ETV Bharat / bharat

ಕರ್ನಾಟಕ ಕಾಂಗ್ರೆಸ್​​ ಉಸ್ತುವಾರಿಯಾಗಿ ಸುರ್ಜೇವಾಲ​... ಹೊಸಬರಿಗೆ ಮಣೆ ಹಾಕಿದ ಹೈಕಮಾಂಡ್​!

ಕಾಂಗ್ರೆಸ್​ ಪಕ್ಷದಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಸಿಡಬ್ಲೂಸಿ ಹಾಗೂ ಕೇಂದ್ರ ಚುನಾವಣಾ ಪ್ರಾಧಿಕಾರ ಪುನಾರಚನೆ ಮಾಡಲಾಗಿದೆ.

Congress re-constitutes CWC
Congress re-constitutes CWC
author img

By

Published : Sep 11, 2020, 9:41 PM IST

Updated : Sep 12, 2020, 8:46 AM IST

ನವದೆಹಲಿ: ಕಾಂಗ್ರೆಸ್​​ ಪಕ್ಷದ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂಬ ಗಂಭೀರ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಕಾರ್ಯಕಾರಿ ಸಮಿತಿ(ಸಿಡಬ್ಲೂಸಿ) ಮತ್ತು ಕೇಂದ್ರ ಚುನಾವಣಾ ಪ್ರಾಧಿಕಾರ ಪುನಾರಚನೆ ಮಾಡಿ ಕಾಂಗ್ರೆಸ್​​ ಮಹತ್ವದ ಆದೇಶ ಹೊರಹಾಕಿದೆ.

ಅಖಿತ ಭಾರತ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ರಾಜ್ಯಗಳ ಉಸ್ತುವಾರಿಗಳನ್ನ ಹೊಸದಾಗಿ ನೇಮಕ ಮಾಡಿರುವ ಕಾಂಗ್ರೆಸ್​​ ಕೆಲ ಹಿರಿಯ ಅಧಿಕಾರಿಗಳಿಗೆ ಕೊಕ್​ ನೀಡಿದೆ. ಪ್ರಮುಖವಾಗಿ ಗುಲಾಂ ನಬಿ ಆಜಾದ್​, ಅಂಬಿಕಾ ಸೋನಿ, ಮೋತಿ ಲಾಲ್​ ವೋಹ್ರಾ, ಮಲ್ಲಿಕಾರ್ಜುನ್​ ಖರ್ಗೆ ಅವರನ್ನ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಿಂದ ಕೈಬಿಡಲಾಗಿದೆ.

ರಣದೀಪ್​ ಸಿಂಗ್​ ಸುರ್ಜೆವಾಲ​​ಗೆ ಕರ್ನಾಟಕದ ಉಸ್ತುವಾರಿ ನೀಡಲಾಗಿದ್ದು, ಈ ಮೂಲಕ ಕೆ.ಸಿ ವೇಣುಗೋಪಾಲ್​ ರಾಜ್ಯದ ಉಸ್ತುವಾರಿ ಸ್ಥಾನ ಬಿಟ್ಟುಕೊಡಲಿದ್ದಾರೆ. ರಾಜ್ಯದ ದಿನೇಶ್​ ಗುಂಡೂರಾವ್​​ ಅವರಿಗೆ ತಮಿಳುನಾಡು, ಪಾಂಡಿಚೇರಿ ಹಾಗೂ ಗೋವಾ ಉಸ್ತುವಾರಿ ನೀಡಲಾಗಿದೆ. ಹೆಚ್​​.ಕೆ ಪಾಟೀಲ್​​ ಅವರಿಗೆ ಮಹಾರಾಷ್ಟ್ರ ಉಸ್ತುವಾರಿ, ಪ್ರಿಯಾಂಕಾ ಗಾಂಧಿ ವಾದ್ರಾಗೆ ಉತ್ತರಪ್ರದೇಶ ಉಸ್ತುವಾರಿ, ಅಜಯ್​ ಮಾಕೇನ್​​ ರಾಜಸ್ತಾನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹರೀಶ್​ ರಾವತ್​​ ಪಂಜಾಬ್, ಓಮನ್​ ಚಂಡಿ ಆಂಧ್ರಪ್ರದೇಶ, ಜೀತೇಂದ್ರ ಸಿಂಗ್ ತೋಮರ್​​ ಅಸ್ಸೋಂ, ಮುಕುಲ್​ ವಾಸ್ನಿಕ್​ ಮಧ್ಯಪ್ರದೇಶದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮಾಜಿ ಸಚಿವ ಕೃಷ್ಣ ಬೈರೇಗೌಡ ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ರಾಹುಲ್​ ಗಾಂಧಿ, ಎ.ಕೆ. ಆ್ಯಂಟನಿ, ಅಹ್ಮದ್​ ಪಟೇಲ್​, ಅಂಬಿಕಾ ಸೋನಿ, ಗುಲಾಂ ನಬಿ ಆಜಾದ್​, ಆನಂದ್​ ಶರ್ಮಾ, ಪ್ರಿಯಾಂಕಾ ಗಾಂಧಿ, ತುರುಣ್​ ಗೋಗಯ್​ ಸೇರಿ 22 ಮುಖಂಡರಿಗೆ ಜವಾಬ್ದಾರಿ ನೀಡಲಾಗಿದೆ.

Last Updated : Sep 12, 2020, 8:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.