ನವದಹಲಿ: 60ನೇ ವಯಸ್ಸಿನಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಮಾಜಿ ಸಚಿವ ಮುಕುಲ್ ವಾಸ್ನಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಖಾಸಗಿ ಹೋಟೆಲ್ನಲ್ಲಿ ತಮ್ಮ ಬಹು ಕಾಲದ ಸ್ನೇಹಿತೆ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ರವೀನಾ ಖುರಾನಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಇವರ ವಿವಾಹ ಸಮಾರಂಭದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕರ್ನಾಟಕದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-
Wishing Mukul Wasnik Ji and Raveena Khurana Ji heartiest congratulations on embarking on this new journey together as a couple. May the coming years prove to be the happiest time of your life. Stay blessed. pic.twitter.com/XPVMx0CjXf
— Ashok Gehlot (@ashokgehlot51) March 8, 2020 " class="align-text-top noRightClick twitterSection" data="
">Wishing Mukul Wasnik Ji and Raveena Khurana Ji heartiest congratulations on embarking on this new journey together as a couple. May the coming years prove to be the happiest time of your life. Stay blessed. pic.twitter.com/XPVMx0CjXf
— Ashok Gehlot (@ashokgehlot51) March 8, 2020Wishing Mukul Wasnik Ji and Raveena Khurana Ji heartiest congratulations on embarking on this new journey together as a couple. May the coming years prove to be the happiest time of your life. Stay blessed. pic.twitter.com/XPVMx0CjXf
— Ashok Gehlot (@ashokgehlot51) March 8, 2020
ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಫೋಟೋ ಶೇರ್ ಮಾಡಿರುವ ರಾಜಸ್ಥಾನ ಮಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮುಕುಲ್ಜೀ ಹಾಗೂ ರವೀನಾಜೀ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಿಮ್ಮ ಮುಂದಿನ ಜೀವನ ಸಂತೋಷದಿಂದ ಕೂಡಿರಲಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಮನೀಶ್ ತಿವಾರಿ ಕೂಡ ಟ್ವೀಟ್ ಮಾಡಿದ್ದು, ನೀವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ತುಂಬಾ ಸಂತಸದ ಸಂಗತಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದ್ದಾರೆ. ಮದುವೆಯಾಗದೇ ಹಾಗೇ ಉಳಿದುಕೊಂಡಿದ್ದ ಇವರು ವಾಸ್ನಿಕ್ ಕಾಂಗ್ರೆಸ್ ದಲಿತ ಮುಖಂಡರಾಗಿದ್ದು, ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಇವರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೂ ಕೇಳಿ ಬಂದಿತ್ತು.