ಸುಲ್ತಾನ್ಪೂರ(ಯುಪಿ): ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಲಾಕ್ಡೌನ್ ಜನಸಾಮಾನ್ಯರಿಗೆ ಮಾತ್ರವಲ್ಲದೇ, ಸೆಲಿಬ್ರಿಟಿ ಹಾಗೂ ರಾಜಕಾರಣಿಗಳಿಗೂ ತಟ್ಟಿದ್ದು, ಅಗತ್ಯ ವಸ್ತು ಪಡೆದುಕೊಳ್ಳಲು ಇವರು ಪರದಾಟ ನಡೆಸಿದ್ದಾರೆ.
ಇದೀಗ ಉತ್ತರಪ್ರದೇಶದ ಸುಲ್ತಾನ್ಪೂರ್ದಲ್ಲಿ ಇಂತಹ ಘಟನೆ ನಡೆದಿದ್ದು, ಔಷಧ ತೆಗೆದುಕೊಂಡು ಬರಲು ಮೆಡಿಕಲ್ ಶಾಪ್ಗೆ ತೆರಳಿದ್ದ ಶಾಸಕರೊಬ್ಬರನ್ನ ಪೊಲೀಸ್ ಪೇದೆ ತಡೆ ಹಿಡಿದು ನಿಲ್ಲಿಸಿ, ತದನಂತರ ರಿಲೀಸ್ ಮಾಡಿದ್ದಾರೆ. ಔಷಧ ತೆಗೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಪೊಲೀಸರು ಪಾಸ್ ತೋರಿಸುವಂತೆ ತಿಳಿಸಿದ್ದಾರೆ. ತನ್ನ ಬಳಿ ಪಾಸ್ ಇಲ್ಲ ಎಂದು ಹೇಳಿದ್ದರಿಂದ ಶಾಸಕನನ್ನು ತಡೆ ಹಿಡಿದು ನಿಲ್ಲಿಸಲಾಗಿದೆ. ಇದಾದ ಬಳಿಕ ಶಾಸಕ ಎಸ್ಪಿಗೆ ಫೋನ್ ಮಾಡಿದ್ದು, ಈ ವೇಳೆ ಬಿಟ್ಟು ಕಳುಹಿಸುವಂತೆ ಸೂಚನೆ ನೀಡಿದ ಬಳಿಕ ಶಾಸಕರಿಗೆ ಪೊಲೀಸ್ ಮನೆ ಕಡೆ ತೆರಳಲು ಅವಕಾಶ ನೀಡಿದ್ದಾರೆ.
ಇನ್ನು ಕರ್ತವ್ಯ ನಿಷ್ಠೆ ತೋರಿರುವ ಪೊಲೀಸ್ ಕಾನ್ಸ್ಟೇಬಲ್ಗೆ 500ರೂ ನಗದು ಪುರಸ್ಕಾರ ನೀಡಲಾಗಿದೆ. ಸುಲ್ತಾನ್ಪೂರ್ದ ಶಹಗಂಜ್ ಚೌಕ್ನಲ್ಲಿ ನಡೆದಿದೆ.
ಸೋಮವಾರ ರಾತ್ರಿ ಬಿಜೆಪಿ ಪಕ್ಷದ ಶಾಸಕರೊಬ್ಬರು ಲಾಕ್ಡೌನ್ ಬ್ರೇಕ್ ಮಾಡಿ ಔಷಧ ತೆಗೆದುಕೊಂಡು ಬರಲು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ, ಅವರ ಬಳಿ ಪಾಸ್ ಹಾಗೂ ಡಾಕ್ಟರ್ ಬರೆದುಕೊಟ್ಟಿದ್ದ ಔಷಧ ಚೀಟಿ ಸಹ ಇರಲಿಲ್ಲ. ಹೀಗಾಗಿ ನಾನು ತಡೆದು ನಿಲ್ಲಿಸಿದ್ದೆ ಎಂದು ಕಾನ್ಸ್ಟೇಬಲ್ ತಿಳಿಸಿದ್ದಾರೆ.