ETV Bharat / bharat

ಇರಾನ್​​ನಲ್ಲೇ 255 ಭಾರತೀಯರಿಗೆ ಕೊರೊನಾ: ವಿದೇಶಾಂಗ ಇಲಾಖೆಯಿಂದ ಮಾಹಿತಿ

ಮಹಾಮಾರಿ ಕೊರೊನಾ ವೈರಸ್​​ ಅನ್ನು ನಿಯಂತ್ರಿಸಲು ಇಲ್ಲಿಯವರೆಗೂ ಎಲ್ಲಾ ರಾಜ್ಯಗಳಲ್ಲೂ ಶೈಕ್ಷಣಿಕ ಸಂಸ್ಥೆಗಳನ್ನು, ವ್ಯಾಪಾರ ವಹಿವಾಟು, ಚಿತ್ರಮಂದಿರಗಳು, ಸಭೆ ಸಮಾರಂಭಗಳನ್ನು ಸ್ಥಗಿತಗೊಳಿಸಲಾಗಿದೆ.

corona virus phobia
corona virus phobia
author img

By

Published : Mar 18, 2020, 11:43 PM IST

ಹೈದರಾಬಾದ್​: ಜಗತ್ತಿನಾದ್ಯಂತ 276 ಭಾರತೀಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಇರಾನ್​ ಒಂದರಲ್ಲೇ 255 ಭಾರತೀಯರಿಗೆ ಸೋಂಕು ತಗುಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದರ ಜೊತೆಗೆ ಯುಎಇಯಲ್ಲಿ 12, ಇಟಲಿಯಲ್ಲಿ ಐದು, ಶ್ರೀಲಂಕಾ, ರುವಾಂಡಾ, ಕುವೈತ್ ಮತ್ತು ಹಾಂಕಾಂಗ್​​​ನಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಚೀನಾಕ್ಕೆ 5 ಲಕ್ಷ ಕೈಗವಸು, ಒಂದು ಮಿಲಿಯನ್ ಜನರಲ್ ಮಾಸ್ಕ್, ಒಂದು ಲಕ್ಷ ವೈದ್ಯಕೀಯ ಮಾಸ್ಕ್​​ಗಳು ಮತ್ತು 4 ಸಾವಿರ ಎನ್-95 ಮಾಸ್ಕ್​ಗಳನ್ನು ರಫ್ತು ಮಾಡಲಾಗಿದೆ. ಇವೆಲ್ಲವನ್ನೂ ಭಾರತೀಯ ವಾಯುಪಡೆ ಎಸ್‌ಇ -17 ವಿಶೇಷ ವಿಮಾನದ ಮೂಲಕ ವುಹಾನ್​ಗೆ ತಲುಪಿಸಲಾಗಿದೆ.

ಭಾರತದಲ್ಲಿ 158 ಪ್ರಕರಣಗಳು ಪತ್ತೆಯಾಗಿವೆ. ದೆಹಲಿ, ಕರ್ನಾಟಕ, ಮಹಾರಾಷ್ಟ್ರದಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಶಂಕಿತರ ಸಂಖ್ಯೆ 5,700. ಇವರೆಲ್ಲರನ್ನೂ ಪ್ರತ್ಯೇಕ ವಾರ್ಡ್​​ನಲ್ಲಿಟ್ಟು ತಪಾಸಣೆ ನಡೆಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಮೂವರು ವಿದೇಶಿಯರು. ದೆಹಲಿಯಲ್ಲಿ 10, ಉತ್ತರಪ್ರದೇಶದಲ್ಲಿ 16, ಕೇರಳದಲ್ಲಿ 27 ಮತ್ತು ಕರ್ನಾಟಕದಲ್ಲಿ 11 ಮಂದಿಗೆ ಸೋಂಕು ತಗುಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 8, ಲಡಾಕ್‌ನಲ್ಲಿ 6, ತೆಲಂಗಾಣದಲ್ಲಿ 13, ರಾಜಸ್ಥಾನದಲ್ಲಿ 4, ಹರಿಯಾಣ, ಆಂಧ್ರಪ್ರದೇಶ, ಒಡಿಶಾ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.