ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪ್ರಧಾನಿ ಮೋದಿ ಅವರನ್ನ ಮಣಿಸಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಭರ್ಜರಿ ಪ್ಲಾನ್ ರೂಪಿಸುತ್ತಿದೆ. ಇದಕ್ಕಾಗಿ ಪಕ್ಷದ ಸಾರ್ವಜನಿಕ ಪ್ರಚಾರ ಸಮಿತಿಯನ್ನ ರಚನೆ ಮಾಡಿದೆ.
ಕಾಂಗ್ರೆಸ್ ಪಬ್ಲಿಸಿಟಿ ಕಮಿಟಿ ಸಭೆ ಮಾಜಿ ಹಣಕಾಸು ಸಚಿವ ಪಿ ಚಿದಬರಂ ಅವರ ನಿವಾಸದಲ್ಲಿ ನಡೆಯುತ್ತಿದೆ.ಏಪ್ರಿಲ್ 11ರಿಂದ ಆರಂಭವಾಗುವ ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯತಂತ್ರಗಳು ಹಾಗೂ ಪ್ರಚಾರ ಹೇಗಿರಬೇಕು. ಯಾವ ರೀತಿ ಪಕ್ಷದ ಅಜೆಂಡಾಗಳನ್ನ ಜನರಿಗೆ ತಲುಪಿಸಬೇಕು ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ.
Delhi: Congress publicity committee meeting underway at residence of P. Chidambaram. Leaders including Divya Spandana,Pawan Khera and Sam Pitroda present pic.twitter.com/6OZTO1Svo6
— ANI (@ANI) March 26, 2019 " class="align-text-top noRightClick twitterSection" data="
">Delhi: Congress publicity committee meeting underway at residence of P. Chidambaram. Leaders including Divya Spandana,Pawan Khera and Sam Pitroda present pic.twitter.com/6OZTO1Svo6
— ANI (@ANI) March 26, 2019Delhi: Congress publicity committee meeting underway at residence of P. Chidambaram. Leaders including Divya Spandana,Pawan Khera and Sam Pitroda present pic.twitter.com/6OZTO1Svo6
— ANI (@ANI) March 26, 2019
ಈ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ರಮ್ಯಾ( ದಿವ್ಯ ಸ್ಪಂದನಾ) ಪವನ್ ಖೇರ್ ಹಾಗೂ ಸ್ಯಾಮ್ ಪಿತ್ರೋಡಾ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.
ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಮುಂಚೂಣಿಯಲ್ಲಿದ್ದು, ಕೇಸರಿ ಬ್ರಿಗೆಡ್ನ ಪ್ರಚಾರಕ್ಕೆ ಪಕ್ಕಾ ಟಾಂಗ್ ಕೊಡಲು ಕಾಂಗ್ರೆಸ್ ಕೂಡಾ ಸನ್ನದ್ಧವಾಗಿದೆ. ಈಗಾಗಲೇ ಅದು ಸಹ ಭಾರಿ ಪ್ರತಿ ಏಟುಗಳನ್ನ ಫೇಸ್ಬುಕ್, ಟ್ವಿಟರ್ ಗಳ ಮೂಲಕ ಕೊಡುತ್ತಿದೆ. ಅವರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸ್ಟ್ರಾಂಗ್ ಆಗ್ತಿದ್ದಾರೆ.