ETV Bharat / bharat

ಕೊರೊನಾ ಹಾವಳಿ ಮಧ್ಯೆ ಆಸ್ಪತ್ರೆಯಲ್ಲೇ ಮೋಜು, ಮಸ್ತಿ: ವಿಡಿಯೋ - ಜೋಧ್​ಪುರದ ಮಥುರಾ ದಾಸ್​ ಮಾಥುರ್​ ಆಸ್ಪತ್ರೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲೇ ಮೋಜು, ಮಸ್ತಿ ಮಾಡುವ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊರೊನಾ ಹಾವಳಿ ಮಧ್ಯೆ ಆಸ್ಪತ್ರೆಯಲ್ಲೇ ಮೋಜು ಮಸ್ತಿ

author img

By

Published : Mar 28, 2020, 9:31 AM IST

ಜೋಧ್​ಪುರ್​(ಮಧ್ಯಪ್ರದೇಶ): ಜೋಧ್​ಪುರದ ಮಥುರಾ ದಾಸ್​ ಮಾಥುರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲೇ ಮೋಜು ಮಾಡುವ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಆಸ್ಪತ್ರೆಯಲ್ಲೇ ಮೋಜು ಮಸ್ತಿ ಮಾಡಿದ ಕೊರೊನಾ ಸೋಂಕಿತ ಸ್ನೇಹಿತರು...ವಿಡಿಯೋ ನೋಡಿ

ಚೌಪಸ್ನಿ ಹೌಸಿಂಗ್ ಬೋರ್ಡ್ ನಿವಾಸಿ ಮಾಯಾಂಕ್ ಪುರೋಹಿತ್ ಹಾಗೂ ಬಿಜೆಎಸ್ ಕಾಲೋನಿ ನಿವಾಸಿ ಚಂದ್ರಭನ್ ವಿಡಿಯೋದಲ್ಲಿರುವ ಇಬ್ಬರು ಕೊರೊನಾ ಸೋಂಕಿತರು. ಇವರಿಬ್ಬರು ಸ್ನೇಹಿತರು ಎಂದು ತಿಳಿದು ಬಂದಿದೆ. ಇಬ್ಬರೂ ಕೂಡ ಒಟ್ಟಿಗೆ ಲಂಡನ್​​ನಿಂದ ಭಾರತಕ್ಕೆ ಬಂದಿದ್ದರು. 2 ದಿನಗಳ ಹಿಂದಷ್ಟೇ ಕೊರೊನಾ ಪಾಸಿಟಿವ್​​ ಎಂದು ದೃಢಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು ಅಲ್ಲಿನ ಸ್ಥಿತಿಗತಿ ಕುರಿತ ವಿಡಿಯೋವನ್ನು ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ:

ವಿಡಿಯೋ ತಯಾರಿಸುತ್ತಿರುವವನು ಚಂದ್ರಬನ್​. ಆತ ಕೇಳುತ್ತಾ ಹೋಗುವ ಪ್ರಶ್ನೆಗಳಿಗೆ ಮಯಾಂಕ್​ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತಟ್ಟೆ ಹಿಡಿದ ಮಯಾಂಕ್​ ಇಲ್ಲಿನ ಊಟ ಚೆನ್ನಾಗಿದೆ. ಇಲ್ಲಿ ಎಲ್ಲರೂ ನಮ್ಮನ್ನು ಬಹಳ ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇವರನ್ನೆಲ್ಲ ಒಮ್ಮೆ ಬಾಚಿ ಅಪ್ಪಬೇಕು ಎನಿಸುತ್ತದೆ. ಆದರೆ, ಏನು ಮಾಡೋದು ಇವರೆಲ್ಲ ನಮ್ಮ ಹತ್ತಿರವೇ ಸುಳಿಯಲ್ಲ. ನಾವು ಹುಷಾರಾದ ನಂತರವೂ ಇಲ್ಲೇ ಇರಲು ಬಯಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ:

ಜೋಧಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಸದ್ಯ ಸೋಂಕಿತರ ಸಂಖ್ಯೆ 6 ಕ್ಕೆ ಏರಿದ್ದು, ಮಥುರಾ ದಾಸ್ ಮಾಥುರ್ ಆಸ್ಪತ್ರೆಯಲ್ಲಿ ಪಾಸಿಟಿವ್​ ವರದಿ ಬಂದ ಎಲ್ಲಾ ರೋಗಿಗಳ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.