ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಬಿಲ್ ಪಾಸ್ ಆಗಿದೆ. ಇದೀಗ ಕಾಂಗ್ರೆಸ್ನ ಹಲವು ಮುಖಂಡರು ಕೇಂದ್ರ ಸರ್ಕಾರದ ನಡೆಗೆ ಜೈಕಾರ ಹಾಕುತ್ತಿದ್ದಾರೆ.
ಉತ್ತರಪ್ರದೇಶದ ರಾಯಬರೇಲಿ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್, ಬಿಹಾರದ ಕಾಂಗ್ರೆಸ್ ಮುಖಂಡೆ ರಂಜಿತಾ ರಂಜನ್ ಕೇಂದ್ರದ ನಡೆಗೆ ಸ್ವಾಗತ ಕೋರಿದ್ದು, ಇದರ ಮಧ್ಯೆ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಕೇಂದ್ರದ ನಿರ್ಧಾರಕ್ಕೆ ಜೈಕಾರ ಹಾಕಿದ್ದಾರೆ.
-
I support the move on #JammuAndKashmir & #Ladakh and its full integration into union of India.
— Jyotiraditya M. Scindia (@JM_Scindia) August 6, 2019 " class="align-text-top noRightClick twitterSection" data="
Would have been better if constitutional process had been followed. No questions could have been raised then. Nevertheless, this is in our country’s interest and I support this.
">I support the move on #JammuAndKashmir & #Ladakh and its full integration into union of India.
— Jyotiraditya M. Scindia (@JM_Scindia) August 6, 2019
Would have been better if constitutional process had been followed. No questions could have been raised then. Nevertheless, this is in our country’s interest and I support this.I support the move on #JammuAndKashmir & #Ladakh and its full integration into union of India.
— Jyotiraditya M. Scindia (@JM_Scindia) August 6, 2019
Would have been better if constitutional process had been followed. No questions could have been raised then. Nevertheless, this is in our country’s interest and I support this.
ಸಿಂಧಿಯಾ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಆರ್ಟಿಕಲ್ 370 ವಿಧಿ ರದ್ದತಿ ಬಗ್ಗೆ ಬರೆದುಕೊಂಡಿದ್ದು, ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಬಗ್ಗೆ ಕೇಂದ್ರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ಸಪೋರ್ಟ್ ಇದೆ ಎಂದಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಒಕ್ಕೂಟ ಭಾರತವನ್ನ ಸಂಪೂರ್ಣವಾಗಿ ಒಳಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ಅಖಂಡ ಭಾರತದ ಅಭಿವೃದ್ಧಿಗಾಗಿ ಕೇಂದ್ರ ತೆಗೆದುಕೊಂಡಿರುವ ನಿರ್ಧಾರಕ್ಕೆ ನನ್ನ ಬೆಂಬಲವಿದ್ದು, ಸಾಂವಿಧಾನಿಕ ಪ್ರಕ್ರಿಯೆ ಅನುಸರಿಸಿದ್ದರೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.
ನಿನ್ನೆ ರಾಜ್ಯಸಭೆಯಲ್ಲಿ ಬಿಲ್ ಅಂಗೀಕಾರಗೊಂಡಿತ್ತು. ಇಂದು ಲೋಕಸಭೆಯಲ್ಲೂ ಜಮ್ಮು-ಕಾಶ್ಮೀರ ಪುನಾರಚನೆ ಬಿಲ್ ಅಂಗೀಕಾರವಾಗಿರುವುದರಿಂದ ಜಮ್ಮು-ಕಾಶ್ಮೀರ್ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಲಡಾಕ್ ಕೇಂದ್ರಾಡಳಿತ ಪ್ರದೇಶ ಮಾತ್ರವಾಗಿರಲಿದೆ.