ETV Bharat / bharat

ಕೋವಿಡ್-19: ನೂರೊಂದು ಲಸಿಕೆಗಳ ಕಾರ್ಯನಿರ್ವಹಣೆ ಹೇಗೆ?

author img

By

Published : May 8, 2020, 8:12 PM IST

ಸಾರ್ಸ್–ಕೋವಿಡ್-2ನಿಂದ ಮನುಕುಲವನ್ನು ಉಳಿಸಲು ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಮತ್ತು ಔಷಧ ಕಂಪನಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 96ಕ್ಕೂ ಹೆಚ್ಚು ಸಂಶೋಧಕರು ಲಸಿಕೆ ಸಂಶೋಧನೆಯ ಆರಂಭಿಕ ಹಂತದಲ್ಲಿದ್ದಾರೆ. ಈಗಾಗಲೇ 6 ಕಂಪನಿಗಳು ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿವೆ.

covid-19
ಕೊರಾನಾ ವೈರಸ್​

ಸಾಂಕ್ರಾಮಿಕ ರೋಗ ಕೊರಾನಾ ವೈರಸ್​​ಗೆ ಮುಕ್ತಿ ನೀಡಲು ಉತ್ತಮ ಮಾರ್ಗವೆಂದರೆ ಲಸಿಕೆಯನ್ನು ಅಭಿವೃದ್ಧಿಪಡಿಸುವುದು. ಉತ್ತಮ ಲಸಿಕೆ ಅಭಿವೃದ್ಧಿಪಡಿಸಲು ಸಾಂಪ್ರದಾಯಿಕ ಮತ್ತು ನವೀನ ಪ್ರಯತ್ನಗಳು ನಡೆಯುತ್ತಿವೆ. ಸಾರ್ಸ್–ಕೋವಿಡ್-2ನಿಂದ ಮನುಕುಲವನ್ನು ಉಳಿಸಲು ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಮತ್ತು ಔಷಧ ಕಂಪನಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 96ಕ್ಕೂ ಹೆಚ್ಚು ಸಂಶೋಧಕರು ಲಸಿಕೆ ಸಂಶೋಧನೆಯ ಆರಂಭಿಕ ಹಂತದಲ್ಲಿದ್ದಾರೆ. ಈಗಾಗಲೇ 6 ಕಂಪನಿಗಳು ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿವೆ. ಇನ್ನೂ ಕೆಲವು ಔಷಧ ಕಂಪನಿಗಳು ಪ್ರಾಣಿಗಳ ಮೇಲೆ ಪ್ರಯೋಗವನ್ನು ನಡೆಸಿವೆ. ಜೀವ ಉಳಿಸುವ ಲಸಿಕೆಗಳನ್ನು ತಯಾರಿಸುವ ಬಗೆ ಹೇಗೆ? ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಜೀವಂತ ವೈರಸ್ ಲಸಿಕೆಗಳು ವೈರಸ್ ದುರ್ಬಲಗೊಂಡ (ಅಟೆನ್ಯೂಯೇಟೆಡ್) ರೂಪವನ್ನು ಹೊಂದಿರುತ್ತವೆ. ದಡಾರ, ಮಂಪ್ಸ್ ಮತ್ತು ರುಬೆಲ್ಲಾ ಲಸಿಕೆಗಳು ಇದಕ್ಕೆ ತಾಜಾ ಉದಾಹರಣೆ. ಕನಿಷ್ಠ 7 ನ್ಯೆಪಣ್ಯಕಾರರು ಜೀವಂತ ವೈರಸ್‌ಗಳೊಂದಿಗೆ ಸಂಭವನೀಯ ಕೊರೊನಾ ವೈರಸ್ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ. ಲಸಿಕೆ ಅಭಿವೃದ್ಧಿಯಲ್ಲಿ ನಿರತರಾಗಿರುವ ಔಷದ ಕಂಪನಿಗಳು ವ್ಯಾಪಕ ಸುರಕ್ಷತಾ ಪ್ರಯೋಗಗಳಿಗೆ ಒಳಗಾಗಬೇಕು. ಜೀವಂತ ಲಸಿಕೆ ಅಭಿವೃದ್ಧಿಗಾಗಿ ನ್ಯೂಯಾರ್ಕ್ ಮೂಲದ ಔಷಧೀಯ ಕಂಪನಿ ‘ಕೋಡ್ಜೆನಿಕ್ಸ್ ‘ ಪುಣೆಯ ಸೀರಮ್ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಜಂಟಿಯಾಗಿ ಲಸಿಕೆ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ. ನಿಷ್ಕ್ರಿಯಗೊಳಿಸಿದ ವೈರಸ್ ಅನ್ನು ಮೊದಲು ಸಂಸ್ಕರಿಸಲಾಗುತ್ತದೆ.

ನಂತರು ಅದರ ರೋಗವೃದ್ದಿ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಂತಹ ವೈರಸ್‌ನಿಂದ ತಯಾರಿಸಿದ ಲಸಿಕೆಯನ್ನು ನಿಷ್ಕ್ರಿಯ ಅಥವಾ ಕೊಲ್ಲಲ್ಪಟ್ಟ ಲಸಿಕೆ ಎಂದು ಕರೆಯಲಾಗುತ್ತದೆ. ನಿಷ್ಕ್ರಿಯಗೊಳಿಸಿದ ಕೊರೊನಾ ವೈರಸ್ ಲಸಿಕೆಯ ಮಾನವನ ಮೇಲೆ ಪ್ರಯೋಗಿಸಲು ಬೀಜಿಂಗ್‌ನ ಸಿನೋವಾಕ್ ಬಯೋಟೆಕ್ ನಿಯಂತ್ರಿತ ಅನುಮೋದನೆಯನ್ನು ಪಡೆದೆಕೊಂಡಿದೆ. ವಂಶವಾಹಿ ಆಧಾರದ ಮೇಲೆ ವಿನ್ಯಾಸಗೊಳಿಸಿರುವ ಮತ್ತೊಂದು ಕೊರೊನಾ ವೈರಸ್ ಲಸಿಕೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇದು ಮಾನವನ ಆರ್​​​ಎನ್ಎ ಮತ್ತು ಅಥವಾ ಡಿಎನ್ಎ ಆಧಾರದ ಮೇಲೆ ಅಭಿವೃದ್ದಿಪಡಿಸಲಾಗಿದೆ. ಇದು ಕೊರೊನಾ ವೈರಸ್ ಸ್ಪೈಕ್​​​ನ (ಎಸ್) ಪ್ರೋಟಿನ್‌ನ ಪ್ರತಿಗಳನ್ನು ತಯಾರಿಸಲು ಸೂಚನೆಗಳನ್ನು ನೀಡುತ್ತದೆ.

ಆದರೆ ಇದರ ನ್ಯೂನತೆಯೆಂದರೆ, ವಂಶವಾಹಿ ಆಧಾರದ ಮೇಲೆ ವಿನ್ಯಾಸಗೊಳಿಸಲಾದ ಯಾವುದೇ ಲಸಿಕೆಗಳು ಮಾನವನ ಬಳಕೆಗೆ ಪರವಾನಗಿ ಪಡೆದುಕೊಂಡಿಲ್ಲ. ರಾಸಾಯನಿಕವಾಗಿ ದುರ್ಬಲಗೊಂಡ ವೈರಸ್ ಅನ್ನು ಬಳಸುವ ಲಸಿಕೆಯಾದ ವೆಕ್ಟರ್ಡ್ ಲಸಿಕೆಗಳ ಪೂರ್ವಭಾವಿ ಪರೀಕ್ಷೆಯನ್ನು 25 ತಂಡಗಳು ವರದಿ ಮಾಡಿವೆ. ಈ ಲಸಿಕೆಗಳು ಮಾನವನ ದೇಹದಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತೇಜಿಸಲು ಪೂರಕವಾಗಿ ಸಹಾಯ ಮಾಡುತ್ತವೆ. ಇದಲ್ಲದೆ, 32 ಸಂಶೋಧನಾ ತಂಡಗಳು ಎಸ್-ಪ್ರೋಟಿನ್ ಆಧಾರಿತ ಕೊರೊನಾ ವೈರಸ್ ಲಸಿಕೆಗಳ ಅಭಿವೃದ್ದಿಯಲ್ಲಿ ನಿರತವಾಗಿವೆ. ವೈರಸ್​​​​​​ ರಚನಾತ್ಮಕ ಪ್ರೋಟಿನ್​​​ಗಳಲ್ಲಿ ಕೊರೊನಾ ವೈರಸ್​​​​​ನ S ಪ್ರೋಟಿನ್ ಮಾನವನ ದೇಹದ ಪ್ರತಿರೋದಕ ಗುಣಗಳನ್ನು ನಿಷ್ಕ್ರಿಯಗೊಳಿಸುವ ಮುಖ್ಯ ಪ್ರತಿಜನಕ ಅಂಶ ಎಂದು ಪರಿಗಣಿಸಲಾಗಿದೆ.

ಆದ್ದರಿಂದ, ಲಸಿಕೆ ಮತ್ತು ಸೋಂಕು ಪ್ರತಿರೋಧಕ ಅಭಿವೃದ್ಧಿಗೆ ಎಸ್ ಪ್ರೋಟಿನ್ ಪ್ರಮುಖ ಅಂಶ ಎನ್ನುವುದನ್ನು ವಿಜ್ಞಾನಿಗಳು ಮನಗಂಡಿದ್ದಾರೆ. ಈ ಮಧ್ಯೆ ಲಸಿಕೆ ಅಭಿವೃದ್ಧಿಯಲ್ಲಿ 5 ಇತರ ತಂಡಗಳು ವೈರಸ್ ತರಹದ ಕಣಗಳ (ವಿಎಲ್‌ಪಿ) ಅಭಿವೃದ್ಧಿಯಲ್ಲಿ ನಿರತವಾಗಿವೆ. ವೈರಸ್ ತರಹದ ಕಣಗಳ (ವಿಎಲ್‌ಪಿ) ಬಹು ಪ್ರೋಟಿನ್ ರಚನೆಗಳಾಗಿವೆ. ಅದು ಅಧಿಕೃತ ಸ್ಥಳೀಯ ವೈರಸ್‌ಗಳ ಗುಣಾಂಶಗಳನ್ನು ಅನುಕರಿಸುತ್ತದೆ. ಆದರೆ, ವೈರಲ್ ಜೀನೋಮ್‌ ಕೊರತೆಯನ್ನು ಹೊಂದಿದ್ದು, ಈ ಅಂಶಗಳು ಅವುಗಳ ಅಗ್ಗದ ಮತ್ತು ಸುರಕ್ಷಿತ ಆಯ್ಕೆಯನ್ನಾಗಿ ಮಾಡುತ್ತದೆ. ಫಾರ್ಮಾಲ್ಡಿ ಹೈಡ್ ಮತ್ತು ನೀರಿನ ಮಿಶ್ರಣವನ್ನು ಬಳಸಿಕೊಂಡು ರೋಗಕಾರಕದ ಕೆಲವು ಜೀವಾಣುಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಟಾಕ್ಸಾಯ್ಡ್ ಲಸಿಕೆಯನ್ನು ತಯಾರಿಸಲಾಗುತ್ತದೆ. ಈ ನಿಷ್ಕ್ರಿಯ ವಿಷಕಾರಕ ಅಂಶವನ್ನು ದೇಹಕ್ಕೆ ಸುರಕ್ಷಿತವಾಗಿ ಚುಚ್ಚಲಾಗುತ್ತದೆ. ಅಂತಹ 8 ಟಾಕ್ಸಾಯ್ಡ್ ಲಸಿಕೆಗಳು ಕೋವಿಡ್ -19 ರೋಗಿಗಳ ಮೇಲೆ ಪ್ರಯೋಗಗಳಿಗಾಗಿ ಕಾಯುತ್ತಿವೆ.

ಸಾರ್ಸ್–ಕೋವಿಡ್-2 ಮೇಲ್ಪದರದಲ್ಲಿ ಸ್ಪೈಕ್ (ಎಸ್) ಪ್ರೋಟಿನ್‌ಗಳನ್ನು ಹೊಂದಿರುತ್ತದೆ. ಈ ಎಸ್ ಪ್ರೋಟಿನ್​​​ಗಳು ಲೋಳೆಯ ಪೊರೆಯಲ್ಲಿರುವ ಎಸಿಇ 2 ಗ್ರಾಹಕಗಳ ಮೇಲೆ ಹಾದು ಶ್ವಾಸಕೋಶವನ್ನು ಆಕ್ರಮಿಸುತ್ತವೆ. ಒಂದು ಬಾರಿ ವೈರಸ್ ಮನುಷ್ಯನ ಜೀವಕೋಶಗಳಿಗೆ ಸೇರಿಕೊಂಡ ನಂತರ, ಅದು ತನ್ನ ಆನುವಂಶಿಕ ವಸ್ತುವನ್ನು (ಆರ್‌ಎನ್‌ಎ) ಅವುಗಳಲ್ಲಿ ಚುಚ್ಚುತ್ತದೆ. ಮತ್ತು ಪುನರಾವರ್ತಿಸಲು ಪ್ರಾರಂಭಿಸುತ್ತದೆ. ರೋಗಕಾರಕ ವೈರಸ್ ಅನ್ನು (ಬ್ಯಾಕ್ಟೀರಿಯಾ, ವೈರಸ್, ಇತ್ಯಾದಿ) ಗುರುತಿಸಲು ಮತ್ತು ಎದುರಿಸಲು ರೋಗ ನಿರೋಧಕ ವ್ಯೆವಸ್ಥೆಯನ್ನು ಬಲಗೊಳಿಸುವುದೇ ಯಾವುದೇ ಲಸಿಕೆಯ ಪ್ರಮುಖ ಉದ್ದೇಶವಾಗಿದೆ. ಇದನ್ನು ಮಾಡಲು, ರೋಗ ನಿರೋದಕ ಪ್ರತಿಕ್ರಿಯೆಯನ್ನು ಪ್ರಚೋದಿಸಲು ವೈರಸ್‌ನಿಂದ ಕೆಲವು ಅಣುಗಳನ್ನು (ಪ್ರತಿಜನಕಗಳು ಎಂದು ಕರೆಯಲಾಗುತ್ತದೆ) ದೇಹಕ್ಕೆ ಪ್ರಹಸಿಸಬೇಕು.

ಪ್ರತಿಬಂಧಕ ವ್ಯವಸ್ಥೆಯು ಈ ಪ್ರತಿಜನಕಗಳನ್ನು ಗುರುತಿಸಿದ ನಂತರ, ಪ್ರತಿಕಾಯಗಳು ಈ ವೈರಸ್‌ನ ಜೀವಕೋಶ ಪೊರೆಗಳಿಗೆ ವಿಶೇಷ ಪ್ರೋಟಿನ್‌ಗಳನ್ನು ಜೋಡಿಸುತ್ತವೆ, ಇದರಿಂದ ಟಿ ಕೋಶಗಳು ಅವುಗಳನ್ನು ನಾಶಮಾಡುತ್ತವೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲಗೊಳ್ಳಲು ಸಹಾಯಕವಾಗುತ್ತವೆ. ರೋಗ ಕಣಗಳನ್ನು ನಿಷ್ಕ್ರಿಯಗೊಳಿಸಲು ಪ್ರತಿಕಾಯಗಳು ಮತ್ತು ಮ್ಯಾಕ್ರೋಫೇಜ್‌ಗಳನ್ನು ಸ್ರವಿಸಲು ಸಹಾಯಕ ‘ಟಿ’ ಕೋಶಗಳು ಬಿ ಕೋಶಗಳನ್ನು ಸಕ್ರಿಯಗೊಳಿಸುತ್ತವೆ. ಸೋಂಕಿತ ರೋಗಿಯ ಕೋಶಗಳನ್ನು ಕೊಲ್ಲಲು ಮತ್ತು ಸೈಟೊಟಾಕ್ಸಿಕ್ ‘ಟಿ’ ಕೋಶಗಳನ್ನು ಸಕ್ರಿಯಗೊಳಿಸಲು ಅವು ಪೂರಕವಾಗಿ ಕೆಲಸ ನಿರ್ವಹಿಸತ್ತವೆ. ಟಿ ಮತ್ತು ಬಿ ಕೋಶಗಳು ಒಂದೇ ರೋಗಕಾರಕವನ್ನು ನೆನಪಿಡುವ ಸ್ಮೃತಿ ಕೋಶಗಳನ್ನು ರೂಪಿಸುತ್ತವೆ. ಅದೇ ವೈರಸ್ ಮತ್ತೆ ಕಾಣಿಸಿಕೊಂಡರೆ, ಪ್ರತಿರೋಧಕ ವ್ಯವಸ್ಥೆಯು ತಕ್ಷಣವೇ ಪ್ರತಿಜನಕಗಳನ್ನು ಗುರುತಿಸುತ್ತದೆ ಮತ್ತು ವೈರಸ್ ದೇಹದೊಳಗೆ ಹರಡುವ ಮೊದಲು ವ್ಯವಸ್ಥಿತವಾಗಿ ಆಕ್ರಮಣ ಮಾಡಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.