ETV Bharat / bharat

ಕಾಂಗ್ರೆಸ್​ನ ಇಬ್ಬರು ಹಿರಿಯ ನಾಯಕರ ನಿಧನ ಹಿನ್ನೆಲೆ: ನ.27ರಂದು ಸಿಡಬ್ಲ್ಯೂಸಿಯಿಂದ ಸಂತಾಪ ಸಭೆ

ಇತ್ತೀಚಿಗೆ ಕಾಂಗ್ರೆಸ್​ನ ಇಬ್ಬರು ಪ್ರಮುಖ ಗಣ್ಯರು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿಯು ನವೆಂಬರ್​ 27ರಂದು ಸಂತಾಪ ಸೂಚಕ ಸಭೆ ನಡೆಸಲು ತೀರ್ಮಾನಿಸಿದೆ.

ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ
ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ
author img

By

Published : Nov 26, 2020, 6:50 PM IST

ನವದೆಹಲಿ: ಅಸ್ಸೋಂನ ಮಾಜಿ ಮುಖ್ಯಮಂತ್ರಿ ದಿ.ತರುಣ್ ಗೊಗೊಯ್ ಮತ್ತು ಸಂಸದ ದಿ.ಅಹ್ಮದ್ ಪಟೇಲ್ ಇತ್ತೀಚಿಗೆ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಗಣ್ಯರಿಗೆ ಸಂತಾಪ ಸೂಚಕ ಸಭೆಯನ್ನು ನಡೆಸಲು ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ನ. 27ರಂದು ನಿರ್ಧರಿಸಿದೆ.

ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಲಿದ್ದು, ಇದಕ್ಕಾಗಿ ಎಲ್ಲಾ ಸಿಡಬ್ಲ್ಯೂಸಿ ಸದಸ್ಯರು, ಕಾಯಂ ಆಹ್ವಾನಿತರು ಮತ್ತು ವಿಶೇಷ ಆಹ್ವಾನಿತರು ಹಾಜರಾಗುವಂತೆ ಕೋರಲಾಗಿದೆ.

ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಳುಹಿಸಿದ ಅಧಿಕೃತ ನೋಟಿಸ್‌ನಲ್ಲಿ, “ಅಹ್ಮದ್ ಪಟೇಲ್​ ಮತ್ತು ತರುಣ್ ಗೊಗೊಯ್ ಅವರ ನಿಧನದಿಂದ ದುಃಖವಾಗಿದೆ, ಇನ್ನು ಗಣ್ಯರಿಗೆ ಸಂತಾಪ ಸೂಚಕ ಸಭೆಯನ್ನು ನವೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಿದ್ದೇವೆ" ಎಂದಿದ್ದಾರೆ.

ನವೆಂಬರ್​ 22ರಂದು ಅಸ್ಸೋಂನ ಮಾಜಿ ಮುಖ್ಯಮಂತ್ರಿ ದಿ.ತರುಣ್ ಗೊಗೊಯ್ ಅವರು ಬಹು ಅಂಗಾಗ ವೈಫಲ್ಯದಿಂದ ಸಾವನ್ನಪ್ಪಿದ್ದರು. ಇನ್ನು ಅಹ್ಮದ್ ಪಟೇಲ್ ಅವರು ಕೊರೊನಾಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.