ಪಣಜಿ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪಣಜಿಯ ಹೋಟೆಲ್ನಲ್ಲಿ ತಡರಾತ್ರಿ ಪ್ರತಿಭಟನೆಗೆ ಇಳಿದಿದ್ದ ಗೋವಾ ಕಾಂಗ್ರೆಸ್ ಉಪಾಧ್ಯಕ್ಷ ಸೇರಿದಂತೆ ಕೆಲ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಕೃಷಿ ಮಸೂದೆ ಬಗ್ಗೆ ಸಭೆ ನಡೆಸಲು ಕೇಂದ್ರ ಸಚಿವ ಜಾವ್ಡೇಕರ್ ತಡರಾತ್ರಿ ಪಣಜಿಗೆ ಆಗಮಿಸಿ, ಇಲ್ಲಿನ ಹೋಟೆಲ್ನಲ್ಲಿ ತಂಗಿದ್ದಾರೆ. ಮಹದಾಯಿ ನದಿ ವಿವಾದದ ಕುರಿತು ಕೇಂದ್ರ ಸಚಿವರ ಜೊತೆ ಮಾತನಾಡಲು ಕಾಂಗ್ರೆಸ್ ನಾಯಕರು ಹೋಟೆಲ್ಗೆ ಆಗಮಿಸಿದರು. ಆದ್ರೆ ಕೇಂದ್ರ ಸಚಿವರ ಭೇಟಿಗೆ ಹೋಟೆಲ್ ಸಿಬ್ಬಂದಿ ಅವಕಾಶ ನೀಡದ ಹಿನ್ನೆಲೆ ಅಲ್ಲೇ ಪ್ರತಿಭಟನೆಗೆ ಇಳಿದಿದ್ದರು. ಬಳಿಕ ಪೊಲೀಸರು, ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದಾರೆ.
ಪ್ರತಿಭಟನೆಯಲ್ಲಿ ಗೋವಾ ಯುವ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವರದ್ ಮರ್ಡೋಲ್ಕರ್, ಗೋವಾ ಕಾಂಗ್ರೆಸ್ ಉಪಾಧ್ಯಕ್ಷ ಸಂಕಲ್ಪ ಅಮೋಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.