ETV Bharat / bharat

ದೇಶದ ಅತ್ಯಾಚಾರ ಪ್ರಕರಣಗಳಲ್ಲಿ ನೀಡಿರುವ ಶಿಕ್ಷೆಯ ಪ್ರಮಾಣವೆಷ್ಟು? - ದೆಹಲಿ ಪೊಲೀಸ್ ಸಿಬ್ಬಂದಿಯಲ್ಲಿಯೂ ಸಹ, ಅತ್ಯಾಚಾರ-ವಿರೋಧಿ

ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಈಗಾಗಲೇ ಮರಣದಂಡನೆ ಜಾರಿಗೊಳಿಸಲಾಗಿದೆ. ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಶೇಕಡಾ 27.2 ರಷ್ಟಿದೆ. ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಲೋಪ ಎಂಬುದು ಸಾಮಾಜಿಕ ಕಾರ್ಯಕರ್ತರ ವಾದವಾಗಿದೆ.

Conviction rate for rape only 27.2 per cent even as country celebrates justice in Nirbhaya case
ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದ್ದರೂ, ಅತ್ಯಾಚಾರದ ಶಿಕ್ಷೆಯ ಪ್ರಮಾಣ ಕೇವಲ ಶೇ. 27.2 ಮಾತ್ರ
author img

By

Published : Jan 10, 2020, 12:33 PM IST

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳ ವಿರುದ್ಧ ಮರಣದಂಡನೆ ಜಾರಿಗೊಳಿಸಲಾಗಿದೆ. ಆದರೂ ದೇಶದಲ್ಲಿನ ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣವು ಶೇಕಡಾ 27.2 ರಷ್ಟಿದೆ. ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಲೋಪ ಎಂಬುದು ಸಾಮಾಜಿಕ ಕಾರ್ಯಕರ್ತರ ವಾದವಾಗಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಾರ, 2018 ರಲ್ಲಿ 1,56,327 ಅತ್ಯಾಚಾರ ಪ್ರಕರಣಗಳು ವಿಚಾರಣೆಯಲ್ಲಿದ್ದವು. ಈ ಪೈಕಿ 17,313 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಕೇವಲ 4,708 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ. 11,133 ಅತ್ಯಾಚಾರ ಪ್ರಕರಣಗಳಲ್ಲಿ ಖುಲಾಸೆ ಮತ್ತು 1,472 ಪ್ರಕರಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದಲ್ಲದೆ, 2018 ರಲ್ಲಿ ಒಟ್ಟು 1,38,642 ಅತ್ಯಾಚಾರ ಪ್ರಕರಣಗಳು ಬಾಕಿ ಉಳಿದಿದ್ದವು. 2018 ರ ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣವು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿತ್ತು. 2017 ರಲ್ಲಿ, 5,822 ಅತ್ಯಾಚಾರ ಪ್ರಕರಣಗಳಲ್ಲಿ 18,099 ಅಪರಾಧ ಸಾಬೀತಾದಾಗ, 32.2 ಶೇ. ಶಿಕ್ಷೆಯ ಪ್ರಮಾಣವನ್ನು ನೀಡಲಾಗಿದೆ ಎಂದು ಎನ್‌ಸಿಆರ್‌ಬಿ ವರದಿ ತೋರಿಸಿದೆ.

23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ 2012 ರಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಹತ್ಯೆಯ ನಂತರ ಅತ್ಯಾಚಾರ-ವಿರೋಧಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಕಡಿಮೆ ಶಿಕ್ಷೆಯ ಪ್ರಮಾಣವು ಮುಂದುವರಿಯುತ್ತಿದೆ. 2012 ರ ಡಿಸೆಂಬರ್ 16-17ರ ಮಧ್ಯರಾತ್ರಿ ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಜನರಿಂದ ಆಕೆ ಅತ್ಯಾಚಾರಕ್ಕೊಳಗಾಗಿದ್ದಳು. ನಂತರ ಚಿಕಿತ್ಸೆ ಫಲಕಾರಿಯಾಗದೆ ಸಿಂಗಪುರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಇದರಿಂದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಿಗೆ ಮತ್ತು ಬದುಕುಳಿದವರಿಗೆ ತ್ವರಿತ ನ್ಯಾಯ ಒದಗಿಸಲು ನ್ಯಾಯಾಂಗ ವ್ಯವಸ್ಥೆಯ ಸಂಪೂರ್ಣ ಕೂಲಂಕಷ ಪರಿಶೀಲನೆ ಅಗತ್ಯವಿದೆ ಎಂದು ಮಹಿಳಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಮಹಿಳಾ ಸಬಲೀಕರಣ ಗುಂಪಿನ ಮುಖಂಡೆ ಸಾಹೇಲಿಯ ವಾನಿ ಸುಬ್ರಮಣಿಯನ್ "ಈ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಅಪರಾಧಗಳನ್ನು ಮಾಡುವವರಿಗೆ ನಿಜವಾದ ಕಠಿಣ ಶಿಕ್ಷೆ- ಕಾನೂನುಗಳನ್ನು ಜಾರಿಗೊಳಿಸಬೇಕಿದೆ" ಎಂದು ಹೇಳಿದರು. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸಿಪಿಐ ನಾಯಕಿ ಅನ್ನಿ ರಾಜಾ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆಯ ಪ್ರಮಾಣಕ್ಕೆ ಏಕೈಕ ಪರಿಹಾರವಲ್ಲ ಎಂದು ಹೇಳಿದರು. ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ 1,023 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಕೇಂದ್ರದ ನಿರ್ಧಾರವನ್ನು ಅವರು ಶ್ಲಾಘಿಸಿದ್ದಾರೆ.

ಅಲ್ಲದೇ ದೆಹಲಿ ಪೊಲೀಸ್ ಸಿಬ್ಬಂದಿಯಲ್ಲಿಯೂ ಸಹ, ಅತ್ಯಾಚಾರ-ವಿರೋಧಿ ಕಾನೂನಿನ ಬಗ್ಗೆ ಎಷ್ಟು ಜಾಗೃತಿ ಇದೆ ಎಂದು ನೀವು ಕೇಳಬೇಕು. ಅದಕ್ಕಾಗಿಯೇ ನಾವು ಸಂಪೂರ್ಣ ಕೂಲಂಕಷ ಮತ್ತು ನ್ಯಾಯಾಂಗ ಸುಧಾರಣೆಗಳನ್ನು ಕೋರುತ್ತಿದ್ದೇವೆ" ಎಂದರು. ಅತ್ಯಾಚಾರ ಪ್ರಕರಣಗಳಿಗೆ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಿರ್ಮಿಸಲು ಹೆಚ್ಚಿನ ಬಜೆಟ್ ಹಂಚಿಕೆ ಅಗತ್ಯವಿದೆ ಎಂದು ಅನ್ನಿ ರಾಜಾ ಸಲಹೆ ನೀಡಿದ್ದಾರೆ.

"ಈ ಪ್ರಕರಣಗಳ ವಿಧಿವಿಜ್ಞಾನ ವರದಿಗಳಿಗಾಗಿ ಏಕೆ ಹೆಚ್ಚು ಸಮಯ ಕಾಯಬೇಕಾಗಿದೆ? ಏಕೆಂದರೆ ನಮ್ಮ ದೇಶದಲ್ಲಿ ಕೆಲವೇ ಕೆಲವು ವಿಧಿವಿಜ್ಞಾನ ಪ್ರಯೋಗಾಲಯಗಳಿವೆ. ಇವೆಲ್ಲವೂ ಸಮಯಕ್ಕೆ ಅನುಗುಣವಾಗಿ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಜಾರಿಯಲ್ಲಿರಬೇಕು. ಅದಕ್ಕಾಗಿ ನಮಗೆ ಬಜೆಟ್ ಹಂಚಿಕೆ ಬೇಕು ಎಂದು ಅವರು ಹೇಳಿದರು.

ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಮುಖ್ಯಸ್ಥ ಲಲಿತಾ ಕುಮಾರಮಂಗಲಂ ಅವರು ನ್ಯಾಯಾಂಗ ವ್ಯವಸ್ಥೆಯ ಸಂಪೂರ್ಣ ಕೂಲಂಕಷ ಪರಿಶೀಲನೆ ಅಗತ್ಯವಿದೆ ಎಂದರು. "ನ್ಯಾಯ ಪಡೆಯಲು ಏಳು ವರ್ಷಗಳು ಕಳೆಯಬೇಕಾಯಿತು, ಈ ರೀತಿಯ ನ್ಯಾಯ ಸಿಗದ ಹಲವಾರು ಪ್ರಕರಣಗಳಿವೆ ಎಂದರು.

ದೆಹಲಿ ನ್ಯಾಯಾಲಯವು ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ಕು ಜನರಿಗೆ ಗಲ್ಲು ಶಿಕ್ಷೆ ನೀಡಿದ್ದು, ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಬೇಕೆಂದು ಆದೇಶಿಸಿದೆ. ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರು ಜನರಲ್ಲಿ, ಓರ್ವ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದ.

ZCZC
PRI ESPL NAT
.NEWDELHI DES6
NCRB-RAPE-CONVICTION
Conviction rate for rape only 27.2 per cent even as country celebrates justice in Nirbhaya case

By Uzmi Athar
         New Delhi, Jan 9 (PTI) While many believe justice has been delivered in the Nirbhaya case with death warrants being issued against the rapists, the conviction rate in rape cases is abysmally low at 27.2 per cent which activists say is due to lapses in the criminal justice system.
         According to the National Crime Records Bureau (NCRB), 1,56,327 rape cases were on trial in 2018. Of these, trial was completed in 17,313 cases, resulting in conviction in only 4,708 cases. There was acquittal in 11,133 rape cases and discharge in 1,472 cases.
         A case can be discharged before the charges are framed whereas acquittal can be done only when the trial concludes.
         Moreover, a total of 1,38,642 rape cases remained pending in 2018.
         The conviction rate in rape cases for 2018 decreased from that during the previous year. In 2017, a conviction rate of 32.2 per cent was recorded when 5,822 rape cases resulted in conviction out of the 18,099 cases whose trial was completed during that year, the NCRB data showed.
         The low conviction rate persists despite anti-rape laws being made stringent after the brutal rape and murder in 2012 of a 23-year-old paramedic student, who later came to be known as 'Nirbhaya'.
         She was raped on the intervening night of December 16-17, 2012 in a moving bus in south Delhi by six people, before being thrown out on the road. She died days later at a Singapore hospital.
         Women activists say a complete overhaul of the judicial system is needed to ensure speedy justice to victims and survivors of sexual assault.
         Vani Subramanian, from women empowerment group Saheli, said the Nirbhaya incident is not an isolated one.
          "Sexual assault occurs with frightening regularity in this country. We need to evolve punishments that act as true deterrents to the very large number of men who commit these crimes," she said.
         "The low conviction rate shows that perpetrators of sexual violence enjoy a high degree of impunity, including being freed of charges," Subramanian said.
         Annie Raja, women's rights activist and CPI leader, said increasing the number of fast track courts cannot be the only solution to the low conviction rate in cases of sexual violence.
          She was referring to the Centre's decision to set up 1,023 special courts for speedy trial of cases of sexual assault on women and children.
         "Cases come to courts after inquiries and witness report and then only court gives its verdict," she said. "You need to sensitise the police. Even among Delhi Police personnel, you should ask how much is the awareness about the anti-rape law. That is why we are demanding complete overhauling and judicial reforms," she said.
         Raja further suggested that more budgetary allocation is required in building the infrastructure and facilities for rape cases
         "Why do these cases have to wait long for forensic reports? Because we have very few forensic labs in the country. These are all systems that need to be in place to ensure time-bound justice. For that we need budgetary allocation, you need have political will and sensitivity," she said.
         Activist and former National Commission for Women (NCW) chief Lalitha Kumaramangalam also believed that a complete overhaul of the judicial system was needed.
         "It took seven years to get justice and there are hundreds of cases which do not evoke this kind of a response (that the Nirbhaya case got). We must have a moratorium of time," she said.
          On Tuesday, a Delhi court issued death warrants against four people convicted in the Nirbhaya case and ordered that they be hanged at 7 am on January 22 in the Tihar Jail here.
          Of the six convicted in the case, one died during trial and another, a juvenile at the time of the offence, was set free after serving a three-year term in a reform facility. PTI UZM RDM
MIN
MIN
01091159
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.