ನವದೆಹಲಿ: ಮುಂಬೈ ಹೈವೇ ಬಳಿ ಇಂಜಿನಿಯರ್ ಮೇಲೆ ಕೆಸರು ಸುರಿದು, ಕಂಬಕ್ಕೆ ಕಟ್ಟಿಹಾಕಿದ್ದ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದರು.
ಶಾಸಕ ನಿತೇಶ್ ಹಾಗೂ ಅವರ ಸಹಚರರ ಈ ಕೃತ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿತ್ತು. ಇದು ರಾಜಕೀಯ ಬಣ್ಣ ಪಡೆದ ಕಾರಣ ಪೊಲೀಸರು ನಿತೇಶ್ ಹಾಗೂ ಮತ್ತಿಬ್ಬರುನ್ನು ಬಂಧಿಸಿ, ವಿಚಾರಣೆ ನಡೆಸಿದರು.
-
#WATCH Nitesh Rane at Kankavali police station earlier today after being arrested for throwing mud on an engineer: Whatever you want to do, do it tomorrow. If you arrest me today, they will win. And people of Kankavali will keep dying like this. #Maharashtra pic.twitter.com/nUwo9zc9Pg
— ANI (@ANI) July 4, 2019 " class="align-text-top noRightClick twitterSection" data="
">#WATCH Nitesh Rane at Kankavali police station earlier today after being arrested for throwing mud on an engineer: Whatever you want to do, do it tomorrow. If you arrest me today, they will win. And people of Kankavali will keep dying like this. #Maharashtra pic.twitter.com/nUwo9zc9Pg
— ANI (@ANI) July 4, 2019#WATCH Nitesh Rane at Kankavali police station earlier today after being arrested for throwing mud on an engineer: Whatever you want to do, do it tomorrow. If you arrest me today, they will win. And people of Kankavali will keep dying like this. #Maharashtra pic.twitter.com/nUwo9zc9Pg
— ANI (@ANI) July 4, 2019
ಪೊಲೀಸ್ ವಿಚಾರಣೆ ವೇಳೆಯೂ ನಿತೇಶ್ ಗರಂ ಆದ ವಿಡಿಯೋ ಹರಿದಾಡುತ್ತಿದೆ. ನೀವು ಏನೇ ಮಾಡಬೇಕೆಂದರೂ ನಾಳೆ ಮಾಡಿ. ಇಂದು ನೀವು ನನ್ನನ್ನು ಬಂಧಿಸಿದರೆ ಅವರೇ ಗೆದ್ದಂತೆ. ಇದರಿಂದ ಕಂಕಾವಲಿಯ ಜನ ಪ್ರತಿದಿನ ಸಾಯುವಂತಾಗುತ್ತೆ ಎಂದು ಏರುಧ್ವನಿಯಲ್ಲಿ ಮಾತನಾಡಿದ ದೃಶ್ಯಗಳು ಸೆರೆಯಾಗಿವೆ.
ನಿನ್ನೆ ಮುಂಬೈ-ಗೋವಾ ಹೈವೇಯ ಕಂಕಾವಲಿಯ ಬಳಿ ರಸ್ತೆ ಗುಂಡಿಗಳ ಪರಿಶೀಲನೆಗೆ ಬಂದಿದ್ದ ಇಂಜಿನಿಯರ್ ಶೆಡೇಕರ್ ಮೇಲೆ ನಿತೇಶ್ ಹಾಗೂ ಸಹಚರರು ಕೆಸರು ಸುರಿದಿದ್ದಲ್ಲದೆ, ಅವರನ್ನು ಕಂಬಕ್ಕೆ ಕಟ್ಟಿ ಹಾಕಿದ್ದರು. ಕಳಪೆ ಕಾಮಗಾರಿಯಿಂದಾಗಿ ಇಲ್ಲಿನ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಈ ಏರಿಯಾವನ್ನು ಕೆಸರುಮಯ ಮಾಡಲು ನಿಮಗೆ ಅಧಿಕಾರ ಕೊಟ್ಟವರಾರು? ಜನರು ಅನುಭವಿಸುವ ನೋವನ್ನೂ ನೀವೂ ಅನುಭವಿಸಿ ಎಂದು ಆವಾಜ್ ಹಾಕಿದ್ದರು.
-
#WATCH: Congress MLA Nitesh Narayan Rane and his supporters throw mud on engineer Prakash Shedekar at a bridge near Mumbai-Goa highway in Kankavali, when they were inspecting the potholes-ridden highway. They later tied him to the bridge over the river. pic.twitter.com/B1XJZ6Yu6z
— ANI (@ANI) July 4, 2019 " class="align-text-top noRightClick twitterSection" data="
">#WATCH: Congress MLA Nitesh Narayan Rane and his supporters throw mud on engineer Prakash Shedekar at a bridge near Mumbai-Goa highway in Kankavali, when they were inspecting the potholes-ridden highway. They later tied him to the bridge over the river. pic.twitter.com/B1XJZ6Yu6z
— ANI (@ANI) July 4, 2019#WATCH: Congress MLA Nitesh Narayan Rane and his supporters throw mud on engineer Prakash Shedekar at a bridge near Mumbai-Goa highway in Kankavali, when they were inspecting the potholes-ridden highway. They later tied him to the bridge over the river. pic.twitter.com/B1XJZ6Yu6z
— ANI (@ANI) July 4, 2019
ಕೈಯಲ್ಲಿ ಕೋಲು ಹಿಡಿದು ನಾನು ಇಲ್ಲಿನ ಹೈವೇಯನ್ನು ರಿಪೇರಿ ಮಾಡಿಸುತ್ತೇನೆ. ಬೆಳಗ್ಗೆ 7 ಗಂಟೆಗೇ ಇಲ್ಲಿಗೆ ಬರುತ್ತೇನೆ. ಆಗ ನೋಡಿ ವ್ಯವಸ್ಥೆ ಹೇಗಿರುತ್ತದೆ. ಅಧಿಕಾರಿಗಳ ಸೊಕ್ಕಿಗೆ ನಮ್ಮಲ್ಲಿ ಔಷಧವಿದೆ ಎಂದು ಹೇಳಿಕೆ ನೀಡಿದ್ದರು.
ನಿತೇಶ್ ಮಾಜಿ ಸಿಎಂ ನಾರಾಯಣ್ ರಾಣೆ ಅವರ ಪುತ್ರ. ಘಟನೆ ಬಗ್ಗೆ ನಾರಾಯಣ ರಾಣೆ, ಮಗನ ಬದಲು ಕ್ಷಮೆಯಾಚಿಸಿದ್ದಾರೆ. ಈ ಮೊದಲು, 2017ರಲ್ಲಿಯೂ ಸಭೆಯೊಂದರಲ್ಲಿ ಹಿರಿಯ ಅಧಿಕಾರಿ ಮೇಳೆ ಮೀನು ಎಸೆದು ಗಲಾಟೆ ಮಾಡಿದ್ದರು.