ETV Bharat / bharat

ಸದನದಲ್ಲಿ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಕೈ ನಾಯಕ ಚೌಧರಿ ಗುಡುಗು.. - ನವದೆಹಲಿ

ಪತ್ರಕರ್ತ ಬಾಲಕೋಟ್ ಮುಷ್ಕರದ ಬಗ್ಗೆ ಹೇಗೆ ಮಾಹಿತಿ ಪಡೆದರು ಎಂದು ಅರ್ನಾಬ್​ ವಿರುದ್ಧ ಕಿಡಿಕಾರಿದರು. ಕೆಲವೊಮ್ಮೆ ಇಂತಹ ಮಿಲಿಟರಿ ರಹಸ್ಯಗಳು ಕೂಡ ಉನ್ನತ ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಆದರೆ, ಬಾಲಾಕೋಟ್ ದಾಳಿ ನಡೆಯುತ್ತೆ ಎಂದು ಅರ್ನಾಬ್ ಗೋಸ್ವಾಮಿಗೆ ಮೊದಲೇ ತಿಳಿದಿತ್ತು..

Congress leader Adhir Ranjan Chowdhury corners govt in Lok Sabha
ಲೋಕ ಸಭೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯ ವಿರುದ್ಧ ಗುಡುಗಿದ ಕೈ ನಾಯಕ ಆದಿರ್ ರಂಜನ್ ಚೌಧರಿ
author img

By

Published : Feb 8, 2021, 10:05 PM IST

ನವದೆಹಲಿ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೃಷಿ ಕಾನೂನುಗಳು ಮತ್ತು ಜನವರಿ 26ರಂದು ನಡೆದ ಘಟನೆ ಸಂಬಂಧ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಪಕ್ಷ ಪ್ರತಿ ಚುನಾವಣೆಗೂ ಮುನ್ನ ಲಾಭ ಪಡೆಯಲು ಶ್ರೇಷ್ಠ ವ್ಯಕ್ತಿಗಳನ್ನು ಹುಡುಕಬೇಕಾಗಿದೆ ಎಂದ ಅವರು, ಬಂಗಾಳ ಚುನಾವಣೆಗೆ ಮುಂಚಿತವಾಗಿ ಬೋಸ್‌ನ ಹೆಸರನ್ನು ತೆಗೆದುಕೊಂಡಿದ್ದಕ್ಕಾಗಿ ಬಿಜೆಪಿಯನ್ನು ದೂಷಿಸಿ, ನೀವು ಶ್ಯಾಮಾ ಪ್ರಸಾದ್ ಮುಖರ್ಜಿ ಅವರೊಂದಿಗೆ ನೇತಾಜಿಯ ಹೆಸರಿನಲ್ಲಿರುವ ಡಾಕ್ ತೆಗೆದು ಹಾಕಿದ್ದೀರಿ. ಬೋಸ್ ಕಲ್ಪಿಸಿದ ಯೋಜನಾ ಆಯೋಗವನ್ನು ನೀವು ತ್ಯಜಿಸಿದ್ದೀರಿ ಎಂದು ಹರಿಹಾಯ್ದರು.

ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಕುಳಿತಿದ್ದಾರೆ. 200ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಮೊಳೆಗಳನ್ನು ಹಾಕಿದ್ದಿರಿ. ಪ್ರಧಾನಿ ಇಡೀ ಜಗತ್ತಿನೊಂದಿಗೆ ಮಾತನಾಡಬಹುದು. ಆದರೆ, ಅವರು ರೈತರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಯಾಕೆ? ಅಹಂಕಾರವೇ? ಎಂದು ಪ್ರಶ್ನಿಸಿದರು.

ಲಕ್ಷಾಂತರ ರೈತರು ಗಡಿಯಲ್ಲಿ ಕುಳಿತಾಗ ನಾವು ಮೌನವಾಗಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಸದನದಲ್ಲಿ ಧ್ವನಿ ಎತ್ತುತ್ತೇವೆ. ಆದರೆ, ನೀವು ರೈತರ ಬೇಡಿಕೆಗಳಿಗೆ ಕಿವುಡಾಗಿದ್ದೀರಿ ಎಂದು ಕಿಡಿಕಾರಿದರು. ದೇಶದ ಮುಸ್ಲಿಮರು ಮತ್ತು ರೈತರ ವಿರುದ್ಧ ಕೇಂದ್ರ ಸರ್ಕಾರ ಯುದ್ಧ ಘೋಷಿಸುತ್ತಿದೆ ಎಂದ ಅವರು, ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ರನ್ನು ಚೌಧರಿ ಸಮರ್ಥಿಸಿಕೊಂಡರು.

ಪ್ರತಿಭಟನೆಯ ಪರವಾಗಿ ಮಾತನಾಡುವುದರಲ್ಲಿ ತಪ್ಪೇನಿದೆ? ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಹಾಗೂ ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಸೆಲೆಬ್ರಿಟಿಗಳನ್ನು ಕೇಂದ್ರ ಸರ್ಕಾರವು ದಾರಿತಪ್ಪಿಸುತ್ತಿದೆ ಎಂದು ಹೇಳಿದರು. ಜನವರಿ 26ರಂದು ನಡೆದ ಹಿಂಸಾಚಾರವು ಸರ್ಕಾರದ ಪಿತೂರಿ. ನಿಮ್ಮ ಜನರು ರೈತರಂತೆ ಬಂದು ಹಿಂಸಾಚಾರದಲ್ಲಿ ಪಾಲ್ಗೊಂಡರು ಎಂದು ಆರೋಪಿಸಿದರು.

ಗೃಹ ಸಚಿವ ಅಮಿತ್ ಶಾ ಇದ್ದಾಗ ಇದೆಲ್ಲಾ ಹೇಗೆ ಸಂಭವಿಸಿತು? ಇದು ಸರ್ಕಾರದ ಸುಸಂಘಟಿತ ಪಿತೂರಿ. ಜನವರಿ 26ರಂದು ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು. ಆದರೂ ಅಂತಹ ಘಟನೆ ಹೇಗೆ ನಡೆಯಿತು? ಎಂದು ಪ್ರಶ್ನಿಸಿದರು. ಅರ್ನಾಬ್ ಗೋಸ್ವಾಮಿ ಮತ್ತು ಕೇಂದ್ರ ಸರ್ಕಾರದ ನಡುವಿನ ಒಪ್ಪಂದವು ಭಾರತದ ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯಾಗಿದೆ.

ಪತ್ರಕರ್ತ ಬಾಲಕೋಟ್ ಮುಷ್ಕರದ ಬಗ್ಗೆ ಹೇಗೆ ಮಾಹಿತಿ ಪಡೆದರು ಎಂದು ಅರ್ನಾಬ್​ ವಿರುದ್ಧ ಕಿಡಿಕಾರಿದರು. ಕೆಲವೊಮ್ಮೆ ಇಂತಹ ಮಿಲಿಟರಿ ರಹಸ್ಯಗಳು ಕೂಡ ಉನ್ನತ ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಆದರೆ, ಬಾಲಾಕೋಟ್ ದಾಳಿ ನಡೆಯುತ್ತೆ ಎಂದು ಅರ್ನಾಬ್ ಗೋಸ್ವಾಮಿಗೆ ಮೊದಲೇ ತಿಳಿದಿತ್ತು. ಇದರರ್ಥ ರಾಷ್ಟ್ರೀಯ ಭದ್ರತೆಯಲ್ಲಿ ಉಲ್ಲಂಘನೆ ಕಂಡು ಬಂದಿದೆ ಎಂದು ಅವರು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.