ETV Bharat / bharat

ಉದ್ಯೋಗಕ್ಕಾಗಿ ಶೇ 30ರಷ್ಟು ಸ್ಪರ್ಧೆ ಹೆಚ್ಚಳ: ಲಿಂಕ್ಡ್​ ಇನ್ ಮಾಹಿತಿ - ಉದ್ಯೋಗ ನೇಮಕಾತಿಯಲ್ಲಿ ಚೇತರಿಕೆ

ಕೊರೊನಾ ನಂತರದಲ್ಲಿ ಉದ್ಯೋಗಕ್ಕಾಗಿ ಸ್ಪರ್ಧೆ ಹೆಚ್ಚಾಗಿದ್ದು, ಶೇಕಡಾ 30ರಷ್ಟು ಏರಿಕೆ ಕಂಡಿದೆ ಎಂದು ಲಿಂಕ್ಡ್​ ಇನ್ ಮಾಹಿತಿ ಬಹಿರಂಗಪಡಿಸಿದೆ.

LinkedIn data
ಲಿಂಕ್ಡ್​ ಇನ್
author img

By

Published : Oct 29, 2020, 4:55 PM IST

ಬೆಂಗಳೂರು: ದೇಶದಲ್ಲಿ ಉದ್ಯೋಗಕ್ಕಾಗಿ ಶೇಕಡಾ 30ರಷ್ಟು ಸ್ಪರ್ಧೆ ಹೆಚ್ಚಾಗಿದೆ ಎಂದು ಲಿಂಕ್ಡ್​ ಇನ್ ಲೇಬರ್ ಮಾರ್ಕೆಟ್​ ಡಾಟಾ ಮಾಹಿತಿ ನೀಡಿದ್ದು, ಉದ್ಯೋಗಿಗಳ ನೇಮಕದಲ್ಲಿ ವಾರ್ಷಿಕವಾಗಿ ಶೇಕಡಾ 12ರಷ್ಟು ಹೆಚ್ಚಳ ಕಂಡಿದೆ ಎಂದು ಮಾಹಿತಿ ಬಹಿರಂಗಪಡಿಸಿದೆ.

ಮನರಂಜನೆ ಮತ್ತು ಪ್ರಯಾಣ, ಚಿಲ್ಲರೆ ವ್ಯಾಪಾರ ಮತ್ತು ಕಾರ್ಪೊರೇಟ್ ಸೇವೆಗಳಲ್ಲಿ ಕೆಲಸ ಮಾಡುವವರು ತಮ್ಮ ಉದ್ಯಮದಿಂದ ಹೊರಗೆ ಕೆಲಸಗಳನ್ನು ಹುಡುಕುತ್ತಿದ್ದಾರೆ ಎಂದೂ ಲಿಂಕ್ಡ್​ ಇನ್ ತನ್ನ ವರದಿ ಬಹಿರಂಗಪಡಿಸಿದೆ.

ಮನರಂಜನಾ ಹಾಗೂ ಸಾರಿಗೆ ಉದ್ಯಮದಲ್ಲಿರುವ ಉದ್ಯೋಗಿಗಳು 3.8, ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿರುವ ಉದ್ಯೋಗಿಗಳು 1.5 ಹಾಗೂ ಕಾರ್ಪೋರೇಟ್ ವಲಯದಲ್ಲಿರುವ ಉದ್ಯೋಗಿಗಳು 1.4 ಬಾರಿಯಷ್ಟು ತಮ್ಮ ಕ್ಷೇತ್ರದ ಮೂಲವೃತ್ತಿಯ ಹೊರಗೆ ಉದ್ಯೋಗವನ್ನು ಹುಡುಕುತ್ತಾರೆ ಎಂದು ಲಿಂಕ್ಡ್​ ಇನ್​ ಹೇಳಿದೆ.

ಭಾರತದಲ್ಲಿ ಸದ್ಯಕ್ಕೆ ಪ್ರೋಗ್ರಾಮಿಂಗ್ ಲಾಂಗ್ವೇಜ್ ಆದ 'ಪೈತಾನ್'ನಲ್ಲಿ ಅತಿ ಹೆಚ್ಚು ಮಂದಿ ಕೌಶಲ್ಯ ಬೆಳೆಸಿಕೊಳ್ಳುತ್ತಿದ್ದು, ಇದಾದ ನಂತರ ಮಷಿನ್ ಲಾಂಗ್ವೇಜ್, ಡಾಟಾ ವಿನ್ಯಾಸ, ಡಿಜಿಟಲ್ ಮಾರ್ಕೆಟಿಂಗ್, ಹೆಚ್​​ಟಿಎಂಎಲ್ 5ರಲ್ಲಿ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ ಎಂದು ಲಿಂಕ್ಡ್​ ಇನ್​ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.