ETV Bharat / bharat

ವಿಶೇಷ ಅಂಕಣ... ಮಕ್ಕಳ ಮೇಲೆ ಕೋವಿಡ್ ಪರಿಣಾಮ: ಶಾಲೆಗೆ ಕಳುಹಿಸುವುದು ಸುರಕ್ಷಿತವೇ? - ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ

ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಲೇಖನದ ಪ್ರಕಾರ, ವಯಸ್ಕರ ಜೊತೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಸೋಂಕು ಕಂಡುಬಂದಾಗ ಅವರಲ್ಲಿ ಸಣ್ಣಪುಟ್ಟ ಗುಣಲಕ್ಷಣಗಳಷ್ಟೇ ಕಂಡುಬಂದಿದ್ದವು ಎಂದು ಚೀನಾದ ಶೆನ್‌ಜೆನ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಸಂಶೋಧನೆಯಿಂದ ತಿಳಿದುಬಂದಿದೆ. ಹಾಗಾಗಿ ಮಕ್ಕಳನ್ನು ಶಾಲೆಗೆ ಕಳಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಪೋಷಕರನ್ನು ಕಾಡುತ್ತಿವೆ.

corona Impact  on  children
ಮಕ್ಕಳ ಮೇಲೆ ಕೋವಿಡ್ ಪರಿಣಾಮ
author img

By

Published : May 20, 2020, 12:45 PM IST

ಹೈದರಾಬಾದ್: ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಆರು ತಿಂಗಳುಗಳಿಂದಲೂ ಇಡೀ ವಿಶ್ವ ಲಾಕ್‌ಡೌನ್ ಆಗಿದೆ. ಕಳೆದ ಕೆಲವು ದಿನಗಳಿಂದ ಹಂತ ಹಂತವಾಗಿ ನಿಧಾನವಾಗಿ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಕೆಲವು ದೇಶಗಳಲ್ಲಿ ಶಾಲೆಗಳು ತೆರೆದಿವೆ. ಇನ್ನೂ ಕೆಲವು ದೇಶಗಳಲ್ಲಿ ಶಾಲೆ ತೆರೆಯುತ್ತಿವೆ.

ಶಾಲೆಗಳು ತೆರೆದರೆ ಹೇಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು? ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇಂಥ ಸನ್ನಿವೇಶದಲ್ಲಿ ಮಕ್ಕಳಿಗೆ ರೋಗ ಬಾಧಿಸುವ ಸಾಧ್ಯತೆ ಎಷ್ಟರ ಮಟ್ಟಿಗಿದೆ ಮತ್ತು ಎಷ್ಟರ ಮಟ್ಟಿಗೆ ವೈರಸ್ ಹರಡುತ್ತಿದೆ? ವಿಜ್ಞಾನಿಗಳು ಈ ಬಗ್ಗೆ ಏನು ಹೇಳುತ್ತಾರೆ? ಈ ಬಗ್ಗೆ ಯಾವ ಅಧ್ಯಯನಗಳು ನಡೆದಿವೆ? ಎಂಬ ಗೊಂದಲದಲ್ಲಿ ಪಾಲಕರಿದ್ದಾರೆ.

ಬ್ರಿಟಿಷ್ ಸಂಶೋಧಕರ ಪೈಕಿ ಕೊರೋನಾ ಉಪಟಳ ಹೆಚ್ಚಿರುವ ಚೀನಾ, ಇಟಲಿ, ಅಮೆರಿಕದಂತಹ ದೇಶಗಳಲ್ಲಿ 18 ವರ್ಷಕ್ಕಿಂತ ಕಡಿಮೆಯ ಶೇ. 2 ರಷ್ಟು ಮಕ್ಕಳಿಗೆ ಈ ವೈರಸ್‌ ಬಾಧಿಸಿದೆ. ಆದರೆ, ಕೆಲವು ಸಂಶೋಧಕರು ಹೇಳುವಂತೆ, ಈವರೆಗೆ ಶಾಲೆಗಳು ಮುಚ್ಚಿದ್ದವು. ಹೀಗಾಗಿ ಮಕ್ಕಳಿಗೆ ಅಷ್ಟಾಗಿ ಬಾಧಿಸಿಲ್ಲ ಎಂದಿದ್ದಾರೆ. ಮಕ್ಕಳಲ್ಲಿ ಗುಣಲಕ್ಷಣ ಕಂಡುಬರದ್ದರಿಂದ ವ್ಯಾಪಕ ತಪಾಸಣೆ ನಡೆಸಿಲ್ಲ. ಸಮುದಾಯಕ್ಕೆ ಹರಡುವ ಸಾಧ್ಯತೆ ಸಂಪೂರ್ಣವಾಗಿ ನಿವಾರಣೆಯಾದ ನಂತರವೇ ಶಾಲೆಗಳು ತೆರೆಯಬೇಕು ಎಂದು ಹಾಂಕಾಂಗ್‌ನ ಕೆಲವು ಸಂಶೋಧಕರು ಹೇಳಿದ್ದಾರೆ.

ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಲೇಖನದ ಪ್ರಕಾರ, ವಯಸ್ಕರ ಜೊತೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಸೋಂಕು ಕಂಡುಬಂದಾಗ ಅವರಲ್ಲಿ ಸಣ್ಣಪುಟ್ಟ ಗುಣಲಕ್ಷಣಗಳಷ್ಟೇ ಕಂಡುಬಂದಿದ್ದವು ಎಂದು ಚೀನಾದ ಶೆನ್‌ಜೆನ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಸಂಶೋಧನೆಯಲ್ಲಿ ಕಂಡುಬಂದಿದೆ. ದಕ್ಷಿಣ ಕೊರಿಯಾ, ಇಟಲಿ ಮತ್ತು ಐರ್ಲೆಂಡ್‌ನಲ್ಲಿ ವ್ಯಾಪಕವಾಗಿ ತಪಾಸಣೆ ಮಾಡಲಾಗಿದ್ದು, ಅಲ್ಲೂ ಕೂಡ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚೇನೂ ಇರಲಿಲ್ಲ.

ವೈರಸ್‌ ಹರಡುವ ಸಾಧ್ಯತೆ ಕಡಿಮೆ ಫ್ರಾನ್ಸ್‌ನ ಆಲ್ಪ್ಸ್‌ ರೀಜನ್‌ನ ಮೂರು ಶಾಲೆಗಳಿಗೆ ಕೋವಿಡ್ ಪಾಸಿಟಿವ್ ಮಗು (9) ಹೋಗಿದ್ದನಾದರೂ, ಆತನಿಂದ ಯಾರಿಗೂ ವೈರಸ್ ಹರಡಿಲ್ಲ. ಸಿಂಗಾಪುರದಲ್ಲಿನ ಶಾಲೆಗಳಲ್ಲಿ ಮಕ್ಕಳಲ್ಲಿ ವೈರಸ್ ಹರಡುವ ಸಾಧ್ಯತೆ ಕುರಿತು ಆಸ್ಟ್ರೇಲಿಯಾದ ಪರಿಣಿತರು ಅಧ್ಯಯನ ನಡೆಸಿದ್ದರು. ಕುಟುಂಬದ ಇತರ ಸದಸ್ಯರಿಗೆ ಹೋಲಿಸಿದರೆ, ಮಕ್ಕಳು ಕಡಿಮೆ ಪ್ರಮಾಣದಲ್ಲಿ ಅಂದರೆ ಶೇ. 8 ರ ದರದಲ್ಲಿ ಹರಡುತ್ತಾರೆ.

ರೋಗನಿರೋಧಕತೆ ಮಟ್ಟದಲ್ಲಿ ವ್ಯತ್ಯಾಸ

ವಯಸ್ಕರಿಗಿಂತ ಹೆಚ್ಚು ದಕ್ಷವಾಗಿ ಮಕ್ಕಳು ಕೋವಿಡ್ ಅನ್ನು ಎದುರಿಸಿದ್ದಾರೆ ಎಂದು ವಿವಿಧ ಸಂಶೋಧಕರು ಸಾಬೀತು ಮಾಡಿದ್ದಾರೆ. ಕೊರೊನಾ ವೈರಸ್ ಅನ್ನು ಆಕರ್ಷಿಸುವ ಎ2 ಕಿಣ್ವವು ಮಕ್ಕಳ ಶ್ವಾಸಕೋಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೇ ಕಾರಣಕ್ಕೆ ಮಕ್ಕಳಲ್ಲಿ ಇದು ಹೆಚ್ಚು ಗುಣಲಕ್ಷಣಗಳನ್ನು ತೋರಿಸುವುದಿಲ್ಲ ಅಥವಾ ಕೆಲವು ಬಾರಿ ತುಂಬಾ ಕಡಿಮೆ ಸಮಸ್ಯೆಯನ್ನು ಇದು ಒಡ್ಡುತ್ತದೆ. ತುಂಬಾ ಕೆಲವರಿಗೆ ಮಾತ್ರ ಇದು ಗಂಭೀರವಾಗಿ ಕಾಣಿಸಿಕೊಳ್ಳುತ್ತದೆ ಮತ್ತು ಕೆಲವೇ ಕೆಲವರು ಸಾವನ್ನಪ್ಪುತ್ತಾರೆ.

15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇ ಪದೇ ಶೀತ, ಕೆಮ್ಮು ಮತ್ತು ಅಸ್ತಮಾದಂತಹ ವೈರಸ್‌ಗಳು ಬಾಧಿಸುತ್ತಿರುತ್ತವೆ. ಹೀಗಾಗಿ ಅವರಲ್ಲಿ ಸಾರ್ಸ್‌-ಸಿಒವಿ-2 (ತೀವ್ರ ದೀರ್ಘಕಾಲೀನ ಶ್ವಾಸಕೋಶದ ಅಸ್ವಸ್ಥತೆ ಕೊರೊನಾವೈರಸ್ 2) ವಿರುದ್ಧ ರೋಗನಿರೋಧಕತೆ ಬೆಳೆದಿರುತ್ತದೆ.

ಮಕ್ಕಳಲ್ಲಿ ವೈರಸ್‌ನೊಂದಿಗೆ ಸೋಂಕಿನ ಸೈಟೋಕಿನ್ಸ್‌ ಉತ್ಪಾದನೆ ಮಟ್ಟ ಕಡಿಮೆ ಇರುತ್ತದೆ. ಈ ಕಾರಣಕ್ಕೆ, ಇತರ ಆಂತರಿಕ ಅಂಗಗಳು ಹೆಚ್ಚು ಅಪಾಯವನ್ನು ಉಂಟು ಮಾಡುವುದಿಲ್ಲ. ವಯಸ್ಕರಲ್ಲಿ ಸೈಟೋಕಿನ್ ಸ್ಟ್ರೋಕ್ ಹೆಚ್ಚಳದಿಮದಲೇ ಸಾವು ಸಂಭವಿಸುತ್ತದೆ ಎಂದು ವಿವಿಧ ದೇಶಗಳಲ್ಲಿನ ಸಂಶೋಧಕರು ಕಂಡುಕೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ಮೊದಲು ಹೆಚ್ಚುವರಿ ಕಾಳಜಿ ವಹಿಸಬೇಕು. ತರಗತಿಯಲ್ಲಿ ಮಕ್ಕಳ ಆಸನ ವ್ಯವಸ್ಥೆಯನ್ನು ಮರು ಹೊಂದಾಣಿಕೆ ಮಾಡಬೇಕು ಮತ್ತು ಶಾಲೆ ವ್ಯಾನ್‌ಗಳನ್ನೂ ಆಗಾಗ್ಗೆ ಸೋಂಕುನಿವಾರಣೆ ಮಾಡಬೇಕು.

ಪ್ರಸ್ತುತ ಹಾನಿ

ಲಾಕ್‌ಡೌನ್‌ನಿಂದಾಗಿ 190 ದೇಶಗಳ 157 ಕೋಟಿಗೂ ಹೆಚ್ಚು ಮಕ್ಕಳು ಶಾಲೆ ತಪ್ಪಿಸಿಕೊಂಡಿದ್ದಾರೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಇಲ್ಲ. ಇದರಿಂದಾಗಿ ಅವರ ಆರೋಗ್ಯದ ಮೇಲೂ ಪರಿಣಾಮ ಉಂಟಾಗಿದೆ. 12 ಕೋಟಿಗೂ ಹೆಚ್ಚು ಮಕ್ಕಳಿಗೆ 37 ದೇಶಗಳಲ್ಲಿ ಲಸಿಕೆ ಹಾಕಿಲ್ಲ. ಈ ಸಮಯದಲ್ಲಿ ನಾವು ಭಾರತದಲ್ಲಿ 40 ಕೋಟಿ ಮಕ್ಕಳಿಗೆ ಲಸಿಕೆ ಹಾಕಲು ಸಾಧ್ಯವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿತ್ತು.

ಉತ್ತಮ ವಿಧಾನವೆಂದರೆ...

  • ಶಾಲೆಗಳನ್ನು ತೆರೆದರೆ ಹಿಂದಿನಂತೆಯೇ ಮಕ್ಕಳು ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಂಪೂರ್ಣ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾಗುತ್ತದೆ.
  • ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕಾಗಿ ತರಗತಿ ಬೆಂಚ್‌ಗಳು/ಚೇರುಗಳನ್ನು ದೂರ ದೂರ ಇಡಬೇಕಾಗುತ್ತದೆ.
  • ಸ್ಥಳದ ಸಮಸ್ಯೆಯನ್ನು ನಿವಾರಿಸಲು ತರಗತಿಯನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಬೇಕಾಗಬಹುದು ಮತ್ತು ಪ್ರತಿ ಗ್ರೂಪ್‌ಗೆ ವಾರದಲ್ಲಿ 4 ದಿನಗಳವರೆಗೆ ಬೋಧಿಸಬೇಕಾಗಬಹುದು.
  • ಅರ್ಧ ತರಗತಿಯನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಬೇಕು. ಇದು ಖಾಸಗಿ ಶಾಲೆಗಳಿಗೆ ಸಾಧ್ಯವಾಗುತ್ತದೆ. ಆದರೆ ಸರ್ಕಾರಿ ಶಾಲೆಗಳನ್ನು ಇದನ್ನು ಮಾಡಲು ಕಷ್ಟಪಡಬಹುದು.
  • ಎಲ್ಲ ಮಕ್ಕಳಿಗೂ ಮಾಸ್ಕ್‌ಗಳು ಮತ್ತು ಕೈ ತೊಳೆಯುವುದು ಕಡ್ಡಾಯವಾಗಿರಬೇಕು.
  • ಶಾಲೆಯ ಸುತ್ತಲಿನ ಪ್ರದೇಶವನ್ನು ಆಗಾಗ್ಗೆ ಸೋಂಕುನಿವಾರಣೆ ಮಾಡಬೇಕು. ಮಕ್ಕಳಿಗೆ ಸ್ಯಾನಿಟೈಸರ್‌ ಒದಗಿಸಬೇಕು.
  • ಆಟದ ಮೈದಾನವನ್ನು ಸ್ವಲ್ಪ ಸಮಯದವರೆಗೆ ಮುಚ್ಚಿರಬೇಕು.

ಇತರ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ..?

  • ಫ್ರಾನ್ಸ್‌ನಲ್ಲಿ ಪ್ರತಿ ತರಗತಿಯಲ್ಲಿ 15 ಮಕ್ಕಳು ಇರಬೇಕು ಮತ್ತು ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು ಎಂದು ಆದೇಶಿಸಲಾಗಿದೆ
  • ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ಕಡ್ಡಾಯವಾಗಿದೆ. ಪ್ರತಿ ತರಗತಿಯಲ್ಲಿ ಕುರ್ಚಿಗಳನ್ನು ಆರು ಅಡಿ ಅಂತರದಲ್ಲಿ ಹಾಕಲಾಗಿದೆ
  • ತೈವಾನ್‌ನಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಾರ್ಡ್‌ ಬೋರ್ಡ್‌ ಅಳವಡಿಸಿ ದೈಹಿಕ ಅಂತರ ಕಾಯ್ದುಕೊಳ್ಳಲಾಗಿದೆ. ಸ್ವೀಡನ್‌ನಲ್ಲಿ ಶಾಲೆಗಳನ್ನು ಮುಚ್ಚಿಲ್ಲ. ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
  • ಚೀನಾದಲ್ಲಿ, ಎಲ್ಲ ವಿದ್ಯಾರ್ಥಿಗಳ ಶಾಲೆ ಬ್ಯಾಗ್‌ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
  • ಬ್ರಿಟನ್‌ನಲ್ಲಿ ಶಾಲೆಗಳು 2% ಮಕ್ಕಳೊಂದಿಗೆ ಆರಂಭವಿದೆ
  • ಆಸ್ಟ್ರೇಲಿಯಾದಲ್ಲಿ ಎರಡನೇ ಅವಧಿಗೆ ಶಾಲೆಗಳು ಸಂಪೂರ್ಣ ಸಿದ್ಧತೆಯೊಂದಿಗೆ ಆರಂಭವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ಪಾಲಕರೇ ನಿರ್ಧರಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.