ನಾಶಿಕ್: ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಮಧ್ಯೆ ತರಕಾರಿ ಹಾಗೂ ಸೊಪ್ಪಿನ ಬೆಲೆ ಗಗನಕ್ಕೇರಿದೆ.
ಪ್ರಮುಖವಾಗಿ ಕೊತ್ತಂಬರಿ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಒಂದು ಕಟ್ಟಿನ ಬೆಲೆ 331ರೂಗೆ ಮಾರಾಟವಾಗುತ್ತಿದೆ. ಇದರ ಜತೆಗೆ ವಿವಿಧ ತರಕಾರಿಗಳ ಬೆಲೆ ಸಹ ಹೆಚ್ಚಳವಾಗಿವೆ. ಪ್ರಮುಖವಾಗಿ ನಾಸಿಕ್, ಇಗಟಾಪುರ್, ದಿಂಡೂರಾ ಪ್ರದೇಶಗಳಲ್ಲಿ ತರಕಾರಿ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಹರಸಾಹಸ ಪಡುವಂತಾಗಿದೆ.
ನಾಸಿಕ್ ಮಾರುಕಟ್ಟೆಗೆ ಚಿಕ್ಕ ಚಿಕ್ಕ 354 ಕೊತ್ತಂಬರಿ ಸೊಪ್ಪಿನ ಕಟ್ಟು ತೆಗೆದುಕೊಂಡು ಬಂದಿದ್ದ ರೈತನೊಬ್ಬ 100 ಕಟ್ಟು (ಬಂಡಲ್) ಮಾರಾಟ ಮಾಡಿ 33,100 ರೂ ತೆಗೆದುಕೊಂಡು ಮನೆಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ. ಇನ್ನು ಕಳೆದ ವಾರ ಇದರ ಬೆಲೆ 220 ರೂ. ಇತ್ತು ಎಂದು ಆತ ತಿಳಿಸಿದ್ದಾನೆ.