ETV Bharat / bharat

3 ಭಾರತೀಯ ಫೋಟೋ ಜರ್ನಲಿಸ್ಟ್​ಗಳಿಗೆ ಪುಲಿಟ್ಜರ್​ ಪ್ರಶಸ್ತಿ : ಅಭಿನಂದನೆಗಳ ಸುರಿಮಳೆ - ಫೋಟೋ ಜರ್ನಲಿಸ್ಟ್​ಗೆ ಪುಲಿಟ್ಜರ್​ ಪ್ರಶಸ್ತಿ

ಫೀಚರ್ ಫೋಟೋಗ್ರಫಿಯಲ್ಲಿ 2020ರ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೊ ಜರ್ನಲಿಸ್ಟ್‌ಗಳಿಗೆ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಮುಫ್ತಿ ಸೇರಿದಂತೆ ಅನೇಕರು ಟ್ವಿಟರ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Pulitzer Prize
ಪುಲಿಟ್ಜರ್​ ಪ್ರಶಸ್ತಿ
author img

By

Published : May 5, 2020, 3:36 PM IST

Updated : May 5, 2020, 8:46 PM IST

ಶ್ರೀನಗರ : 2020ರ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೊ ಜರ್ನಲಿಸ್ಟ್‌ಗಳಿಗೆ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ.

ಅಸೋಸಿಯೇಟೆಡ್ ಪ್ರೆಸ್ (ಎಪಿ) ಯೊಂದಿಗೆ ಕೆಲಸ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮೂವರು ಫೋಟೋ ಜರ್ನಲಿಸ್ಟ್‌ಗಳಾದ ಮುಖ್ತಾರ್ ಖಾನ್, ಯಾಸಿನ್ ದಾರ್ ಮತ್ತು ಚನ್ನಿ ಆನಂದ್ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  • It’s been a difficult year for journalists in Kashmir & that’s saying something considering the last 30 years haven’t exactly been easy. Congratulations to @daryasin, @muukhtark_khan & @channiap on this prestigious award. More power to your cameras. https://t.co/A7SH5hUEGZ

    — Omar Abdullah (@OmarAbdullah) May 5, 2020 " class="align-text-top noRightClick twitterSection" data=" ">

ಕಳೆದ ವರ್ಷ ಆಗಸ್ಟ್‌ನಲ್ಲಿ ಆರ್ಟಿಕಲ್ 370 ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು, ಆ ಸಮಯದಲ್ಲಿ ಅವರು ತೆಗೆದಿದ್ದ ಛಾಯಾಚಿತ್ರಗಳು ಅವರಿಗೆ ಪುಲಿಟ್ಜರ್ ಪ್ರಶಸ್ತಿ ತಂದು ಕೊಡಿಸುವಲ್ಲಿ ಯಶಸ್ವಿಯಾಗಿವೆ.

ಆ ಮೂಲಕ ಈ ಮೂವರು ಭಾರತೀಯ ಫೋಟೋ ಜರ್ನಲಿಸ್ಟ್​ಗಳು ಪತ್ರಿಕೋದ್ಯಮದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

"ಕಾಶ್ಮೀರದ ಪತ್ರಕರ್ತರಿಗೆ ಈ ವರ್ಷ ಅತ್ಯಂತ ಕಠಿಣವಾದ ವರ್ಷವಾಗಿದೆ ಮತ್ತು ಅದರಲ್ಲೂ ಕಳೆದ 30 ವರ್ಷಗಳನ್ನು ಪರಿಗಣಿಸಿ ನಿಖರವಾಗಿ ಏನನ್ನಾದರೂ ಹೇಳುವುದು ಅಷ್ಟು ಸುಲಭವಲ್ಲ. ಅದೇನೇ ಇರಲಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಮುಖ್ತಾರ್ ಖಾನ್, ಯಾಸಿನ್ ದಾರ್ ಮತ್ತು ಚನ್ನಿ ಆನಂದ್ ಅವರಿಗೆ ನನ್ನ ಅಭಿನಂದನೆಗಳು. ಈ ಪ್ರತಿಷ್ಠಿತ ಪ್ರಶಸ್ತಿ ನಿಮ್ಮ ಕ್ಯಾಮೆರಾಗಳಿಗೆ ಹೆಚ್ಚಿನ ಶಕ್ತಿ ನೀಡಲಿ," ಎಂದು ನ್ಯಾಷನಲ್​ ಕಾನ್ಫರೆನ್ಸ್​ ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

  • Congratulations @daryasin @muukhtark_khan for your exemplary photography capturing the humanitarian crisis in Kashmir post illegal abrogation of Article 370. Bizarre that our journalists win accolades abroad but are punished under draconian laws on home turf https://t.co/FEliDToHkN

    — Mehbooba Mufti (@MehboobaMufti) May 5, 2020 " class="align-text-top noRightClick twitterSection" data=" ">

"ಕಾಶ್ಮೀರದಲ್ಲಿ ಮಾನವೀಯ ಬಿಕ್ಕಟ್ಟನ್ನು ಸೆರೆಹಿಡಿದ ನಿಮ್ಮ ಛಾಯಾಗ್ರಹಣಕ್ಕಾಗಿ ಅಭಿನಂದನೆಗಳು 370ನೇ ವಿಧಿಯನ್ನು ಅಕ್ರಮವಾಗಿ ರದ್ದುಪಡಿಸಿದವು. ನಮ್ಮ ಪತ್ರಕರ್ತರು ವಿದೇಶದಲ್ಲಿ ಮೆಚ್ಚುಗೆಯನ್ನು ಗಳಿಸುತ್ತಾರೆ ಆದರೆ ನಾವಿಲ್ಲಿ ಕಠಿಣ ಕಾನೂನುಗಳ ಅಡಿಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದೇವೆ" ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಟಿಜಾ ಮುಫ್ತಿ ತಮ್ಮ ತಾಯಿಯ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

Last Updated : May 5, 2020, 8:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.