ನವದೆಹಲಿ: ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೂ ವಿವಾದಿತ 'ಪೌರತ್ವ ತಿದ್ದುಪಡಿ ಮಸೂದೆ'ಗೆ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರ ದೊರೆತಿದ್ದು, ಇದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಮಸೂದೆ ವಿರುದ್ಧ ನಾಳೆ ಆಯಾ ರಾಜ್ಯಗಳ ಪ್ರಧಾನ ಕಚೇರಿ ಬಳಿ ಪ್ರತಿಭಟನೆ ನಡೆಸುವಂತೆ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಘಟಕಗಳಿಗೆ ಕಾಂಗ್ರೆಸ್ ಸೂಚಿಸಿದೆ.
-
Congress party has asked all state units to hold 'Dharna Pardarshan' tomorrow in the state headquarters, against the #CitizenshipAmendmentBill2019 pic.twitter.com/INOj3rkz39
— ANI (@ANI) December 10, 2019 " class="align-text-top noRightClick twitterSection" data="
">Congress party has asked all state units to hold 'Dharna Pardarshan' tomorrow in the state headquarters, against the #CitizenshipAmendmentBill2019 pic.twitter.com/INOj3rkz39
— ANI (@ANI) December 10, 2019Congress party has asked all state units to hold 'Dharna Pardarshan' tomorrow in the state headquarters, against the #CitizenshipAmendmentBill2019 pic.twitter.com/INOj3rkz39
— ANI (@ANI) December 10, 2019
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ..
2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಧಾರ್ಮಿಕ ಕಿರುಕುಳದಿಂದ ಪಾರಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ (ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್) ನಿರಾಶ್ರಿತರನ್ನು 'ಅಕ್ರಮ ವಲಸಿಗರು' ಎಂದು ಪರಿಗಣಿಸಲಾಗುವುದಿಲ್ಲ. ಅಂಥವರು ಭಾರತದ ಪ್ರಜೆಯಾಗುವುದಕ್ಕೆ ಅರ್ಹತೆ ಪಡೆಯುತ್ತಾರೆ. ಅಲ್ಲದೇ ಅಂತಹ ನಿರಾಶ್ರಿತರಿಗೆ ಈ ಹಿಂದೆ ಇದ್ದ 11 ವರ್ಷಗಳ ಬದಲು 5 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದರೆ ಸಾಕು, ಬಳಿಕ ಭಾರತೀಯ ಪೌರತ್ವ ನೀಡಲಾಗುವುದು. ಕಾನೂನು ಪ್ರಕರಣಗಳನ್ನು ಎದುರಿಸುತ್ತಿರುವ ಈ ನಿರಾಶ್ರಿತರಿಗೆ ವಿನಾಯಿತಿ ನೀಡುವುದರ ಕುರಿತು ಮಸೂದೆ ತಿಳಿಸುತ್ತದೆ.