ETV Bharat / bharat

ಕೊರೊನಾ ವಿರುದ್ಧ ಹೋರಾಡಲು 5 ಕ್ರಮಗಳನ್ನು ಸೂಚಿಸಿ ಪ್ರಧಾನಿಗೆ ಸೋನಿಯಾ ಪತ್ರ.. - ಸೋನಿಯಾ ಗಾಂಧಿ

ಕೊರೊನಾ ವಿರುದ್ಧದ ಸಮರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ.

Sonia Gandhi
ಸೋನಿಯಾ ಗಾಂಧಿ
author img

By

Published : Apr 7, 2020, 7:52 PM IST

ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಮತ್ತು ಸಿಪಿಪಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಕೊರೊನಾ ವೈರಸ್​ ವಿರುದ್ಧ ಹೋರಾಡಲು ವಿವಿಧ ಕ್ರಮಗಳನ್ನು ಸೂಚಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಸೋನಿಯಾ ಗಾಂಧಿ 5 ಮುಖ್ಯ ಅಂಶಗಳನ್ನು ನಮೂದಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..

  • Congress President and CPP Chairperson Smt. Sonia Gandhi writes to PM Modi suggesting various measures to fight the COVID-19 pandemic. pic.twitter.com/77MzCYiokl

    — Congress (@INCIndia) April 7, 2020 " class="align-text-top noRightClick twitterSection" data=" ">
  1. ಕೇಂದ್ರ ಸರ್ಕಾರವು ಪ್ರಸ್ತುತ ಮಾಧ್ಯಮ ಜಾಹೀರಾತುಗಳಿಗಾಗಿ ವರ್ಷಕ್ಕೆ ಸರಾಸರಿ 1,250 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಜಾಹೀರಾತುಗಳನ್ನು ಎರಡು ವರ್ಷಗಳವರೆಗೆ ನಿಷೇಧಿಸಿ. ಕೊರೊನಾ ವೈರಸ್​ನ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿವಾರಿಸಲು ಈ ಮೊತ್ತ ನೆರವಾಗುತ್ತದೆ.
  2. 20,000 ಕೋಟಿ ರೂ.ಗಳ ಸೆಂಟ್ರಲ್​ ವಿಸ್ಟಾ ಯೋಜನೆಯನ್ನು ಮುಂದಕ್ಕೆ ಹಾಕಿ. ಈ ಹಣವನ್ನು ಆರೋಗ್ಯ ಸೌಕರ್ಯಗಳಿಗಾಗಿ ಬಳಸಿ.
  3. ಸರ್ಕಾರದ ಖರ್ಚನ್ನು ಶೇ. 30ರಷ್ಟು ಇಳಿಸಿ. ಈ 30 ಪ್ರತಿಶತ (ಅಂದರೆ ವರ್ಷಕ್ಕೆ ಅಂದಾಜು ₹ 2.5 ಲಕ್ಷ ಕೋಟಿ) ಮೊತ್ತವನ್ನು ವಲಸೆ ಕಾರ್ಮಿಕರು, ಕಾರ್ಮಿಕರು, ರೈತರು ಮತ್ತು ಅಸಂಘಟಿತ ವಲಯದಲ್ಲಿರುವವರಿಗೆ ಆರ್ಥಿಕ ಸುರಕ್ಷತೆಯನ್ನು ಸ್ಥಾಪಿಸಲು ಹಂಚಿಕೆ ಮಾಡಬಹುದು.
  4. ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲರ ವಿದೇಶ ಪ್ರವಾಸಗಳನ್ನು ತಡೆ ಹಿಡಿಯಬೇಕು. ವಿಶೇಷ ತುರ್ತುಸ್ಥಿತಿ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ಅಗತ್ಯತೆಗಳ ಸಂದರ್ಭದಲ್ಲಿ ವಿನಾಯಿತಿಗಳನ್ನು ನೀಡಬಹುದು.
  5. ಪಿಎಂ ಕೇರ್ಸ್​ ಫಂಡ್​ನಿಂದ ಎಲ್ಲಾ ಮೊತ್ತವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಿ. ಈವರೆಗೆ ಬಳಕೆಯಾಗದ 3,800 ಕೋಟಿ ರೂ.ಗಳನ್ನು ಸದ್ಬಳಕೆ ಮಾಡಿ.

ಈ ಐದು ಅಂಶಗಳನ್ನು ವಿವರವಾಗಿ ಬರೆದು ಅದಕ್ಕೆ ಸ್ಪಂದಿಸುವಂತೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.