ETV Bharat / bharat

ನಾಮಪತ್ರದಲ್ಲಿ ಕ್ರಿಮಿನಲ್ ಮೊಕದ್ದಮೆ ಮರೆಮಾಚಿದ ಆರೋಪ.. ಸಿಂಧ್ಯಾ ವಿರುದ್ಧ ಅರ್ಜಿ ಸಲ್ಲಿಕೆ

ಜ್ಯೋತಿರಾದಿತ್ಯ ಸಿಂಧ್ಯಾ ರಾಜ್ಯಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ನಾಮಪತ್ರದಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಯನ್ನು ಮರೆಮಾಚಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

author img

By

Published : Jun 28, 2020, 4:41 PM IST

petition against Scindia's RS election
ಸಿಂಧಿಯಾ ವಿರುದ್ಧ ಅರ್ಜಿ ಸಲ್ಲಿಕೆ

ಗ್ವಾಲಿಯರ್ : ರಾಜ್ಯಸಭಾ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆ ಮರೆಮಾಚಿದ್ದಾರೆ ಎಂದು ಆರೋಪಿಸಿ ದಿಗ್ವಿಜಯ ಸಿಂಗ್ ಆಪ್ತ ಕಾಂಗ್ರೆಸ್ ಮುಖಂಡರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಗೋಪಿಲಾಲ್ ಭಾರ್ತಿಯಾ ಎಂಬುವರು ತಮ್ಮ ವಕೀಲ ಕುಬರ್ ಬೌದ್ಧ್ ಮೂಲಕ ಗ್ವಾಲಿಯರ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜನ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಆಲಿಸಲು ಗೊತ್ತುಪಡಿಸಿದ ಭೋಪಾಲ್‌ನಲ್ಲಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ವರ್ಗಾಯಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್​ ತಿಳಿಸಿದ್ದಾರೆ.

ಸೆಪ್ಟೆಂಬರ್ 2017ರಲ್ಲಿ ವ್ಯಾಪಮ್ ಹಗರಣದಲ್ಲಿ, ಶ್ಯಾಮಲಾ ಹಿಲ್ಸ್ ಪೊಲೀಸರು ಭೋಪಾಲ್ ವಿಶೇಷ ನ್ಯಾಯಾಧೀಶರಾದ ಸುರೇಶ್ ಅವರ ಆದೇಶದಂತೆ ಜ್ಯೋತಿರಾದಿತ್ಯ ಸಿಂಧ್ಯಾ ದಿಗ್ವಿಜಯ ಸಿಂಗ್, ಮತ್ತು ಕಮಲ್ ನಾಥ್ ಮತ್ತು ಐಟಿ ತಜ್ಞ ಪ್ರಶಾಂತ್ ಪಾಂಡೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಗ ಸಿಂಧ್ಯಾ ಕಾಂಗ್ರೆಸ್ ಪಕ್ಷದಲ್ಲಿದ್ದರು.

ನಕಲಿ ದಾಖಲೆ ಸೃಷ್ಟಿ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಸಿಂಧ್ಯಾ ಈ ಪ್ರಕರಣವನ್ನು ನಾಮಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.