಕಚ್ಚುವಂತೆ ಮಾಡಿದೆ. ದೇಶಾದ್ಯಂತ 450 ನದಿಗಳಿದ್ದರೂ, ಅವುಗಳ ಪೈಕಿ ಅರ್ಧದಷ್ಟು ಕುಡಿಯಲು ಹಾಗೂ ಇನ್ನರ್ಧ ನದಿಗಳು ಸ್ನಾನಕ್ಕೆ ಸಹ ಯೋಗ್ಯವಾಗಿ ಉಳಿದಿಲ್ಲ. ಇಂತಹ ಮಾಲಿನ್ಯಯುಕ್ತ ನದಿ ನೀರನ್ನು ಬಳಸಿಕೊಂಡು ಬೆಳೆದ ಬೆಳೆಗಳು ಸಹ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ತರುತ್ತಿವೆ.

ನೀರು ಸಂಸ್ಕರಣೆ ಕ್ಷೇತ್ರದಲ್ಲಿ ಭಾರತವು ಈಗಲೂ ಹಿಂದೆಯೇ ಉಳಿದಿದೆ. ಗಂಗಾ ಪುನಶ್ಚೇತನದ ಅಂಗವಾಗಿ ನಿರ್ಮಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂತಹ 310 ಯೋಜನೆಗಳ ಪೈಕಿ 152 ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಿ, ಅವುಗಳ ಮೂಲಕ ನಿತ್ಯ 488 ಲಕ್ಷ ಕೋರಿ ನೀರನ್ನು ಶುದ್ಧೀಕರಿಸಿ ಅದನ್ನು ಮತ್ತೆ ನದಿಗೆ ಹರಿಸಲು ಸರಕಾರ ಉದ್ದೇಶಿಸಿದೆ. ಆದರೆ, ಪರಿಸರತಜ್ಞರು ಯೋಚಿಸುವುದೇ ಬೇರೆ. ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಅದರ ಸೂಕ್ತವಾಗಿ ಮರುಬಳಕೆ ಮಾಡಬೇಕು, ಆಗ ಮಾತ್ರ ನದಿಗಳು ಮಾಲಿನ್ಯಮುಕ್ತವಾಗಿ ಪುನಶ್ಚೇತನಗೊಳ್ಳುತ್ತವೆ ಎನ್ನುತ್ತಾರೆ ಅವರು.

ಲಾಕ್‌ ಡೌನ್‌ ಅವಧಿ ಮುಕ್ತಾಯವಾದ ನಂತರ, ಕೈಗಾರಿಕಾ ತ್ಯಾಜ್ಯಗಳನ್ನು ನದಿಗಳಿಗೆ ಹರಿಸುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇ ಆದರೆ ಅವು ನಿಜಕ್ಕೂ ಪರಿಸರಸ್ನೇಹಿಯಾಗುತ್ತವೆ. ಮಾಲಿನ್ಯಯುಕ್ತ ನೀರನ್ನು ಸೇವಿಸಿ ಜನರು ಕಾಯಿಲೆಗೆ ಈಡಾಗುವುದನ್ನು ತಪ್ಪಿಸಬೇಕೆಂದರೆ, ನಮ್ಮ ಜಲಮೂಲಗಳನ್ನು ಅತ್ಯಂತ ಕಾಳಜಿಯಿಂದ ಸಂರಕ್ಷಿಸುವುದರ ಹೊರತು ಪರ್ಯಾಯ ದಾರಿಯೇ ಇಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.