ಗಾಂಧಿನಗರ (ಗುಜರಾತ್): ತಮ್ಮ ಶಾಸಕರು ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ತನ್ನ 15 ಶಾಸಕರನ್ನು ಆನಂದ್ ಜಿಲ್ಲೆಯ ರೆಸಾರ್ಟ್ವೊಂದಕ್ಕೆ ರವಾನಿಸಿದೆ. ಕಾಂಗ್ರೆಸ್ ನಾಯಕ ಭರತ್ ಸಿಂಗ್ ಸೋಲಂಕಿಗ ಅವರಿಗೆ ಈ ಎಲ್ಲಾ ಶಾಸಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆ.
ರಾಜ್ಯಸಭಾ ಚುನಾವಣೆ ಜೂನ್ 19ರಂದು ನಡೆಯಲಿದ್ದು, ಮೂವರು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಇದರಿಂದ ಭೀತಿಗೊಳಗಾದ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವ ಸಲುವಾಗಿ ಆನಂದ್ ಜಿಲ್ಲೆಯಲ್ಲಿರುವ ಏರೀಸ್ ರಿವರ್ಸೈಡ್ ರೆಸಾರ್ಟ್ಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ.
ಹಿರಿಯ ಕಾಂಗ್ರೆಸ್ ನಾಯಕ ಸೋಲಂಕಿ ರೆಸಾರ್ಟ್ನಲ್ಲಿರುವ ಶಾಸಕರ ಜೊತೆ ಮಾತುಕತೆ ನಡೆಸುತ್ತಿದ್ದು, ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುತ್ತಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಕ್ಷಯ್ ಪಟೇಲ್, ಜಿತು ಚೌಧರಿ ಮತ್ತು ಬ್ರಿಜೇಶ್ ಮೆರ್ಜಾ ರಾಜಸ್ಥಾನದ ಅಬು ರೋಡ್ ನಗರದಲ್ಲಿರುವ ವೈಲ್ಡ್ ವಿಂಡ್ಸ್ ರೆಸಾರ್ಟ್ ತಲುಪಿದ್ದು, ಮುಂದಿನ ಕಾರ್ಯ ತಂತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.