ಆಸ್ಟ್ರೇಲಿಯಾ ಪ್ರಧಾನಿ ವಾಸ್ತವ ಗಡಿ ನಿಯಂತ್ರಣ ರೇಖೆ ಹಾಗೂ ದಕ್ಷಿಣ ಚೀನಾ ಸಾಗರ ವಲಯದಲ್ಲಿ ಚೀನಾ ಪ್ರದರ್ಶಿಸುತ್ತಿರುವ ಆಕ್ರಮಣಕಾರಿ ಧೋರಣೆ ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಆಸ್ಟ್ರೇಲಿಯಾ 2016ರ ತನ್ನ ಸ್ಟ್ರಾಟೆಜಿಕ್ ಡಿಫೆನ್ಸ್ ಫ್ರೇಮ್ ವರ್ಕ್ನ್ನು ಬದಲಾಯಿಸಿದೆ. ಈ ಬದಲಾವಣೆಯ ಮೂಲ ಉದ್ದೇಶ ಈ ಸಾಗರ ಪ್ರದೇಶದಲ್ಲಿ ತನ್ನ ಆಸಕ್ತಿಗೆ ವಿರುದ್ಧವಾಗಿ ಯಾವುದೇ ಬದಲಾವಣೆ ಸಂಭವಿಸಿದರೂ ಅದಕ್ಕೆ ಸೈನ್ಯದ ಮೂಲಕ ಉತ್ತರ ನೀಡುವುದಾಗಿದೆ.
2020ರ ಸ್ಟ್ರಾಟೆಜಿಕ್ ಡಿಫೆನ್ಸ್ ಫ್ರೇಮ್‌ವರ್ಕ್ ಬಿಡುಗಡೆಗೊಳಿಸಿ ಮಾತನಾಡಿದ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, 270 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಮೊತ್ತದ ದೇಶದ ರಕ್ಷಣಾ ಬಜೆಟ್ ಘೋಷಿಸಿದ್ದಾರೆ. ಇದರಲ್ಲಿ ಮುಂದಿನ 10 ವರ್ಷಗಳ ರಕ್ಷಣಾ ಕಾರ್ಯತಂತ್ರವನ್ನು ಘೋಷಿಸಿದ್ದಾರೆ. ಇದರಲ್ಲಿ ಇದೇ ಮೊದಲ ಬಾರಿಗೆ ತನ್ನ ರಾಜಧಾನಿ ಕ್ಯಾನ್‌ಬೆರಾದಲ್ಲಿ ಭೂ ವಾಯು ಹಾಗೂ ನೌಕಾದಳದ ಮೂಲಕ ಬಳಸಬಹುದಾದ ಅತಿ ದೂರದ ಗುರಿಗಳನ್ನು ತಲುಪಬಲ್ಲ ಹಾಗೂ ಸೂಪರ್‌ಸಾನಿಕ್ ವೇಗದ ಕ್ಷಿಪಣಿ ಅಭಿವೃದ್ಧಿಯನ್ನು ಪ್ರಸ್ತಾಪಿಸಲಾಗಿದೆ. ಈ ಹೊಸ ರಕ್ಷಣಾ ನೀತಿಯ ಮುಖ್ಯಾಂಶವೆಂದರೆ ಇಂಡೋ-ಫೆಸಿಫಿಕ್ ಭಾಗದಲ್ಲಿ ಉದ್ಭವಿಸಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಆಸ್ಟ್ರೇಲಿಯಾ ತನ್ನ ಸೈನಿಕ ಬಲ ವೃದ್ಧಿಗೆ ಮುಂದಾಗಿದೆ. ನಮ್ಮ ಪ್ರದೇಶ ನಮ್ಮ ಭವಿಷ್ಯವನ್ನು ರೂಪಿಸುವುದು ಮಾತ್ರವಲ್ಲ ಜೊತೆಗೆ ಈಗಿನ ಜಾಗತಿಕ ಸ್ಪರ್ಧೆಯ ತಿರುಳನ್ನು ಕೂಡಾ ನಿರ್ಧರಿಸುತ್ತದೆ.
ಈ ಹೊಸ ನೀತಿ ಈ ಸ್ಪರ್ಧೆಯನ್ನು ನಿರ್ಧರಿಸಲಿದೆ. ಇಂಡೋ ಫೆಸಿಫಿಕ್ ಭಾಗದಲ್ಲಿ ಈಗ ಉದ್ವಿಗ್ನ ಸ್ಥಿತಿ ಆಗ್ಗಾಗ್ಗೆ ತಲೆದೋರುತ್ತಿದೆ. ಇದು ಆತಂಕದ ವಿಷಯ. ಇದಕ್ಕೆ ಉತ್ತಮ ಉದಾಹರಣೆ, ಭಾರತ-ಚೀನಾ ನಡುವಣ ಗಡಿ ವಿವಾದ. ಜೊತೆಗೆ ದಕ್ಷಿಣ ಹಾಗೂ ಪೂರ್ವ ಚೀನಾ ಸಾಗರದಲ್ಲೂ ಇಂತಹ ಸ್ಥಿತಿ ಉದ್ಭವಿಸಿದೆ. ತಪ್ಪು ಲೆಕ್ಕಾಚಾರಗಳು ಈ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತಿವೆ, ಎಂಬ ಮಾರಿಸನ್ ಮಾತುಗಳು ಸದ್ಯ ಇಡೀ ವಲಯದಲ್ಲಿ ಇರುವ ಪರಿಸ್ಥಿತಿಯನ್ನು ಸೂಚಿಸುತ್ತದೆ. "ಕಡಿಮೆ ಹಾಗೂ ತಪ್ಪು ಮಾಹಿತಿ, ವಿದೇಶಿ ಕೈವಾಡ, ಹೊಸ ತಂತ್ರಜ್ಞಾನಗಳ ಆವಿಷ್ಕಾರದ ಬಳಿಕ ಹೆಚ್ಚುತ್ತಿದೆ. ಖಂಡಿತವಾಗಿಯೂ ಉಗ್ರಗಾಮಿ ಬೆದರಿಕೆಗಳು ಕಡಿಮೆಯಾಗಿಲ್ಲ. ವಿಷಕಾರಿ ಸಿದ್ಧಾಂತಗಳು, ಸದಾ ಕಾಲ ನಮಗೆ ಅತಿ ದೊಡ್ಡ ಸವಾಲುಗಳಾಗಿ ಉಳಿದಿವೆ. ಪ್ರತಿ ದೇಶದ ಸಾರ್ವಭೌಮತೆ ಈಗ ಒತ್ತಡದಲ್ಲಿದೆ. ಇದರ ಜೊತೆಗೆ ಕಾನೂನು ಒಪ್ಪಂದಗಳು ಕೂಡಾ ಆಸ್ತಿತ್ವದ ಸವಾಲು ಎದುರಿಸುತ್ತಿವೆ," ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಚೀನಾ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನ ನಡುವಣ ಹೆಚ್ಚುತ್ತಿರುವ ಬಿಕ್ಕಟ್ಟು ಹಾಗೂ ಜಾಗತಿಕವಾಗಿ ಮೇಲುಗೈ ಸಾಧಿಸಲು ಆ ಎರಡು ದೇಶಗಳು ನಡೆಸುತ್ತಿರುವ ಪೈಪೋಟಿಯನ್ನು ಪ್ರಸ್ತಾಪಿಸಿ, ಇಂತಹ ಪರಿಸ್ಥಿತಿಯಲ್ಲಿ ಉಳಿದ ದೇಶಗಳು ಸುಮ್ಮನಿರಲು ಸಾಧ್ಯವಿಲ್ಲ ಎಂದು ಮಾರಿಸನ್ ತಿಳಿಸಿದ್ದಾರೆ. "ಈಗ ನಮ್ಮ ಕಾರ್ಯತಂತ್ರದ ಬದಲಾವಣೆ ಮಾಡಿಕೊಳ್ಳಬೇಕಿದೆ. ಕೇವಲ ಚೀನಾ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಮಾತ್ರ ಒಂದು ಪ್ರದೇಶದ ಭವಿಷ್ಯ ನಿರ್ಧರಿಸಲಾರವು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ವ್ಯಾಪಾರ ಹೂಡಿಕೆ, ಮುಕ್ತ ವ್ಯಾಪಾರ, ಸಹಕಾರ ಹೀಗೆ ಹಲವಾರು ಅಂಶಗಳು ಈ ಭಾಗದ ಬೆಳವಣಿಗೆಗೆ ಕಾರಣವಾಗಿವೆ. ಜನರ ನಡುವಣ ಸಂಬಂಧ, ಸಹಕಾರಗಳು ಈ ಪ್ರದೇಶವನ್ನು ಒಟ್ಟುಗೂಡಿಸಿದೆ. ಜಪಾನ್, ಭಾರತ, ಕೊರಿಯಾ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ವಿಯೆಟ್ನಾಂ, ಹಾಗೂ ಫೆಸಿಪಿಕ್ ಭಾಗದ ಎಲ್ಲಾ ದೇಶಗಳು ಈಗ ಒಂದು ನಿರ್ಧಾರ ಮಾಡಬೇಕಿದೆ. ಈ ಎಲ್ಲಾ ದೇಶಗಳು ಜೊತೆಗೂಡಿ, ಈ ಭಾಗದಲ್ಲಿ ಸ್ಥಿರತೆ ಕಾಪಾಡಬೇಕಿದೆ," ಎಂದು ಅವರು ತಿಳಿಸಿದರು.
"ಆಸ್ಟ್ರೇಲಿಯಾ ಕೂಡಾ ಈ ನಿಟ್ಟಿನಲ್ಲಿ ಶ್ರಮಿಸಲಿದೆ," ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಈ ಹೊಸ ರಕ್ಷಣಾ ಚೌಕಟ್ಟು, ಆಸ್ಟ್ರೇಲಿಯಾದ ಎಲ್ಲಾ ಪ್ರಮುಖ ರಕ್ಷಣಾ ಯೋಜನೆಗಳ ನೀಲಿ ನಕಾಶೆ ಹೊಂದಿದೆ. ಅವುಗಳೆಂದರೆ, ಸೈನಿಕ ಬಲ, ಸೈನ್ಯದ ವರ್ಗೀಕರಣ, ಅಂತರಾಷ್ಟ್ರೀಯ ಸಂಬಂಧ, ಸೈನಿಕ ಬಲದ ಬಳಕೆ, ಹೀಗೆ ಎಲ್ಲವನ್ನೂ ಅದು ಒಳಗೊಂಡಿದೆ. ಈ ಚೌಕಟ್ಟಿನಲ್ಲಿ ಪ್ರಸ್ತಾಪಿಸಲಾಗಿರುವ ಉಳಿದ ಅಂಶಗಳೆಂದರೆ, ಸೈನ್ಯ ಬಲದ ವೃದ್ಧಿ, ದೂರಗಾಮಿ ಗುರಿ ಆಕ್ರಮಣ ಮಾಡಬಲ್ಲ ಶಸ್ತ್ರಾಸ್ತ್ರ ಅಭಿವೃದ್ಧಿ, ಸೈಬರ್ ಬಲ ವರ್ಧನೆ ಇತ್ಯಾದಿಗಳು. ಭಾರತ, ಜಪಾನ್, ಆಮೇರಿಕಾ ಸಂಯುಕ್ತ ಸಂಸ್ಥಾನ ಒಳಗೊಂಡ, ಚತುರ್ಬಲ ರಕ್ಷಣಾ ಮಾತುಕತೆಯ ಭಾಗವಾಗಿರುವ ಆಸ್ಟ್ರೇಲಿಯಾ, ಎರಡನೇ ಮಹಾ ಯುದ್ಧದ ಬಳಿಕದ ವಿಶ್ವದ ಅತಿದೊಡ್ಡ ನೌಕಾ ಪ್ರದರ್ಶನವನ್ನು ಸದ್ಯದಲ್ಲೇ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ಐದನೇ ಪೀಳಿಗೆಯ ವಾಯು ಬಲದ ಪ್ರದರ್ಶನ ಕೂಡಾ ನಡೆಯಲಿದೆ. ಅತ್ಯಾಧುನಿಕ ಎಫ್ 35 ಯುದ್ಧ ವಿಮಾನಗಳ ಪ್ರದರ್ಶನ ಕೂಡಾ ಇದರಲ್ಲಿ ನಡೆಯಲಿದೆ. ಈ ಪ್ರದರ್ಶನದಲ್ಲಿ ಅತ್ಯಂತ ನವೀನ, ಕ್ಷಿಪಣಿ, ಯುದ್ಧ ವಿಮಾನ, ವಾಯು ದಾಳಿಯ ಶಸ್ತ್ರಾಸ್ತ್ರಗಳು, ನೌಕಾದಳ ನಾಶ ಮಾಡುವ ಶಸ್ತ್ರಾಸ್ತ್ರಗಳ ಬಳಕೆ ಹಾಗೂ ಪ್ರದರ್ಶನ ನಡೆಯಲಿದೆ. "ನಾವು ನಮ್ಮ ನೆರೆಹೊರೆಯವನ್ನು ಹೆದರಿಸುತ್ತಿಲ್ಲ ಅಥವಾ ಅವರು ಮೌನವಾಗಿರುವಂತೆ ಮಾಡುತ್ತಿಲ್ಲ. ನಾವು ಅವರ ಸಾರ್ವಭೌಮತೆಯನ್ನು ಗೌರವಿಸುತ್ತೇವೆ. ನಾವು ಇದರಲ್ಲಿ ಚಾಂಪಿಯನ್ನರು. ಅದೇ ರೀತಿ ಇತರರು ನಮ್ಮನ್ನು ಗೌರವಿಸಬೇಕು ಎಂದು ನಾವು ಅಪೇಕ್ಷಿಸುತ್ತೇವೆ. ಸೌರ್ವಭೌಮತೆ ಅಂದರೆ ಸ್ವಗೌರವ, ಸ್ವಾಭಿಮಾನ, ಆತ್ಮಗೌರವ. ನಾವು ನಾವಾಗಿರುವ ಸ್ವಾತಂತ್ರ್ಯ. ಮುಕ್ತ ಯೋಚನೆಗೆ ಅವಕಾಶ. ನಾವು ಈ ನಿಟ್ಟಿನಲ್ಲಿ ಯಾರಿಗೂ ಶರಣಾಗಲಾರೆವು," ಎಂದು ಮಾರಿಸನ್ ಕಟುಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಾರಿಸನ್ ಹೇಳಿಕೆ, ಚೀನಾ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಗುಟುರು ಹಾಕಿ ಹೆದರಿಸುತ್ತಿರುವ ಸಂದರ್ಭದಲ್ಲಿ ಬಂದಿರುವುದು ವಿಶೇಷ. ಕೊರೊನಾ ವೈರಸ್ ನ ಮೂಲದ ಬಗ್ಗೆ ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ ಈ ಎರಡೂ ದೇಶಗಳ ಜೊತೆಗಿನ ವ್ಯಾಪಾರ-ವಹಿವಾಟು ಮೇಲೆ ನಿಯಂತ್ರಣ ಹೇರಲು ಚೀನಾ ಮುಂದಾಗುತ್ತಿದೆ. ಈ ನಡುವೆ ಚೀನಾದಿಂದ ನಡೆದ ಸೈಬರ್ ಆಕ್ರಮಣದ ಬಳಿಕ, ಆಸ್ಟ್ರೇಲಿಯಾ ಸೈಬರ್ ರಕ್ಷಣಾ ಕ್ಷೇತ್ರದಲ್ಲಿ ಅತಿ ದೊಡ್ಡ ಹೂಡಿಕೆ ಘೋಷಿಸಿದೆ. ಅದು ಮುಂದಿನ ದಶಕದಲ್ಲಿ ತನ್ನ ಸೈಬರ್ ರಕ್ಷಣೆಗೆ 1.31 ಬಿಲಿಯನ್ ಅಮೇರಿಕನ್ ಡಾಲರ್ ಹೂಡಿಕೆ ಘೋಷಿಸಿದೆ. ನಾವು ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಬದುಕುತ್ತಿದ್ದೇವೆ. ನಾವು ಮುಕ್ತ ಹಾಗೂ ಸಾರ್ವಭೌಮ ದೇಶ. ನಾವು ದೊಡ್ಡ ಹಾಗೂ ಚಿಕ್ಕ ರಾಷ್ಟ್ರಗಳ ಗೊಂಚಲನ್ನು ಈ ಭಾಗದಲ್ಲಿ ಹೊಂದಿದ್ದೇವೆ. ನಾವು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಎಲ್ಲರ ಒಕ್ಕೂಟ ರಚಿಸಲು ಬದ್ದರಾಗಿದ್ದೇವೆ ಎನ್ನುತ್ತಾರೆ ಮಾರಿಸನ್.
ಈ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವರ್ಚುವಲ್ ಶೃಂಗ ಸಭೆ ನಡೆಸಿ, ರಕ್ಷಣಾ ಒಪ್ಪಂದ ಘೋಷಿಸುವ ಮೂಲಕ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಎಚ್ಚರಿಕೆಯ ಸಂದೇಶವನ್ನು ಚೀನಾಗೆ ಕಳುಹಿಸಿದ್ದಾರೆ.