ಹೈದರಾಬಾದ್: ಸಾರ್ವಜನಿಕ ಸಾರಿಗೆಗೆ ಷರತ್ತುಬದ್ಧ ಅನುಮತಿ ಸೇರಿದಂತೆ, ಹೊಸ ಮಾರ್ಗಸೂಚಿಗಳೊಂದಿಗೆ ರಾಜ್ಯದಲ್ಲಿ ಕೋವಿಡ್-19 ಲಾಕ್ ಡೌನ್ ಮೇ 31ರವರೆಗೆ ವಿಸ್ತರಣೆಯಾಗಲಿದೆ ಎಂದು ತೆಲಂಗಾಣ ಸರ್ಕಾರ ಪ್ರಕಟಿಸಿದೆ.
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಈ ಘೋಷಣೆ ಮಾಡಿದ್ದು, ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ವಿಸ್ತರಣೆ ಅಗತ್ಯ ಎಂದರು.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ, ಉಳಿದ ಭಾಗಗಳಲ್ಲಿ ಲಾಕ್ ಡೌನ್ ವಿಶ್ರಾಂತಿಗೆ ಅನುಮತಿ ನೀಡಲಾಗಿದೆ. ಕೆಲವು ಷರತ್ತುಗಳೊಂದಿಗೆ ಸಾರ್ವಜನಿಕ ಸಾರಿಗೆಗೂ ಅನುಮತಿ ನೀಡಲಾಗಿದೆ.