ನವದೆಹಲಿ: ಪ್ರಸ್ತುತ ವಿದ್ಯಾರ್ಥಿಗಳಿಗೆ ಆಗಸ್ಟ್ನಲ್ಲಿ ಮತ್ತು ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ನಲ್ಲಿ ಕಾಲೇಜು ಬೋಧನೆ ಆರಂಭವಾಗಲಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೇಳಿದೆ.
ಕೋವಿಡ್-19 ಬಿಕ್ಕಟ್ಟು ಮತ್ತು ನಂತರದ ಲಾಕ್ಡೌನ್ ದೃಷ್ಟಿಯಲ್ಲಿ ಇರಿಸಿಕೊಂಡು, ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ನ ಮಾರ್ಗಸೂಚಿಗಳನ್ನು ಯುಜಿಸಿ ವಿವರಿಸಿದೆ. ಜುಲೈ ತಿಂಗಳಲ್ಲಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಗುತ್ತದೆ ಎಂದಿದೆ.
ಇಂಟರ್ ಮಿಡಿಯೆಟ್ ವಿದ್ಯಾರ್ಥಿಗಳನ್ನು ಈಗಿನ ಮತ್ತು ಹಿಂದಿನ ಸೆಮಿಸ್ಟರ್ನ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಶ್ರೇಣೀಕರಿಸಲಾಗುವುದು. ಕೋವಿಡ್-19 ಪರಿಸ್ಥಿತಿ ಹತೋಟಿಗೆ ಬಂದ ರಾಜ್ಯಗಳಲ್ಲಿ ಜುಲೈ ತಿಂಗಳಿನಲ್ಲಿ ಪರೀಕ್ಷೆಗಳು ನಡೆಯಲಿವೆ. ಟರ್ಮಿನಲ್ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಜುಲೈ ಮಾಸಿಕದಲ್ಲಿ ಪರೀಕ್ಷೆ ನಡೆಸಬಹುದು ಎಂದು ಹೇಳಿದೆ.
ವಿಶ್ವವಿದ್ಯಾಲಯಗಳು ಆರು ದಿನಗಳ ವಾರದ ಮಾದರಿಯನ್ನು ಅನುಸರಿಸಬಹುದು. ಲಾಕ್ಡೌನ್ ಅವಧಿಯಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪ್ರವಾಸದ ಇತಿಹಾಸ ಅಥವಾ ಉಳಿದುಕೊಳ್ಳುವ ಮಾಹಿತಿ ಇರಿಸಿಕೊಳ್ಳಬೇಕು. ಎಂಫಿಲ್, ಪಿಎಚ್ಡಿ ವಿದ್ಯಾರ್ಥಿಗಳಿಗೆ 6 ತಿಂಗಳ ಅವಧಿಯನ್ನು ವಿಸ್ತರಿಸಿದೆ. ವೈವಾ-ವಾಯ್ಸ್ ಅನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ ಎಂದು ತಿಳಿಸಿದೆ.